CONNECT WITH US  

ಕಡೂರ: ಕಬಡ್ಡಿ ಪಂದ್ಯಾವಳಿ

ಹಿರೇಕೆರೂರ: ಕಬಡ್ಡಿ, ಖೋಖೋ, ಕುಸ್ತಿ ಸೇರಿದಂತೆ ಗ್ರಾಮೀಣ ಕ್ರೀಡೆಗಳ ಕಡೆಗೆ ಯುವಕರು ಗಮನ ಹರಿಸಬೇಕು ಎಂದು ಗ್ರಾಮದ ಹಿರಿಯ ಚಂದ್ರಶೇಖರಪ್ಪ ತುಮ್ಮಿನಕಟ್ಟಿ ಹೇಳಿದರು. ತಾಲೂಕಿನ ಕಡೂರು ಗ್ರಾಮದಲ್ಲಿ ಹನುಮಂತ ದೇವರ ರಥೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ರುದ್ರಗೌಡ ಪಾಟೀಲ, ಪ್ರಭು ಹುಲ್ಲತ್ತಿ, ಮಲ್ಲಿಕಾರ್ಜುನ ಇಂಗಳಗೊಂದಿ, ಜಗದೀಶ ಲಕ್ಕನಗೌಡ್ರ, ರಾಮನಗೌಡ ಮೂಲಿಮನಿ, ಶೇಖಪ್ಪ ಶೇಖಸನದಿ, ಸಿದ್ದಪ್ಪ ಹಂಚಿನಮನಿ, ರೇವಣಪ್ಪ ಎರಳ್ಳಿ, ಚಂದ್ರಶೇಖರ ಅಂಗಡಿ ಮತ್ತಿತರರು ಇದ್ದರು. ಶಿಕ್ಷಕ ಎಂ.ಎಂ. ಕೆರೂರು ಸ್ವಾಗತಿಸಿ, ವಂದಿಸಿದರು. ಕಬಡ್ಡಿ ಪಂದ್ಯಾವಳಿಯಲ್ಲಿ ವಿವಿಧ ಕಡೆಯಿಂದ ಸುಮಾರು 30ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನವನ್ನು ನೆಲೋಗಲ್ಲ ತಂಡ ಪಡೆದರೆ, ದ್ವಿತೀಯ ಬಹುಮಾನವನ್ನು ರಾಣಿಬೆನ್ನೂರು ತಂಡ ಹಾಗೂ ಮೂರನೇ ಬಹುಮಾನ ಚಿತ್ರದುರ್ಗದ ತಂಡ ಪಡೆಯಿತು.

Trending videos

Back to Top