CONNECT WITH US  

ಅಪೂರ್ವ ಸಾಲುಗಳು: ರವಿಚಂದ್ರನ್‌ ಸಿನಿಮಾದ ಪ್ರಚಾರ ಶುರು

ಅಪೂರ್ವ ಚಿತ್ರದ ಕಥೆಯ ಎಳೆಯೊಂದನ್ನು ಬಿಟ್ಟು ಮಿಕ್ಕಿದ್ದೆಲ್ಲವನ್ನೂ ಗೌಪ್ಯವಾಗಿಟ್ಟಿದ್ದರು ರವಿಚಂದ್ರನ್‌. ಅಪೂರ್ವ ಎಂಬುದು ಚಿತ್ರದ ನಾಯಕಿಯ ಹೆಸರು ಮತ್ತು ಅವಳು ಮೈಸೂರಿನವಳು ಎಂಬುದನ್ನು ಬಿಟ್ಟರೆ ಆಕೆಯನ್ನು ತೋರಿಸಿರಲಿಲ್ಲ ರವಿಚಂದ್ರನ್‌.

ಈಗ ಅವರು ತಮ್ಮ "ಅಪೂರ್ವ' ಚಿತ್ರದ ನಾಯಕಿ ಅಪೂರ್ವಳ ಮುಖವನ್ನು ಕೊನೆಗೂ ತೋರಿಸಿದ್ದಾರೆ. ಅಷ್ಟೇ ಅಲ್ಲ, ಆಕೆಯ ಚಿತ್ರಗಳನ್ನೂ ಬಿಡುಗಡೆ ಮಾಡಿದ್ದಾರೆ. ಈ ಚಿತ್ರಗಳಲ್ಲಿ ಅವರು ನಾಯಕಿಯ ಮುಖವನ್ನು ಮಾತ್ರ ತೋರಿಸಿಲ್ಲ, ಅದರ ಜೊತೆಗೆ ಪ್ರೀತಿಯ ಕುರಿತಾಗಿ ಒಂದಿಷ್ಟು ಫಿಲಾಸಫಿಗಳನ್ನು ಬಿಚ್ಚಿಟ್ಟಿದ್ದಾರೆ. ಇದರಲ್ಲೇ ಅವರ ಚಿತ್ರದ ಕಥೆ ಅಡಗಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ರವಿಚಂದ್ರನ್‌ ತಮ್ಮ ಚಿತ್ರದ ಕಥೆಯನ್ನು ಸಕ್ಷ್ಮವಾಗಿ ಒಂದಿಷ್ಟು ಸಾಲುಗಳಲ್ಲಿ ಬಿಚ್ಚಿಡುವುದಕ್ಕೆ ಪ್ರಯತ್ನಿಸಿದ್ದಾರೆ. ಇದಕ್ಕೆ ಉದಾಹರಣೆ ಹೀಗಿದೆ:

ಏನಿದು ಯಾಕಿದು ಯೋಚಿಸಲಾಗದು ಈ ಪ್ರೀತಿ ನಿಯಮ
ಪ್ರೀತಿಗೆ ಬಿದ್ದರೆ ಪ್ರಪಂಚವು ಒಪ್ಪದು
'ಈಛಿಚಠಿಜ' ಚ rಛಿಚsಟn ಠಿಟ lಟvಛಿ; 'lಟvಛಿ' ಚ rಛಿಚsಟn ಠಿಟ ಛಜಿಛಿ
ಕಣ್ಣಲ್ಲಿ ನೂರಾರು ಕಥೆಗಳು ಅಡಗಿದೆ
ಪ್ರಪಂಚವು ಕಾಣದು ಪ್ರೀತಿಗೆ ಬಿದ್ದರೆ
ಇಂತಹ ಸೂಕ್ಷ್ಮ ಸಾಲುಗಳಿರುವ ಚಿತ್ರಗಳನ್ನು ರವಿಚಂದ್ರನ್‌ ಬಿಟ್ಟಿದ್ದಾರೆ. ಈ ಮೂಲಕ ಚಿತ್ರವು ಬಿಡುಗಡೆಯಾಗುವುದಕ್ಕೆ ಸಿದ್ಧತೆ ನಡೆದಿದೆ ಎಂಬ ಕ್ಲೂ ಕೊಟ್ಟಿದ್ದಾರೆ. ಮೂಲಗಳ ಪ್ರಕಾರ, ಸಂಕ್ರಾಂತಿ ಹಬ್ಬಕ್ಕೆ "ಅಪೂರ್ವ' ಚಿತ್ರದ ಹಾಡುಗಳು ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರದ ಹಾಡುಗಳು ಬಿಡುಗಡೆ ಸಮಾರಂಭ ಮುಂದಕ್ಕೆ ಹೋಗಿದೆ. ಈ ಮಧ್ಯೆ ರವಿಚಂದ್ರನ್‌ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸುವ ನಿಟ್ಟಿನಲ್ಲಿ ಒಂದಿಷ್ಟು ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಹಾಡುಗಳು ಬಿಡುಗಡೆಯಾಗುವವರೆಗೂ ಈ ಫೋಟೋಗಳು ನಿಮ್ಮ ಜೊತೆಗಿರಲಿ.

Trending videos

Back to Top