CONNECT WITH US  

ಸಿಎಂ ಸೂಚನೆಯಂತೆ ರಾಜೀನಾಮೆ ವಾಪಸ್‌

ಬಳ್ಳಾರಿ: ರಾಜ್ಯ ಬಜೆಟ್‌ ಮಂಡನೆ ನಂತರ ಖಾತೆ ಬದಲಾವಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಹೀಗಾಗಿ ಅವರ ಸೂಚನೆಯಂತೆ ರಾಜೀನಾಮೆ ವಾಪಸ್‌ ಪಡೆದಿರುವುದಾಗಿ ಅಬಕಾರಿ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು. ಜಿಂದಾಲ್‌ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚಿನ ಜನಸೇವೆ ಮಾಡುವ ಉದ್ದೇಶದಿಂದ ಖಾತೆ ಬದಲಾವಣೆ ಮಾಡಿ ಎಂದು ಕೋರಿದ್ದೆ. ಅದು ಸಾಧ್ಯವಾಗದಿರುವುದರಿಂದ ರಾಜೀನಾಮೆಗೆ ಮುಂದಾಗಿದ್ದೆ. ಈ ವಿಷಯದಲ್ಲಿ ತಮ್ಮ ಮೇಲೆ ಯಾರದೇ ಒತ್ತಡ ಇರಲಿಲ್ಲ ಎಂದರು. ತಾವೇ ಜಾರಕಿಹೊಳಿಯವರಿಗೆ ರಾಜೀನಾಮೆ ಸಲ್ಲಿಸಲು ಸೂಚಿಸಿದ್ದೆ ಎಂಬ ವಾಲ್ಮೀಕಿ ಗುರು ಪೀಠದ ಸ್ವಾಮೀಜಿಯವರ ಹೇಳಿಕೆ ವೈಯಕ್ತಿಕ ಎಂದರು.

Trending videos

Back to Top