CONNECT WITH US  

ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿಗೆ ಡಾ| ಸಂಧ್ಯಾ ಪೈ ಆಯ್ಕೆ

ಮುಂಬಯಿ: ಚೆಂಬೂರು ಕರ್ನಾಟಕ ಸಂಘದ 2015 ನೇ ಸಾಲಿನ ಪ್ರತಿಷ್ಟಿತ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ-2015' ಗೆ ಪ್ರಸಿದ್ಧ ಸಾಹಿತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ತರಂಗ ಮತ್ತು ತುಷಾರ ಪತ್ರಿಕೆಗಳ ವ್ಯವಸ್ಥಾಪಕ ಸಂಪಾದಕಿ, ಮಣಿಪಾಲ ಎಂಟಟೈನ್‌ಮೆಂಟ್‌ ನೆಟ್‌ವರ್ಕ್‌ ಲಿಮಿಟೆಡ್‌ನ‌ ನಿರ್ದೇಶಕಿ ಡಾ| ಸಂಧ್ಯಾ ಎಸ್‌. ಪೈ ಅವರು ಆಯ್ಕೆಯಾಗಿದ್ದಾರೆ. ಡಾ| ಸಂಧ್ಯಾ ಪೈ ಅವರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಅನುಪಮ ಸೇವೆಯನ್ನು ಪರಿಗಣಿಸಿ 2015 ನೇ ಸಾಲಿನ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿಗೆ ಅವರನ್ನು ಆಯ್ಕೆಮಾಡಲಾಗಿದೆ.

ಪ್ರಶಸ್ತಿ ಪ್ರಧಾನ :

ಕಳೆದ ಒಂದು ದಶಕದಿಂದ ನಡೆದು ಬಂದಿರುವ ವಾರ್ಷಿಕ ಸಾಹಿತ್ಯ-ಸಂಸ್ಕƒತಿ-ಸಮ್ಮಾನ ಸಂಭ್ರಮ ಸಾಹಿತ್ಯ ಸಹವಾಸ' ಕಾರ್ಯಕ್ರಮವು ಚೆಂಬೂರು ಕರ್ನಾಟಕ ಸಂಘ ಮತ್ತು ಅದರ ಸಂಚಾಲಕತ್ವದಲ್ಲಿರುವ ಹೆ„ಸ್ಕೂಲ್‌ ಮತ್ತು ಕಾಲೇಜಿಗೆ ಹಿರಿಮೆ ತಂದಿತ್ತಿದೆ. ಪ್ರಸ್ತುತ ವರ್ಷ ಮತ್ತಷ್ಟು ಸಂಭ್ರಮದೊಂದಿಗೆ ಫೆ. 15 ರಂದು ಅಪರಾಹ್ನ 4.30 ರಿಂದ ಚೆಂಬೂರುನಲ್ಲಿನ ಸಂಸ್ಥೆಯ ಸಂಕುಲದಲ್ಲಿ ಅಧ್ಯಕ್ಷ ಜಯ ಎನ್‌. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಾಹಿತ್ಯ ಸಹವಾಸ-2015 ಸಂಭ್ರಮ ಜರಗಲಿದೆ. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪ್ರಸಾದ್‌ ನೇತ್ರಾಲಯ ಉಡುಪಿ ಇದರ ನಿರ್ದೇಶಕ, ಅಂತಾರಾಷ್ಟ್ರೀಯ ಪ್ರಸಿದ್ಧ ನೇತ್ರತಜ್ಞ ಡಾ| ಕೃಷ್ಣ ಪ್ರಸಾದ್‌ ಕೆ. ಹಾಗೂ ಗೌರವ ಅತಿಥಿಯಾಗಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅವರು ಆಗಮಿಸಿ ಪ್ರಶಸ್ತಿಯನ್ನು ಪ್ರದಾನಿಸಲಿದ್ದಾರೆ.

ಸಮಾರಂಭದಲ್ಲಿ ಸಂಘವು ವಾರ್ಷಿಕವಾಗಿ ಕೊಡಮಾಡುವ ವೈ.ಜಿ ಶೆಟ್ಟಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ'ಯನ್ನು ಕನ್ನಡ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸದಾಶಿವ ಶೆಟ್ಟಿ ಅವರಿಗೆ ಮತ್ತು ಸುಬ್ಬಯ್ಯ ಶೆಟ್ಟಿ ದತ್ತಿ ಗೌರವ'ವನ್ನು ಪ್ರಾಧ್ಯಾಪಕ, ಸಂಶೋಧಕ ಡಾ| ಜಿ. ಎನ್‌. ಉಪಾಧ್ಯ ಅವರಿಗೆ, ಆರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಮೆಮೋರಿಯಲ್‌ ಪ್ರಶಸ್ತಿ'ಯನ್ನು ಪ್ರಶಸ್ತಿ ಪುರಸ್ಕƒತ ಯಕ್ಷಗಾನ ಕಲಾವಿದ ಟಿ. ಆರ್‌. ಶೆಟ್ಟಿ ಮತ್ತು ಪತ್ರಕರ್ತ ದಯಾಸಾಗರ ಚೌಟ ಅವರಿಗೆ ಪ್ರಧಾನಿಸಲಾಗುವುದು.

ಸಾಂಸ್ಕƒತಿಕ ಕಾರ್ಯಕ್ರಮದ ಅಂಗವಾಗಿ ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿ ಗಳಿಸಿರುವ ಮಂಗಳೂರಿನ ಜ್ಞಾನ ಐತಾಳ್‌ ನೇತƒತ್ವದ ಹೆಜ್ಜೆನಾದ ತಂಡದವರಿಂದ ನƒತ್ಯ-ಸಂಗೀತ ವೈಭವ ಪ್ರದರ್ಶನಗೊಳ್ಳಲಿದೆ. ಸಮಾರಂಭದಲ್ಲಿ ತುಳು-ಕನ್ನಡಿಗರು ಪಾಲ್ಗೊಂಡು ಸಹಕರಿಸುವಂತೆ ಸಂಘದ ಗೌ| ಪ್ರ| ಕಾರ್ಯದರ್ಶಿ ಗುಣಕರ ಹೆಗ್ಡೆ, ಉಪಾಧ್ಯಕ್ಷ ನ್ಯಾಯವಾದಿ ಎಚ್‌. ಕೆ. ಸುಧಾಕರ್‌, ಕೋಶಾಧಿಕಾರಿ ಯೋಗೇಶ್‌ ಗುಜರನ್‌ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
 

Trending videos

Back to Top