CONNECT WITH US  

ಕೆನಡಾ ಸಮ್ಮೇಳನದ ಪತ್ರಿಕಾಗೋಷ್ಠಿ:ಪತ್ರಕರ್ತ ರೋನ್ಸ್‌ಬಂಟ್ವಾಳ್‌ ಆಯ್ಕೆ

ಮುಂಬಯಿ: ಕನ್ನಡ ಕಸ್ತೂರಿ ಟೊರೊಂಟೋ, ಬಿ. ವಿ. ನಾಗ್‌ ಕಮ್ಯೂನಿಕೇಷನ್‌ ಇನ್‌ಕಾರ್ಪೊರೇಶನ್‌ ಕೆನಡಾ ಸಂಸ್ಥೆಗಳ ಸಹಯೋಗದೊಂದಿಗೆ ಕೆನಡಾದ ಟೊರೊಂಟೋದಲ್ಲಿ ಜೂ. 27 ಮತ್ತು 28ರಂದು ನಡೆಯುವ 11ನೇ ವಿಶ್ವಕನ್ನಡ ಸಂಸ್ಕƒತಿ ಸಮ್ಮೇಳನದಲ್ಲಿ ನಡೆಯಲಿರುವ  ಪತ್ರಿಕಾಗೋಷ್ಠಿಗೆ ಮುಂಬಯಿ ಪ್ರತಿನಿಧಿಯಾಗಿ  ಕನ್ನಡಿಗ ಪತ್ರಕರ್ತರ ಸಂಘ  ಮಹಾರಾಷ್ಟ್ರ ಇದರ ಗೌ| ಪ್ರಧಾನ ಕಾರ್ಯದರ್ಶಿ ರೋನ್ಸ್‌ ಬಂಟ್ವಾಳ್‌ ಆಯ್ಕೆಯಾಗಿದ್ದಾರೆ.

ಕೆನಡಾ ರಾಷ್ಟ್ರದ ಟೊರೋಂಟೋ ನಗರದ ಗ್ರಾÂಂಡ್‌ ವಿಕ್ಟೋರಿಯನ್‌ ಕನ್ವೆನ್ಶ‌ನ್‌ ಸೆಂಟರ್‌ನಲ್ಲಿ ಸಮ್ಮೇಳನ ಅಂಗವಾಗಿ ಜೂ. 28ರಂದು ಆಯೋಜಿಸಿರುವ "ಅನಿವಾಸಿ ಕನ್ನಡಿಗರು, ಕನ್ನಡ ಪಾಲನೆ ಮತ್ತು ಮಾಧ್ಯಮದ ಪಾತ್ರ' ವಿಷಯದಲ್ಲಿ ನಡೆಯಲಿರುವ ಗೋಷ್ಠಿಯಲ್ಲಿ ರೋನ್ಸ್‌  ವಿಚಾರ ಮಂಡಿಸಲಿದ್ದಾರೆ. 

ಪತ್ರಕರ್ತ ವಿಶ್ವೇಶ್ವರ ಭಟ್‌ ಬೆಂಗಳೂರು ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸ್‌ ಕ್ಲಬ್‌ ಆಫ್‌ ಬೆಂಗಳೂರು ಇದರ ಮಾಜಿ ಅಧ್ಯಕ್ಷ ಇ. ವಿ. ಸತ್ಯನಾರಾಯಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಕಾರ್ಯದರ್ಶಿ ಡಾ| ಮುರಳೀಧರ್‌, ಸತೀಶ್‌ ವೆಂಕಟರಮಣ ದುಬೈ ಅವರು ಭಾಗವಹಿಸಲಿದ್ದಾರೆ.

Trending videos

Back to Top