CONNECT WITH US  

ಲಾಟರಿ ಜಾರಿ ಬೇಡವೇ ಬೇಡ: ದಸಂಸ

ಮೊಳಕಾಲ್ಮೂರು: ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಬೇಕು ಹಾಗೂ ಲಾಟರಿ ಯೋಜನೆಯನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿ ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ದಸಂಸ ತಾಲೂಕು ಸಂಚಾÇಕ ಒ. ಕರಿಬಸಪ್ಪ ಮಾತನಾಡಿ, ಗಡಿ ಭಾಗದಲ್ಲಿರುವ ಬರಪೀಡಿತ ಪ್ರದೇಶವಾಗಿರುವ ಈ ತಾಲೂಕಿನಲ್ಲಿ ಬಹುತೇಕ ಎಸ್‌ಸಿಎಸ್‌ಟಿ ಹಾಗೂ ಹಿಂದುಳಿದ ಸಮುದಾಯದವರೇ ಬಹು ಸಂಖ್ಯೆಯಲ್ಲಿದ್ದಾರೆ.

ಜೀವನ ನಿರ್ವಹಣೆ ಮಾಡುವುದು ದುಸ್ತರವಾಗಿದೆ. ರಾಜ್ಯ ಸರ್ಕಾರ ನೆಪ ಮಾತ್ರಕ್ಕೆ ಸಾರಾಯಿ ನಿಷೇಧ ಮಾಡಿದೆ. ಇದರಿಂದಾಗಿ ತಾಲೂಕಿನ ಪ್ರತಿ ಗ್ರಾಮದಲ್ಲಿಯೂ 4ರಿಂದ 5 ಅನಧಿಧಿಕೃತ ಮದ್ಯ ಮಾರಾಟ ಅಂಗಡಿ ತಲೆಎತ್ತಿವೆ. ಈ ಬಗ್ಗೆ ಸಂಬಂಧಿಸಿದ ಅಧಿಧಿಕಾರಿಗಳಿಗೆ ಸಾಕಷ್ಟು ಬಾರಿ ಮಾಹಿತಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಮದ್ಯ ಮಾರಾಟದಿಂದ ದಲಿತ ಹಾಗೂ ಹಿಂದುಳಿದ ವರ್ಗ ಶೋಷಣೆಗೊಳಗಾಗಿವೆ. ಆ ವರ್ಗದ ಹೆಣ್ಣು ಮಕ್ಕಳು ಮತ್ತು ಕುಟುಂಬಗಳು ಬೀದಿಗೆ ಬೀಳುವುದನ್ನು ತಪ್ಪಿಸಲು ಅಕ್ರಮ ಮದ್ಯ ಮಾರಾಟ ತಡೆಗಟ್ಟಬೇಕು ಎಂದರು.

ಸಂಘಟನಾ ಸಂಚಾಲಕ ತಿಮ್ಮಲಾಪುರ ಬಸಪ್ಪ ಮಾತನಾಡಿ, ರಾಜ್ಯ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನಪರ ಕಾರ್ಯಕ್ರಮ ರೂಪಿಸದೆ ಹೊಸದಾಗಿ 10 ರೂ. ಮುಖ ಬೆಲೆಯ ಲಾಟರಿ ಯೋಜನೆ ಜಾರಿಗೆ ಮುಂದಾಗಿರುವುದು ಸಮಾಜಕ್ಕೆ ಮಾರಕವಾಗಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ದಲಿತರ ಶೋಷಣೆಯಾಗುತ್ತದೆ. ಇದರಿಂದ ಬಡ ಕುಟುಂಬಗಳು ಹಾಳಾಗುವುದನ್ನು ತಡೆಯಲು ಅಕ್ರಮ ಮಧ್ಯ ಮಾರಾಟ ಮತ್ತು ಲಾಟರಿ ಯೋಜನೆಯನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ತಹಶೀಲ್ದಾರ್‌ ಪಿ. ಪ್ರಮೋದ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘಟನಾ ಸಂಚಾಲಕರಾದ ಹನುಮಂತ, ಸೋಮಶೇಖರ, ತಿಪ್ಪೇಸ್ವಾಮಿ, ಚಂದ್ರಪ್ಪ, ಅಂಜಿನಪ್ಪ, ಓಬಣ್ಣ, ನಾಗರಾಜ, ಬಸವರಾಜ, ಶೇಖರಪ್ಪ, ತಿಪ್ಪೇಸ್ವಾಮಿ, ಕಾಡಪ್ಪ, ನುಂಕೇಶ್‌, ನಾಗೇಂದ್ರ, ಖಜಾಂಚಿ ಮಂಜಣ್ಣ ಮೊದಲಾದವರು ಭಾಗವಹಿಸಿದ್ದರು.

Trending videos

Back to Top