CONNECT WITH US  

ನಿಜವಾದ ಸಮಾಜವಾದಿ ಪಕ್ಷ ಯಾರದ್ದು? ಸೈಕಲ್‌ ರೇಸ್‌ನಲ್ಲಿ ನಿರ್ಧಾರ!

ನವದೆಹಲಿ: ಸಮಾಜವಾದಿ ಪಕ್ಷದ ಒಳಜಗಳ ತಾರಕಕ್ಕೇರಿದ್ದು, ನಮ್ಮದೇ ನಿಜವಾದ ಪಕ್ಷ ಎಂದು
ತಂದೆ ಮುಲಾಯಂ ಸಿಂಗ್‌ ಯಾದವ್‌, ಪುತ್ರ ಅಖಿಲೇಶ್‌ ಸಿಂಗ್‌ ಯಾದವ್‌ ಬಡಿದಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿಜವಾದ ಸಮಾಜವಾದಿ ಪಕ್ಷ ಯಾರದ್ದು? ಯಾವ ಬಣಕ್ಕೆ ಸಮಾಜವಾದಿ ಪಕ್ಷದಿಂದ ಚುನಾಯಿತ ಸದಸ್ಯರ ಬೆಂಬಲವಿದೆ ಎಂದು ತಿಳಿಯಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ. ಇದಕ್ಕಾಗಿ ಎರಡೂ ಬಣಗಳಿಗೆ, ವೇಗದ ಸೈಕಲ್‌ ರೇಸ್‌ ಮತ್ತು ನಿಧಾನ ಸೈಕಲ್‌ ರೇಸ್‌ಗಳನ್ನು ನಡೆಸಲು ತೀರ್ಮಾನಿಸಲಾಗಿದೆ. 120 ಕಿ.ಮೀ.ಗಳ ವೇಗದ ಸೈಕಲ್‌ ರೇಸ್‌ ನಡೆಯಲಿದ್ದು, ಕೇವಲ 10 ನಿಮಿಷ ವಿರಾಮದೊಂದಿಗೆ ಗುರಿ ತಲುಪಬೇಕು. ಲಕ್ನೋದಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಗೆದ್ದವರಿಗೆ ಮುಂದಿನ ಚುನಾವಣೆಯಲ್ಲಿ ಪಕ್ಷದ ಚಿಹ್ನೆ, ಹೆಸರಿನಡಿ ಸ್ಪರ್ಧಿಸಲು
ಅನುವು ಮಾಡಿಕೊಡಲಾಗುವುದು ಎಂದು ಗೊತ್ತಾಗಿದೆ.

Tags: 

Trending videos

Back to Top