CONNECT WITH US  

ಧೋನಿ-ಸಾಕ್ಷಿ ದಂಪತಿಗೆ ಹೆಣ್ಣು ಮಗು!

ಗುರ್ಗಾಂವ್‌: ಭಾರತ ಕ್ರಿಕೆಟ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ತಂದೆಯಾಗಿದ್ದಾರೆ. ಸಾಕ್ಷಿ-ಧೋನಿ ದಂಪತಿಗೆ ಶುಕ್ರವಾರ ಹೆಣ್ಣು ಮಗು ಜನಿಸಿದೆ. ಗುರ್ಗಾಂವ್‌ನ ಖಾಸಗಿ ಆಸ್ಪತ್ರೆಯಲ್ಲಿ ಸಂಜೆ 4ರ ಸುಮಾರಿಗೆ ಮಗು ಜನಿಸಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ತಾಯಿಧಿಧಿ-ಮಗು ಆರೋಗ್ಯವಾಗಿದ್ದಾರೆ. ಮಗು 2.5 ಕೆ.ಜಿ.ಯಷ್ಟು ತೂಕವಿದೆ. ಇಂತಹ ಸಂದರ್ಭದಲ್ಲಿ ಧೋನಿ ಇಲ್ಲ. ಅವರು ವಿಶ್ವಕಪ್‌ ತಯಾರಿಯಲ್ಲಿದ್ದಾರೆ. ಧೋನಿ ತಂದೆ-ತಾಯಿ ಹಾಗೂ ಸಾಕ್ಷಿ ತಂದೆ-ತಾಯಿ ಬೆಳಗ್ಗೆಯೆ ಆಸ್ಪತ್ರೆಗೆ ಬಂದಿದ್ದಾರೆ. ಧೋನಿಗೆ ವಿಷಯವನ್ನು ತಿಳಿಸಿದ್ದೇವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಬಾಲ್ಯ ಗೆಳತಿಯಾಗಿರುವ ಸಾಕ್ಷಿಯನ್ನು ಧೋನಿ ವಿವಾಹವಾಗಿದ್ದರು. ಇವರಿಬ್ಬರ ಪ್ರೇಮ ಪ್ರಕರಣದಂತೆ ಅವರು ಗರ್ಭಿಣಿಯಾಗಿರುವ ಸಂಗತಿಯೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಒಂದು ಸಂದರ್ಭದಲ್ಲಿ ತಾನು ಗರ್ಭಿಣಿ ಎಂದು ಸ್ವತಃ ಸಾಕ್ಷಿ ಟ್ವೀಟರ್‌ನಲ್ಲಿ ಹೇಳಿಕೊಂಡಿದ್ದರು. ಅದಕ್ಕೆ ಸಾವಿರಾರು ಶುಭಸಂದೇಶಗಳು ಬರುತ್ತಿದ್ದಂತೆ ತಾನು ಸುಳ್ಳು ಹೇಳಿದೆ, ಅದನ್ನೆಲ್ಲ ನೀವೆಲ್ಲ ನಂಬಿಬಿಟ್ಟಿರಿ ಎಂದು ಸುದ್ದಿಯನ್ನು ನಿರಾಕರಿಸಿದ್ದರು.

ಆದರೆ ಕೆಲವೇ ತಿಂಗಳ ಹಿಂದೆ ಸ್ವತಃ ಧೋನಿ ಸೋದರ ವಿಷಯವನ್ನು ಬಹಿರಂಗಪಡಿಸಿ ಸಾಕ್ಷಿ ಗರ್ಭಿಣಿ ಎಂದು ಖಚಿತಪಡಿಸಿದ್ದರು. ಇದೀಗ ಸಾಕ್ಷಿ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಕುಟುಂಬವರ್ಗ ಮತ್ತು ಕ್ರಿಕೆಟ್‌ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದ್ದಾರೆ.

Trending videos

Back to Top