CONNECT WITH US  

ನಾಸ್ತಿಕತೆಯಾದರೂ ಪೂರ್ಣಪ್ರಮಾಣದಲ್ಲಿರಲಿ: ಯಳನಾಡು ಶ್ರೀ

ಕಡೂರು: ನಾಸ್ತಿಕತೆಯಾಗಲೀ ಅಥವಾ ಆಸ್ತಿಕತೆಯಾಗಲಿ ಅದು ಪೂರ್ಣ ಪ್ರಮಾಣದಲ್ಲಿರಬೇಕು. ಆಗ ಮಾತ್ರ ಫಲ ಸಿಗುತ್ತದೆ ಎಂದು ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ಕಡೂರು ತಾಲೂಕಿನ ಜಿ.ಕೊಪ್ಪಲು ಗ್ರಾಮದ ಬಸವೇಶ್ವರ ಮತ್ತು ನೀಲಾಂಬಿಕಾ ದೇವಿ ಹಾಗೂ ಗಣಪತಿ ದೇವಸ್ಥಾನದ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಪ್ರತಿ ಊರಿನಲ್ಲಿಯೂ ದೇಗುಲಗಳು ನಮ್ಮ ಮನಸ್ಸನ್ನು ಹತೋಟಿಗೆ ತರುವುದಲ್ಲದೆ ಜ್ಞಾನ ಪ್ರಸಾರದ ಕೇಂದ್ರಗಳಾಗಿದ್ದವು. ನಮ್ಮ ದೇಹವೆಂಬುದು ಒಂದು ದೇಗುಲದಂತೆ ಇರಬೇಕು. ಅದರೊಳಗಿನ ಅರಿಷಡ್ವರ್ಗಗಳನ್ನು ಓಡಿಸಿ ಅದನ್ನು ಪೂಜಾರ್ಹವನ್ನಾಗಿಸಬೇಕು. ಆಗ ನಮ್ಮನ್ನು ನಮ್ಮ ನಂತರವೂ ಸಮಾಜ ನೆನಪಿಟ್ಟುಕೊಳ್ಳುತ್ತದೆ ಎಂದು ಹೇಳಿದರು.

ಜಿ.ಪಂ.ಮಾಜಿ ಅಧ್ಯಕ್ಷ ಬೆಳ್ಳಿಪ್ರಕಾಶ್‌ ಮಾತನಾಡಿದರು. ಮಾಜಿ ಶಾಸಕ ಎಸ್‌.ಎಲ್‌.ಧರ್ಮೇಗೌಡ ಮಾತನಾಡಿ,ದೇಗುಲಗಳನ್ನು ಆರಂಭ ಮಾಡುವಾಗ ಗುರು ಹಿರಿಯರು ತಮ್ಮ ಅನುಭವಗಳನ್ನು ಹಾಗೂ ಆಶೀರ್ವಚನವನ್ನು ನೀಡುತ್ತಾರೆ. ಅವುಗಳನ್ನು ಅಳವಡಿಸಿಕೊಳ್ಳುವ ಕೆಲಸವಾಗಬೇಕಿದೆ ಎಂದರು. ಕೆ.ಎಂ.ಕೆಂಪರಾಜು ಮಾತನಾಡಿ, ಹಳ್ಳಿಗಾಡುಗಳಲ್ಲಿ ಸಾಂಪ್ರದಾಯಿಕ ಪೂಜೆಗಳು ಆಚರಣೆಗಳು ನಿಂತು ಹೋಗಿವೆ. ಅವುಗಳೇನಾದರೂ ಉಳಿದರೆ ಇಂತಹ ಧಾರ್ಮಿಕ ಕೇಂದ್ರಗಳ ಆರಂಭದಿಂದ ಮಾತ್ರ ಸಾಧ್ಯ ಎಂದರು.

ಶಿಡ್ಲೆàಹಳ್ಳಿ ಬಳ್ಳೇಕಟ್ಟೆ ಸಂಸ್ಥಾನದ ಗುರುಕುಲಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕುಪೂ³ರು ವಿರಕ್ತಮಠದ ಡಾ| ಅಭಿನವ ಮಲ್ಲಿಕಾರ್ಜುನ ಸ್ವಾಮಿಗಳು ಆಶೀರ್ವಚನ ನೀಡಿದರು. ನಿವೃತ್ತ ಶಿಕ್ಷಕ ರುದ್ರೇಗೌಡ ಉಪನ್ಯಾಸ ನೀಡಿದರು. ಜಿ.ಪಂ ಮಾಜಿ ಅಧ್ಯಕ್ಷೆ ಪ್ರಪುಲ್ಲ ಮಂಜುನಾಥ್‌, ಕಾಮನಕೆರೆ ಶಶಿಧರ್‌, ಸಿ.ಎಸ್‌.ಶೇಖರಪ್ಪ, ಓಂಕಾರಯ್ಯ, ಸುಜಾತ ಕೃಷ್ಣಮೂರ್ತಿ, ತಾ.ಪಂ.ಅಧ್ಯಕ್ಷ ಶಿವಕುಮಾರ್‌, ಜಿ.ಪಂ.ಮಾಜಿ ಉಪಾಧ್ಯಕ್ಷೆ ಮಾಲಿನೀಬಾಯಿ ರಾಜನಾಯ್ಕ, ಎಸ್‌.ವಿ.ಉಮಾಪತಿ, ವಿಗ್ರಹದಾನಿ ಹರೀಶ್‌,ಗುತ್ತಿಗೆದಾರ ಜಗದೀಶ್‌ ಮತ್ತಿತರರು ಇದ್ದರು.


Trending videos

Back to Top