CONNECT WITH US  

ಸಿಎಂ ಜತೆಗೇ ಬಂದ ಜಾರಕಿ ಮತ್ತೆ ಬೇಡಿಕೆ ಮಂಡಿಸಿದರು!

ಜಮಖಂಡಿ: ಮುಖ್ಯಮಂತ್ರಿ ಜತೆ ಮುನಿಸಿಕೊಂಡು ರಾಜೀನಾಮೆ ನೀಡಿ ಬಳಿಕ ವಾಪಸ್‌ ಪಡೆದುಕೊಂಡಿದ್ದ ಅಬಕಾರಿ ಸಚಿವ ಸತೀಶ್‌ ಜಾರಕಿಹೊಳಿ ಶನಿವಾರ ಸಿಎಂ ಸಿದ್ದರಾಮಯ್ಯ ಜತೆಗೇ ಹೆಲಿಕಾಪ್ಟರ್‌ನಲ್ಲಿ ಆಗಮಿಸುವ ಮೂಲಕ ಕುತೂಹಲ ಮೂಡಿಸಿದರು.

ಶುಕ್ರವಾರ ರಾತ್ರಿಯಷ್ಟೇ ಸಿಎಂ ಜತೆ ಮಾತುಕತೆ ಬಳಿಕ ಸಂಪುಟದಲ್ಲಿ ಮುಂದುವರಿಯುವ ಮಾತನಾಡಿದ್ದ ಜಾರಕಿಹೊಳಿ, ಸಚಿವ ಸಂಪುಟದಲ್ಲಿ ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಕೊಡಬೇಕು ಎಂಬ ಬೇಡಿಕೆಯನ್ನು ಪುನರುಚ್ಚರಿಸಿದರು. ತಮ್ಮ ಮುನಿಸಿಗೆ ಇನ್ನೂ ಬೇರೆ ಕಾರಣಗಳಿವೆ ಎಂದೂ ಒಗಟಿನ ಮಾತನಾಡಿದರು.
ಸಿಎಂ-ಜಾರಕಿಹೊಳಿ ಸಾಥ್‌ ಸಾಥ್‌!: ಮೂರು ದಿನ ಮುನಿಸಿಕೊಂಡು ಅನಂತರ ಸಮಾಧಾನಗೊಂಡ ಅಬಕಾರಿ ಸಚಿವ ಸತೀಶ್‌ ಜಾರಕಿಹೊಳಿ ಶನಿವಾರ ಬೆಳ್ಳಂಬೆಳಗ್ಗೆಯೇ ಸಿಎಂ ನಿವಾಸದಲ್ಲಿ ಹಾಜರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಉಭಯ ಕುಶಲೋಪರಿ ನಡೆಸಿದರು.

ಬಾಗಲಕೋಟೆಗೆ ಹೊರಟಿದ್ದ ಸಿಎಂ ಅವರು "ಬಾರಯ್ಯ ಜೊತೆಗೆ' ಎಂದು ನೀಡಿದ ಆಹ್ವಾನವನ್ನು ಸ್ವೀಕರಿಸಿ ಸಿಎಂ ಅವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದು ವಿಶೇಷವಾಗಿತ್ತು.

Trending videos

Back to Top