CONNECT WITH US  

ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ಗೆ ಪ್ರಹ್ಲಾದರಾವ್‌

ಬೆಂಗಳೂರು: ಕನ್ನಡದಲ್ಲಿ 30 ಸಾವಿರ ಪದಬಂಧ ರಚಿಸಿ ದಾಖಲೆ ಮಾಡಿರುವ ಅ.ನ.ಪ್ರಹ್ಲಾದ್‌ರಾವ್‌ ಅವರ ಹೆಸರನ್ನು ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ಗೆ ಸೇರಿಸಲಾಗಿದೆ. ಈವರೆಗೆ ಅತಿಹೆಚ್ಚು ಪದಬಂಧ ರಚಿಸಿರುವ ಹಿನ್ನೆಲೆಯಲ್ಲಿ ಅ.ನ.ಪ್ರಹ್ಲಾದ್‌ರಾವ್‌ ಅವರಿಗೆ ಈ ಗೌರವ ಸಂದಿದೆ. ಪ್ರಹ್ಲಾದ್‌ರಾವ್‌ ಪದಬಂಧ ಹಾಗೂ ವಿವಿಧ ವಿಷಯಗಳ ಬಗ್ಗೆ 15ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಬಿಬಿಎಂಪಿ ನೀಡುವ ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಈ ಹಿಂದೆ ಸಂದಿವೆ.

Trending videos

Back to Top