CONNECT WITH US  

ದಡ್ಡೆಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ

ಮಹಾಲಿಂಗಪುರ: ಪಟ್ಟಣದ ಢವಳೇಶ್ವರ ರಸ್ತೆಯ ದಡ್ಡೆಮ್ಮದೇವಿ ನೂತನ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಸಡಗರದಿಂದ ನಡೆಯಿತು. ಪಟ್ಟಣದ ಹೆಸ್ಕಾಂ ಗಣಪತಿ ದೇವಸ್ಥಾನದಿಂದ ಸುಮಂಗಲೆಯರ ಕುಂಭಮೇಳ, ಆರತಿ, ಕರಡಿ ಮಜಲು, ಡೊಳ್ಳು ಕುಣಿತಗಳೊಂದಿಗೆ ದಡ್ಡೆಮ್ಮ ದೇವಸ್ಥಾನದವರೆಗೆ ದೇವಿಯ ಮೂರ್ತಿ ಮೆರವಣಿಗೆ ನಡೆಯಿತು. ನಂತರ ಹೋಮ-ಹವನ, ಮುತ್ತೆ$çದೆಯರ ಉಡಿ ತುಂಬುವ ಕಾರ್ಯಕ್ರಮ ಸೇರಿದಂತೆ ವಿಧಿಧಿ-ವಿಧಾನಗಳೊಂದಿಗೆ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.

ದುಂಡಪ್ಪ ಜವಳಗಿ, ಯಲ್ಲಪ್ಪ ಕುಳಲಿ, ಚನ್ನಪ್ಪ ದಲಾಲ, ರವಿ ದಲಾಲ, ಮಹಾಲಿಂಗಪ್ಪ ಚನ್ನಾಳ, ಡಾ| ಎ.ಆರ್‌. ಬೆಳಗಲಿ, ಡಾ| ವಸಂತ ಬೀರನಗಡ್ಡಿ, ಚನ್ನಪ್ಪ ಪಟ್ಟಣಶೆಟ್ಟಿ, ಮುತ್ತಪ್ಪ ದಲಾಲ, ಗುರಪ್ಪ ವಜ್ಜರಮಟ್ಟಿ, ಶಂಕರ ದಲಾಲ, ಅಶೋಕ ಅಂಗಡಿ, ವಿಜಯಕುಮಾರ ಕುಳಲಿ, ಮಹಾಲಿಂಗ ಪಟ್ಟಣಶೆಟ್ಟಿ, ಮಾನಿಂಗ ನಾಡಗೌಡ, ಮಹಾಲಿಂಗ ಲೋಕುರಿ, ಮಹಾಲಿಂಗ ಆದೆಪ್ಪನವರ ಇತರರು ಇದ್ದರು.

Trending videos

Back to Top