CONNECT WITH US  

ಗ್ರೆಂಕೆ ಚೆಸ್‌: ಆನಂದ್‌ಗೆ ಮತ್ತೆ ಸೋಲು

ಹೊಸದಿಲ್ಲಿ: ಗ್ರೆಂಕೆ ಅಂತಾರಾಷ್ಟ್ರೀಯ ಕ್ಲಾಸಿಕ್‌ ಚೆಸ್‌ ಟೂರ್ನಿಯ 5ನೇ ಸುತ್ತಿನ ಪಂದ್ಯದಲ್ಲಿ ಭಾರತದ ವಿಶ್ವನಾಥನ್‌ ಆನಂದ್‌ ಸೋಲು ಕಂಡಿದ್ದಾರೆ.

5 ಬಾರಿಯ ವಿಶ್ವ ಚಾಂಪಿಯನ್‌ ಆನಂದ್‌, ಎದುರಾಳಿ ಅರ್ಮೆನಿಯಾದ ಲೆವೊನ್‌ ಅರ್ನಿಯನ್‌ ವಿರುದ್ಧ ಸೋಲುಂಡರು. ಶನಿವಾರವಷ್ಟೇ ಅವರು ನಾಲ್ಕನೇ ಸುತ್ತಿನ ಪಂದ್ಯದಲ್ಲಿ ನಾರ್ವೆಯ ಮಾಗ್ನಸ್‌ ಕಾರ್ಲ್ಸನ್‌ ವಿರುದ್ಧ ಪರಾಭವಗೊಂಡಿದ್ದರು. ಇದು ಮೊದಲ ಮೂರು ಡ್ರಾಗಳ ಬಳಿಕ ಎದುರಾದ ಸತತ ಎರಡನೇ ಸೋಲಾಗಿದೆ.

ಆನಂದ್‌ ಪಂದ್ಯದ ಎಲ್ಲ ನಡೆಗಳಲ್ಲೂ ಅತ್ಯಂತ ಕಳಪೆ ಆಟ ಪ್ರದರ್ಶಿಸಿದರು. ಹೀಗಾಗಿ ಎದುರಾಳಿಗೆ ಸುಲಭವಾಗಿ ಮಣಿದರು. ಟೂರ್ನಿ ಒಟ್ಟು 7 ಸುತ್ತಿನದ್ದಾಗಿದೆ. ಈಗ 5 ಸುತ್ತು ಮುಗಿದಿದೆ. ಮುಂದಿನ ಎರಡು ಪಂದ್ಯಗಳಷ್ಟೇ ಆನಂದ್‌ಗೆ ಬಾಕಿ ಉಳಿದಿದ್ದು ಅವರು ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ.

Trending videos

Back to Top