CONNECT WITH US  

ಶಂಕರಿ ಜಾತ್ರೆಲಿ ರುಚಿರುಚಿ ಊಟ!

ಬಾದಾಮಿ: ಉತ್ತರ ಕರ್ನಾಟಕದಲ್ಲೇ ಸುಪ್ರಸಿದ್ಧವಾದ ಹಾಗೂ ನಿರಂತರವಾಗಿ ಒಂದು ತಿಂಗಳವರೆಗೆ ನಡೆಯುವ ಸುಕ್ಷೇತ್ರ ಬನಶಂಕರಿ ಜಾತ್ರೆಯಲ್ಲಿ ಸಿಗುವ ರೊಟ್ಟಿ ಊಟ ವಿಶಿಷ್ಟವಾದದ್ದು. ಬನಶಂಕರಿ ದೇವಸ್ಥಾನ ಪ್ರವೇಶಿಸುವ ಪೂರ್ವದಲ್ಲಿ ರೊಟ್ಟಿ ನೀಡುವ ಅನ್ನಪೂರ್ಣೆಯರು ಕಾಣ ಸಿಗುತ್ತಾರೆ. "ಅಣ್ಣೋರ ಹೊಟ್ಟೆ ತುಂಬ ಊಟ ಮಾಡಿ ದೇವರ ದರ್ಶನ ತಗೋರಿ..' ರೊಟ್ಟಿ, ಮೂರು ತರಹ ಪಲೆ, ಚಟ್ನಿ, ಮೊಸರು ಎಲ್ಲ ಇದೆ ಎಂಬ ಮಾತು ಹೇಳುತ್ತಾ ತಮ್ಮ ಕಡೆಗೆ ಊಟ ಮಾಡುವ ಹಾಗೆ ಮನವೊಲಿಸುತ್ತಾರೆ.

ಬಾದಾಮಿ ಸುತ್ತಮುತ್ತಲಿನ ಚೊಳಚಗುಡ್ಡ, ಖ್ಯಾಡ, ಕಿತ್ತಲಿ ಗ್ರಾಮದ ಮಹಿಳೆಯರು ಬೆಳಗ್ಗೆಯಿಂದ ಸಂಜೆಯವರೆಗೆ ವ್ಯಾಪಾರ ನಡೆಸುತ್ತಾರೆ. ಒಂದು ಪುಟ್ಟಿಯಲ್ಲಿ ಬಿಳಿಜೋಳ ರೊಟ್ಟಿ, ಸಜ್ಜೆ ರೊಟ್ಟಿ, ಮೊಸರಿನ ಗಡಿಗೆ, ಗುರೆಳ್ಳು ಚಟ್ನಿ, ಕಡ್ಲಿ ಚಟ್ನಿ ಸೇರಿದಂತೆ 3-4 ತರಹದ ಪಲೆÂ ತೆಗೆದುಕೊಂಡು ಬರುತ್ತಾರೆ. ಕಡಿಮೆ ಬೆಲೆಯಲ್ಲಿ (20 ರೂ.) ಬನಶಂಕರಿ ದೇವಸ್ಥಾನಕ್ಕೆ ಬರುವ ಹೊಂಡದ ಸುತ್ತಮುತ್ತಲಿನ ಭಕ್ತಾಧಿದಿಗಳಿಗೆ ಊಟವನ್ನು ಬಡಿಸುತ್ತಾರೆ. ಜಾತ್ರೆಗೆ ಬಂದ ಭಕ್ತಾದಿಗಳು ತಪ್ಪದೇ ರೊಟ್ಟಿ ಊಟ ಸವಿದು ಹೋಗುತ್ತಾರೆ.
 

Trending videos

Back to Top