CONNECT WITH US  

ಭಾರತೀಯ ಪೈಲಟ್‌ನ ಸೆಲ್ಫಿ ಹುಚ್ಚಿಗೆ ವಿಮಾನ ಅಪಘಾತ!

ನ್ಯೂಯಾರ್ಕ್‌: ಸೆಲ್ಫಿ ತೆಗೆಯುವ ಹುಚ್ಚಿನಲ್ಲಿ ಕಟ್ಟಡದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ, ಮಂಗಳೂರಿನಲ್ಲಿ ಯುವತಿಯೊಬ್ಬಳು ಚಲಿಸುತ್ತಿರುವ ರೈಲಿನಲ್ಲಿ ಸೆಲ್ಫಿ ತೆಗೆಯಲು ಹೋಗಿ ಸಾವನ್ನಪ್ಪಿದ ಸುದ್ದಿಗಳನ್ನು ಕೇಳಿದ್ದೇವೆ. ಆದರೆ ಪೈಲಟ್‌ನ ಸೆಲ್ಫಿ ತೆಗೆಯುವ ಹುಚ್ಚಿಗೆ ವಿಮಾನವೊಂದು ಅಪಘಾತಕ್ಕೆ ಗುರಿಯಾಗಿತ್ತು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಕಳೆದ ವರ್ಷ ಅಮೆರಿಕದಲ್ಲಿ ಲಘು ವಿಮಾನವೊಂದು ಪತನಗೊಂಡು ಅದರಲ್ಲಿದ್ದ ಇಬ್ಬರು ಭಾರತೀಯರು ಸಾವನ್ನಪ್ಪಿದ ಘಟನೆಗೆ ಪೈಲಟ್‌ ಸೆಲ್ಫಿ ತೆಗೆಯಲು ಹೋಗಿ ಮಾಡಿಕೊಂಡ ಪ್ರಮಾದವೇ ಕಾರಣವಾಗಿರಬಹುದು ಎಂದು ತಿಳಿದುಬಂದಿದೆ. ಕೊಲೊರಾಡೊ ರಾಜ್ಯದ ವಾಟ್ಕನ್ಸ್‌ ಸಮೀಪ ವಿಮಾನ ಪತನಗೊಂಡು, ಪೈಲಟ್‌ ಅಮೃತ್‌ ಪಾಲ್‌ (29) ಮತ್ತು ಪ್ರಯಾಣಿಕ ಜತಿಂದರ್‌ ಸಿಂಗ್‌ (31) ಎನ್ನುವ ಇಬ್ಬರು ಸಾವನ್ನಪ್ಪಿದ್ದರು. ಪೈಲಟ್‌ ಮೊಬೈಲ್‌ನಿಂದ ಸೆಲ್ಫಿ ತೆಗೆಯಲು ಮುಂದಾಗಿದ್ದ ವೇಳೆ ವಿಮಾನ ಸಮತೋಲನ ತಪ್ಪಿ ನೆಲಕ್ಕೆ ಉರುಳಿರಬಹುದು. ವಿಮಾನದಲ್ಲಿ ಯಾವುದೇ ದೋಷವಿರಲಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ.

Trending videos

Back to Top