CONNECT WITH US  

ಹಡಗಿನಲ್ಲಿ ಬೆಂಕಿ: ತಪ್ಪಿದ ಅಪಾಯ

ಮಂಗಳೂರು: ನವಮಂಗಳೂರು ಬಂದರು ಮಂಡಳಿಯಲ್ಲಿ ಇಂಡೊನೇಶಿಯಾದಿಂದ ಕಲ್ಲಿದ್ದಲು ತಂದು ಇಳಿಸುತ್ತಿದ್ದ ಕೊರಿಯಾದ ಹಡಗಿನ ತೈಲ ಪೈಪ್‌ನಲ್ಲಿ ಶುಕ್ರವಾರ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.

14 ನೇ ಬರ್ತ್‌ನಲ್ಲಿ ಲಂಗರು ಹಾಕಿದ್ದ ಹಡಗಿನ 6 ನೇ ಕಂಪಾರ್ಟ್‌ಮೆಂಟ್‌ನಿಂದ ಕ್ರೇನ್‌ ಮೂಲಕ ಕಲ್ಲಿದ್ದಲು ಇಳಿಸುತ್ತಿದ್ದಾಗ ತೈಲ ಜಿಡ್ಡಿನ ಕೊಳವೆಯಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಬಂದರಿಗೆ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸಿದರು. ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಬಂದರಿನ ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಲಿದ್ದಲು ಇಳಿಸುತ್ತಿದ್ದಾಗ ಸಾಕಷ್ಟು ನೀರನ್ನು ಹಾಯಿಸಲಾಗುತ್ತಿದ್ದರೂ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದಿದ್ದಾರೆ.

ಹಡಗಿನಲ್ಲಿ ಒಟ್ಟು 1,10,000 ಟನ್‌ ಕಲ್ಲಿದ್ದಲು ಇದ್ದು, ಈ ಪೈಕಿ 34,000 ಟನ್‌ ಕಲ್ಲಿದ್ದಲು ಇಳಿಸಿಯಾದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

Trending videos

Back to Top