CONNECT WITH US  

ದಾರ್ಶನಿಕರನ್ನು ಯಾವುದೇ ಜಾತಿಗೆ ಸೀಮಿತಗೊಳಿಸಬೇಡಿ

ಬ್ಯಾಡಗಿ: ಮಹಾಪುರುಷರ ಜಯಂತಿ ಆಚರಿಸುವುದು ಯಾರನ್ನೋ ತೃಪ್ತಿಪಡಿಸುವುದಕ್ಕಲ್ಲ. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಯ ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಎಂದು ತಹಶೀಲ್ದಾರ ಶಿವಶಂಕರ ನಾಯಕ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸ್ಥಳೀಯ ಎಸ್‌ಜೆಜೆಎಂ ಆವರಣದಲ್ಲಿ ಆಯೋಜಿಸಿದ್ದ ಗುರು ಸಿದ್ಧರಾಮೇಶ್ವರರ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಶರಣರನ್ನು ದಾರ್ಶನಿಕರನ್ನು ಯಾವುದೇ ಸಮಾಜಕ್ಕೆ ಸೀಮಿತಗೊಳಿಸಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರಬೇಡಿ. ಕರ್ಮಯೋಗಿ ಸಿದ್ಧರಾಮೇಶ್ವರ ಸಮಾನತೆಯ ಕ್ರಾಂತಿ ಸಾರಿದ್ದಲ್ಲದೇ ಭಕ್ತಿ ಮತ್ತು ಜ್ಞಾನಯೋಗಗಳ ನೆಲೆಯನ್ನು ಸ್ಥಾಪಿಸಿದ್ದಾರೆ ಎಂದರು.

ಬಸವಾದಿ ಶರಣರು ಕಳೆದ 12ನೇ ಶತಮಾನದಲ್ಲಿಯೇ ಸಮಾಜದಲ್ಲಿನ ಮೌಡ್ಯಗಳನ್ನು ತೊಡೆದು ಹಾಕಲು ಸಾಮಾಜಿಕ ಕ್ರಾಂತಿಯನ್ನು ಸೃಷ್ಟಿಸಿದ್ದಾರೆ. ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಎಲ್ಲರಿಗೂ ತಿಳಿಯವಂತಹ ವಚನ ಸಾಹಿತ್ಯದ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು.
ಅತಿಥಿ ಉಪನ್ಯಾಸ ನೀಡಿದ ಎನ್‌.ಡಿ. ಮಾಚೇನಹಳ್ಳಿ, ಕಾಯಕಯೋಗಿಯಾಗಿ ಸಿದ್ಧರಾಮೇಶ್ವರರು ನಾಡಿಗೆ ಅಮೂಲ್ಯಸೇವೆ ಸಲ್ಲಿಸಿ ಪ್ರಸ್ತುತ ಸಮಾಜಕ್ಕೆ ಆದರ್ಶವಾಗಿದೆ. ಸ್ವತ: ಅವರೇ ಕೆರೆಕಟ್ಟೆಗಳನ್ನು ನಿರ್ಮಿಸುವ ಮೂಲಕ ಶರಣ ಸಂಸ್ಕೃತಿಗೆ ಹೊಸ ಮೈಲಗಲ್ಲು ಸೃಷ್ಟಿಸಿದ್ದಾರೆ ಎಂದರು.

ವಿಶ್ವದಲ್ಲೇ ಶ್ರೇಷ್ಠವಾದ ಸಂಸ್ಕೃತಿಯನ್ನು ಭಾರತ ಹೊಂದಿದೆಆಚಾರ, ವಿಚಾರ, ವಿಭಿನ್ನ ಸಂಸ್ಕಾರಗಳ ಮೂಲಕ ತನ್ನದೇ ಪ್ರಭಾವ ಬೀರಿದೆ. ಶರಣ ಸಂಸ್ಕೃತಿಯನ್ನು ಎಲ್ಲ ದೇಶಗಳು ಮೆಚ್ಚಿಕೊಂಡಿದ್ದು, ಅವುಗಳನ್ನು ಹೊರತುಪಡಿಸಿ ಉತ್ತಮ ಸಮಾಜ ನಿರ್ಮಾಣ ಅಸಾಧ್ಯವೆಂದರು.

ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದಾವಣಗೇರಿ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷೆ ಸುಧಾ ಕಳ್ಳಿಹಾಳ, ಜಿಪಂ ಸದಸ್ಯರಾದ ಶಂಕ್ರಣ್ಣ ಮಾತನವರ, ಗದಿಗೆಮ್ಮ ಬಸನಗೌಡ್ರ, ತಾಪಂ ಅಧ್ಯಕ್ಷೆ ಚಮನ್‌ಬಿ ಮುಲ್ಲಾ, ಉಪಾಧ್ಯಕ್ಷೆ ಗಿರಿಜಮ್ಮ ಮೆಣಸಿನಹಾಳ, ನಿವೃತ್ತ ಪ್ರಾಚಾರ್ಯ ಎಸ್‌.ಬಿ. ತವರದ, ಪುರಸಭೆ ಸದಸ್ಯರಾದ ಎಂ.ಎಚ್‌. ಶೆಟ್ಟರ, ದುಗೇìಶ ಗೋಣೆಮ್ಮನವರ, ಮಂಜುನಾಥ ಭೋವಿ, ನಜೀರಹ್ಮದ್‌ ಶೇಖ, ತಾಪಂ ಮಾಜಿ ಅಧ್ಯಕ್ಷ ಜಯಣ್ಣ ಮಲ್ಲಿಗಾರ, ಪುರಸಭೆ ಮುಖ್ಯಾಧಿಧಿಕಾರಿ ಜಿ.ಟಿ. ವೀರೇಶಕುಮಾರ, ಪ್ರಾ| ಬಸವರಾಜಪ್ಪ, ಭೋವಿ (ವಡ್ಡರ) ಸಮಾಜದ ಜಿಲ್ಲಾಧ್ಯಕ್ಷ ರವಿ ಪೂಜಾರ, ಬೀರಪ್ಪ ಬಣಕಾರ ಇತರರಿದ್ದರು.

Trending videos

Back to Top