CONNECT WITH US  

ಆಲಂಬೂರಲ್ಲಿ ಕುಸ್ತಿ: ಕುಸ್ತಿ ಪಟುಗಳು ಎದ್ದರು..ಬಿದ್ದರು..!

ನಂಜನಗೂಡು : ಫೆ 15 ತಾಲ್ಲೂಕಿನ ಆಲಂಬೂರು ಗ್ರಾಮದಲ್ಲಿ ಗ್ರಾಮ ದೇವತೆ ಹಬ್ಬದ ಪ್ರಯುಕ್ತ ವಿಭಾಗಿಯ ಮಟ್ಟದ 35 ಜೊತೆ ಕಾಟ ಕುಸ್ತಿ ಪಂದ್ಯಾವಳಿಯಲ್ಲಿ ಪಟ್ಟಣದ ಒಕ್ಕಲಗೇರಿಯ ಪೈ.ಭರತ್‌ ಗಂಜಾಮ್‌ ಪೈ ಪ್ರವೀಣ್‌ರವರನ್ನು 26 ನಿಮಿಷದಲ್ಲಿ ಚಿತ್‌ ಮಾಡುವ ಮೂಲಕ ಪಟ್ಟದಮ್ಮ ಟ್ರೋಪಿ ತಮ್ಮದಾಗಿಸಿಕೊಂಡರು.

ಭಾನುವಾರ ಆಲಂಬೂರು ಗ್ರಾಮದ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಮುಂಭಾಗದಲ್ಲಿ ಕ.ರ.ವೇ ಹಾಗೂ ಮಾರಮ್ಮನ ಹಬ್ಬದ ಅಂಗವಾಗಿ ಆಯೋಜಿಸಿದ ಕುಸ್ತಿ ಪಂದ್ಯಾವಳಿಗೆ ರಾಜ್ಯ ವಾಲಿಕಿ ನಿಗಮದ ಅಧ್ಯಕ್ಷ ಎಸ್‌.ಸಿ.ಬಸವರಾಜು ಹಾಗೂ ಮಾಜಿ ಜಿ.ಪಂ.ಅಧ್ಯಕ್ಷ ಆರ್‌.ಧರ್ಮೇಂದ್ರ ಚಾಲನೆ ನೀಡಿದರು. ಕುಸ್ತಿ ಪಟುಗಳು ಒಬ್ಬರಿಗಿಂತ ಒಬ್ಬರು ಕಮ್ಮಿ ಇಲ್ಲದಂತೆ ಪಟ್ಟಿಗೆ ಪ್ರತಿ ಪಟ್ಟ ಹಾಕುತ್ತಾ ಮೇಲೆ-ಕೆಳಗೆ ಎದ್ದು-ಬಿದ್ದು, ಮಟ್ಟಿಗೆ ಧೂಳೆಬ್ಬಿಸಿ ದಾವುಗಳನ್ನು ಮಾಡುತ್ತಾ ಪ್ರೇಕ್ಷಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು.

ಪೈ.ಭರತ್‌ ಹಾಗೂ ಪೈ.ಪ್ರವೀಣ್‌ 30 ನಿಮಿಷದ ಕೊನೆ ಕ್ಷಣಕ್ಷಣದ ವರೆವಿಗೂ ಇಬ್ಬರ ಮೇಲುಗೈ ಸಾಧಿಸುತ್ತಾ ಕುಸ್ತಿ ಪ್ರಿಯರಿಗೆ ರಸದೌತನ ನೀಡಿ ಅಂತಿಮವಾಗಿ ವಿಜಯ ಮಾಲೆ ಪೈ.ಭರತ್‌ ಕೊರಳಿಗೆ ವಾಲಿತ್ತು ಗೆಲುವು ಸಾಧಿಸಿದವರು ಆಲಂಬೂರು ಪ್ರಾಮದ ಪೈ.ಅವಿನಾಶ್‌, ಪೈ.ಮಹದೇವಸ್ವಾಮಿ, ಸಿಂಧುವಳ್ಳಿ.ಪೈ.ರಂಗಸ್ವಾಮಿ, ಬೊಕ್ಕಹಳ್ಳಿ ಪೈ.ವೆಂಕಟೇಶ್‌, ಬಸ್ತಿಪುರ ಪೈ.ಸುಮಂತ್‌, ಪೈ.ಮಹದೇವು ಧೂಮ, ಹಿಮ್ಮಾವು ಪೈ.ರಘು, ಸಮ ಬಲ ಸಾಧಿಸಿದವರು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಂಡ್ಯದ ಪೈ.ರವಿ ಹುಲಿಮರಿ ಹಾಗೂ ಪಾಲಹಳ್ಳಿ ಪೈ.ರವಿದುರ್ಗ, ಗೋಳೂರು ಪೈ.ಮಣಿ, ಪೈ.ಸೈಯದ್‌ ಜಮೀರ್‌, ಪೈ.ಸಾಕಿಮ್‌, ಪೈ.ಮಹೇಶ್‌ ಪಂಡಿತ್‌, ಪೈ.ಪವರ್‌ ಜಗ್ಗು, ಪೈನಾಗಕೀರ್ತಿ, ಪೈ.ಲಕ್ಷ್ಮಣ್‌ ಬೆಳ್ಳಿ, ಪೈ.ಭವಾನಿ ಶಂಕರ್‌ ಕುಸ್ತಿ ಪಂದ್ಯವಳಿ ಸಮನಾದವು, ಸಾವಿರಾರು ಕುಸ್ತಿ ಪ್ರೇಮಿಗಳು ಕುಸ್ತಿ ವೀಕ್ಷಿಸಿ ಕಣ್ತುಂಬಿಕೊಂಡರು.

ಖ್ಯಾತ ಪೈಲ್ವಾನ್‌ ಸಿದ್ದರಾಜು, ಪೈ.ಗಂಗಾಧರ್‌ಗೌಡ, ಸನ್ಮಾನಿಸಲಾಯಿತು. ಪಂದ್ಯಾವಳಿಯಲ್ಲಿ ಗ್ರಾ.ಪಂ.ಸದಸ್ಯ ಮೋಹನ್‌ ಕುಮಾರ್‌, ಕ.ರ.ವೇ ಅಧ್ಯಕ್ಷ ರಜತ್‌ ಗೌಡ, ಬಸ್ತಿಪುರ ಪೈ.ಜಯರಾಂ, ಪೈ.ಸಿದ್ದರಾಜ್‌, ಪೈ.ಗಂಗಾಧರ್‌ಗೌಡ, ಪೈ.ನಾಗರಾಜಬೆಟ್ಟ, ಗೋಳೂರು ಪೈ.ಶಿವಣ್ಣ, ಬಕ್ಕಹಳ್ಳಿ ಪೈ.ಮಂಟೇಸ್ವಾಮಿ, ಬನ್ನೂರು ಪೈ.ರವಿ ರಮ್ನಳ್ಳಿ ಪೈ.ರಾಮಚಂದ್ರ ಸೇರಿದಂತೆ ಇತರರು ಇದ್ದರು. ಚಿತ್ರ 1 : ನಂಜನಗೂಡು ತಾಲ್ಲೂಕಿನ ಆಲಂಬೂರು ಗ್ರಾಮದ ಪಟ್ಟದಮ್ಮ ಮಾರಮ್ಮ ಹಬ್ಬದ ಅಂಗವಾಗಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಪೈಲ್ವಾನರುಗಳು ತಮ್ಮ ಕೌಶಲ್ಯ ಪ್ರದರ್ಶಿಸುತ್ತಿರುವುದು.
 

Trending videos

Back to Top