CONNECT WITH US  

ದುರ್ಗಾದೇವಿ ಜಾತ್ರೆ: ಕುಸ್ತಿ ಪಂದ್ಯಾವಳಿ

ಹಿರೇಕೆರೂರ: ಪಟ್ಟಣದ ಅಧಿದೇವತೆ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಎರಡನೇ ದಿನದ ಕುಸ್ತಿ ಪಂದ್ಯಾವಳಿಗೆ ಪಿಎಸ್‌ಐ ಎಂ.ಎಂ. ಮಹಾಂತೇಶ ಚಾಲನೆ ನೀಡಿದರು.
ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಪೈಲ್ವಾನರು ಕುಸ್ತಿಯಲ್ಲಿ ವಿವಿಧ ಪಟ್ಟುಗಳ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಸಾವಿರಾರು ಕುಸ್ತಿ ಪ್ರೇಮಿಗಳು ಕುತೂಹಲದಿಂದ ವೀಕ್ಷಿಸಿ ಸಂಭ್ರಮಿಸಿದರು. ಅಂಜುಮನ್‌ ಅಧ್ಯಕ್ಷ ಅಬ್ದುಲ್‌ ಖಾದರ್‌ ಲೋಹಾರ ಅಧ್ಯಕ್ಷತೆ ವಹಿಸಿದ್ದರು. ಪಪಂ ಉಪಾಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಸದಸ್ಯರಾದ ಮಹೇಂದ್ರ ಬಡಳ್ಳಿ, ಮಹಮದ್‌ ವಡ್ಡಿನಕಟ್ಟಿ, ರಘು ಮಾಳಮ್ಮನವರ, ರವಿ ಪುಟ್ಟಪ್ಪಗೌಡ್ರ, ರವಿ ಚಿಂದಿ, ಕುಮಾರ ನಾಯ್ಕರ, ಉಮೇಶ ನಾಡಿಗೇರ ಇದ್ದರು.

Trending videos

Back to Top