CONNECT WITH US  

ಕೃಷಿ ಸಾಲ ಮನ್ನಾ ಆಗ್ರಹಿಸಿ ವಿಪಕ್ಷಗಳಿಂದ ತೆಲಂಗಾಣ ಬಂದ್‌ ಆರಂಭ

ಹೈದರಾಬಾದ್‌: ಟಿಆರ್‌ಎಸ್‌ ಸರಕಾರ ಕೃಷಿ ಸಾಲವನ್ನು ಹಲವು ಹಂತಗಳಲ್ಲಿ ಮನ್ನಾ ಮಾಡುವ ಬದಲು ತಾನು ಈ ಹಿಂದೆ ಕೊಟ್ಟಿದ್ದ ಭರವಸೆಯ ಪ್ರಕಾರ ಒಂದೇ ಬಾರಿಗೆ ಮನ್ನಾ ಮಾಡಬೇಕೆಂದು ಒತ್ತಾಯಿಸಿ ವಿರೋಧ ಪಕ್ಷಗಳಾದ ಕಾಂಗ್ರೆಸ್‌, ಟಿಡಿಪಿ, ಬಿಜೆಪಿ ಮತ್ತು ಇತರ ಪಕ್ಷಗಳು ನೀಡಿರುವ ಕರೆಯನ್ವಯ ಇಂದು ಶನಿವಾರ ತೆಲಂಗಾಣ ಬಂದ್‌ ಆರಂಭವಾಗಿದೆ.

ಕಾಂಗ್ರೆಸ್‌, ಟಿಡಿಪಿ, ಬಿಜೆಪಿ ಮತ್ತು ಎಡ ಪಕ್ಷಗಳ ಹಿರಿಯ ನಾಯಕರು ಇಂದು ಬೆಳಗ್ಗೆ ವಿವಿಧ ಸರಕಾರಿ ಬಸ್‌ ನಿಲ್ದಾಣಗಳಲ್ಲಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ರಸ್ತೆಗೆ ಇಳಿಯದಂತೆ ತಡೆ ಒಡ್ಡಿ ಬಂಧನಕ್ಕೆ ಗುರಿಯಾದರು.

ನಗರದ ಜೆಬಿಎಸ್‌ ಬಸ್‌ ನಿಲ್ದಾಣದಲ್ಲಿ ಈ ರೀತಿಯ ಬಸ್‌ ತಡೆ ಪ್ರತಿಭಟನೆಗೆ ಇಳಿದ ಟಿಡಿಪಿ, ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರನ್ನು ಹಾಗೂ ಇನ್ನೂರಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು ಎಂದು ಟಿಡಿಪಿ ಹೇಳಿದೆ.
 


Trending videos

Back to Top