CONNECT WITH US  

ಕುಸ್ತಿ ಪಂದ್ಯಾವಳಿಗೆ ಚಾಲನೆ

ಹಿರೇಕೆರೂರ: ಪಟ್ಟಣದ ಅಧಿದೇವತೆ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ, ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಮೊದಲನೇ ದಿನದ ಕುಸ್ತಿ ಪಂದ್ಯಾವಳಿಗೆ ಜಿಲ್ಲಾ ಪಂಚಾಯತ್‌ ಸದಸ್ಯ ಬಸವರಾಜ ಬೇವಿನಹಳ್ಳಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳಲ್ಲಿ ಯುವಕರು ಹೆಚ್ಚು-ಹೆಚ್ಚು ಪಾಲ್ಗೊಳ್ಳುವ ಮೂಲಕ ಅವುಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಬೇಕು. ಎಲ್ಲರೂ ಒಗ್ಗೂಡಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಜಾತ್ರಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ನಾಗರಾಜ ಗುಡ್ಡಳ್ಳಿ, ಅಧ್ಯಕ್ಷತೆ ವಹಿಸಿದ್ದರು. ರುದ್ರಮುನಿ ಹುಲ್ಮನಿ, ಬಿ.ಎಸ್‌.ಪಾಟೀಲ, ಕಂಠಾಧರ ಅಂಗಡಿ, ಪೈರೋಜ್‌ ಸವಣೂರ, ಗುರುಮೂರ್ತಿ ನಾಡಿಗೇರ, ಸಮಿತಿ ಉಪಾಧ್ಯಕ್ಷ ಹರೀಶ ಕಲಾಲ್‌, ಆನಂದ ನಾಯ್ಕರ್‌, ದುರುಗೇಶ ತಿರಕಪ್ಪನವರ, ವೆಂಕಟೇಶ ಉಪ್ಪಾರ, ಉದಯ ಕೊಲ್ಲಾಪುರ ಇತರರಿದ್ದರು.

Trending videos

Back to Top