CONNECT WITH US  

ಬಾದಾಮಿ ಸೇರಿ 12 ಪಾರಂಪರಿಕ ಸ್ಥಳದ ಪುನರುತ್ಥಾನಕ್ಕೆ 500 ಕೋಟಿ

ನವದೆಹಲಿ: ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಸಂರಕ್ಷಿಸುವ ಹಾಗೂ ಪುನರುತ್ಥಾನಗೊಳಿಸುವ ದೃಷ್ಟಿಯಿಂದ ಕರ್ನಾಟಕದ ಬಾದಾಮಿ ಸೇರಿದಂತೆ 12 ಪಾರಂಪರಿಕ ನಗರಗಳ ಅಭಿವೃದ್ಧಿಗಾಗಿ 500 ಕೋಟಿ ರೂ ಮೌಲ್ಯದ ಯೋಜನೆಯನ್ನು ಕೇಂದ್ರ ಸರ್ಕಾರ ಲೋರ್ಕಾಪಣೆಗೊಳಿಸಿತು.

ಸಾಂಸ್ಕೃತಿಕ ಪರಂಪರೆ ಹಾಗೂ ಪೂರ್ವಜರ ಕೊಡುಗೆಗಳನ್ನು ಕಡೆಗಣಿಸಿ ಯಾವುದೇ ದೇಶ ಮುಂದುವರೆಯುವುದು ಅಸಾಧ್ಯ. ಅದರಲ್ಲೂ ಭಾರತ ವಿವಿಧ ಭಾಷೆಗಳು, ಧರ್ಮಗಳ ನೆಲೆವೀಡು. ಆದಕಾರಣ ಸಾಂಸ್ಕೃತಿಕ ಪರಂಪರೆಯ ಆತ್ಮದಂತಿರುವ ಈ ನಗರಗಳ ಸಂರಕ್ಷಣೆಗಾಗಿ ಹೆರಿಟೇಜ್‌ ಡೆವಲಪ್‌ಮೆಂಟ್‌ ಅಂಡ್‌ ಅಗ್‌ಮೆಂಟೇಷನ್‌ ಯೋಜನ್‌ (ಹರಿಡೇ)ಯನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ® ಸಚಿವ ವೆಂಕಯ್ಯನಾಯ್ಡು ತಿಳಿಸಿದ್ದಾರೆ.

ಬಾದಾಮಿ, ಅಜೆ¾àರ್‌, ಅಮೃತಸರ, ಅಮರಾವತಿ, ದ್ವಾರಕಾ, ಗಯಾ, ವಾರಂಗಲ್‌, ಪುರಿ, ಕಾಂಚೀಪುರಂ, ಮಥುರಾ, ಮದುರೈ, ವೇಲಾಂಕಣಿ ನಗರಗಳು ಅಭಿವೃದ್ಧಿಗೊಳ್ಳಲಿವೆ.

ವಿಶ್ವ ಪರಂಪರೆ ಪಟ್ಟಿಗೆ ದುರ್ಗ ಕೋಟೆ: ಕೇಂದ್ರಕ್ಕೆ ಪ್ರಸ್ತಾವ

ಇಲ್ಲಿನ ಐತಿಹಾಸಿಕ ಏಳುಸುತ್ತಿನ ಕೋಟೆಯನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ಆಂಜನೇಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಿಗೆ ಸೇರ್ಪಡೆಯಾಗುವ ಎಲ್ಲ ಅರ್ಹತೆ ಏಳು ಸುತ್ತಿನ ಕೋಟೆಗೂ ಇದೆ ಎಂದರು. ಹಂಪಿ ಉತ್ಸವದ ಮಾದರಿಯಲ್ಲಿ ಸರ್ಕಾರದ ವತಿಯಿಂದಲೇ ಅಧಿಕೃತವಾಗಿ ಚಿತ್ರದುರ್ಗದ ದುರ್ಗೊàತ್ಸವ ಕೂಡ ನಡೆಯಬೇಕು ಎಂದರು.

Trending videos

Back to Top