CONNECT WITH US  

ತಿಂಗಳಿಗೊಬ್ಬ ಗರ್ಭಿಣಿಯಲ್ಲಿ ಎಚ್‌ಐವಿ

ಮಂಡ್ಯ: ಜಿಲ್ಲೆಯಲ್ಲಿ ತಿಂಗಳಿಗೊಬ್ಬ ಗರ್ಭಿಣಿಯಲ್ಲಿ ಎಚ್‌ಐವಿ ಸೋಂಕು ಕಂಡು ಬರುತ್ತಿರುವುದು ಆತಂಕಕಾರಿ ಸಂಗತಿ ಎಂದು ಬೆಂಗಳೂರಿನ ಕೆಸ್ಸಾಪ್ಸ್ ಜಂಟಿ ನಿರ್ದೇಶಕಿ (ಐಇಸಿ ವಿಭಾಗ) ಡಾ.ಲಲಿತಾ ಸಂಪಿಗೆ ಆತಂಕ ವ್ಯಕ್ತಪಡಿಸಿದರು.
ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಚ್‌ಐವಿ/ಏಡ್ಸ್‌ ಸೋಂಕು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಏಡ್ಸ್‌ ಪ್ರಿವೆನ್‌ಷನ್‌ ಸೊಸೈಟಿಯು (ಕೆಸಾಪ್ಸ್) "ಸಮಗ್ರ ಜನ ಜಾಗೃತಿ ಅಭಿಯಾನ' ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಎಚ್‌ಐವಿ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಡೆದ ಸೋಂಕಿತ ಗರ್ಭಿಣಿಯರ ಸಮೀಕ್ಷೆಯಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ.

ಚಾಮರಾಜನಗರ ಜಿಲ್ಲೆ ಮೊದಲ ಸ್ಥಾನ ಪಡೆದಿರುವುದನ್ನು ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆ (ನ್ಯಾಕೋ) ಸಂಸ್ಥೆ ದೃಢಪಡಿಸಿದೆ. ಹೀಗಾಗಿ ನ್ಯಾಕೋ ಸಲಹೆಯಂತೆ ಜಾಗೃತಿ ಅಭಿಯಾನಕ್ಕೆ ಸಿದ್ಧತೆ ನಡೆದಿದೆ ಎಂದರು.ಅಭಿಯಾನದಡಿ ಸ್ವಯಂ ಸೇವಕರು ಮನೆ ಮನೆಗೆ ತೆರಳಿ ಮಾಹಿತಿ ನೀಡುವುದರ ಜೊತೆಗೆ ಎಚ್‌ಐವಿ ಸೋಂಕಿತರ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನೂ ಸಂಗ್ರಹಿಸಲಿದ್ದಾರೆ. ಈ ಸ್ವಯಂ ಸೇವಕರಿಗೆ ನಿತ್ಯ 70ರೂ. ಗೌರವ ಸಂಭಾವನೆ ನೀಡಲಾಗುತ್ತದೆ ಎಂದು ಹೇಳಿದರು.

`ಇಮ್ಮನ ಹೆಮ್ಮೆಯ ಕಂದ-ಬಾಳು ನೀ ಆರೋಗ್ಯದಿಂದ' ಘೋಷಣೆಯಡಿ ಮಾರ್ಚ್‌ ತಿಂಗಳಲ್ಲಿ ಏಳು ದಿನಗಳ ಕಾಲ ಈ ಜನಾಂದೋಲನ ನಡೆಯಲಿದೆ. ಅತಿ ಹೆಚ್ಚು ಎಚ್‌ಐವಿ/ಏಡ್ಸ್‌ ಸೋಂಕಿತರಿರುವ ಮಂಡ್ಯ ಮತ್ತು ಮದ್ದೂರು ತಾಲೂಕಿನಲ್ಲಿ ಮೊದಲ ಹಂತದಲ್ಲಿ ಅಭಿಯಾನ ನಡೆಯಲಿದೆ. ಇಲ್ಲಿನ ಅನುಭವದ ಆಧಾರದ ಮೇಲೆ ಉಳಿತ ತಾಲೂಕುಗಳಿಗೂ ಅಭಿಯಾನವನ್ನು ವಿಸ್ತರಿಸಲು ಕೆಸಾಪ್ಸ್ ನಿರ್ಧರಿಸಿದೆ ಎಂದು ತಿಳಿಸಿದರು.ಾರ್ಯಕ್ರಮದ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ರಚಿಸಲಾಗಿದೆ. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು(ಎಎನ್‌ಎಂ), ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಕಾಲೇಜುಗಳಲ್ಲಿನ ರೆಡ್‌ ರಿಬ್ಬನ್‌ ಕ್ಲಬ್‌ಗಳ ವಿದ್ಯಾರ್ಥಿಗಳು ಮತ್ತು ಲಿಂಗ್‌ ವರ್ಕರ್‌ಗಳು ಸೇರಿದಂತೆ 792 ಮಂದಿಯನ್ನು ಸ್ವಯಂ ಸೇವಕರಾಗಿ ಗುರುತಿಸಲಾಗಿದೆ.

ಇವರಿಗೆ ತರಬೇತಿ ನೀಡಲು ಸಂಪನ್ಮೂಲ ವ್ಯಕ್ತಿಗಳ ಆಯ್ಕೆ, ಅವರಿಗೆ ಮೊದಲ ತರಬೇತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.ಬ್ಬರು ಸ್ವಯಂ ಸೇವಕರ ಒಂದೊಂದು ಗುಂಪುಗಳನ್ನು ರಚಿಸಿ, ಪ್ರತಿ ತಂಡವು ದಿನಕ್ಕೆ ಕನಿಷ್ಠ 50 ಮನೆಗಳಂತೆ ಏಳು ದಿನಗಳಲ್ಲಿ 350-400 ಮನೆಗಳನ್ನು ಸಂಪರ್ಕಿಸಿ ಮಾಹಿತಿ ನೀಡಲಿದೆ. ಸ್ವಯಂ ಸೇವಕರ ತರಬೇತಿ ಅವಧಿಯಲ್ಲಿ ಅಭಿಯಾನದ ಉದ್ದೇಶಗಳು, ಎಚ್‌ಐವಿ/ಏಡ್ಸ್‌ ಬಗ್ಗೆ ಮಾಹಿತಿ, ಸ್ವಯಂ ಸೇವಕರು ಭೇಟಿ ಮಾಡುವ ಹಳ್ಳಿ, ಗುಂಪುಗಳ ರಚನೆ, ಮನೆಗಳ ವಿವರ ಪಟ್ಟಿ, ಪ್ರಚಾರ ಸಾಮಗ್ರಿಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಪ್ರತಿ ತಂಡವು ಭೇಟಿ ಮಾಡಬೇಕಾದ ಮನೆಗಳನ್ನು ತರಬೇತಿ ದಿನದಂತೆ ನಿರ್ಧರಿಸಬೇಕಿದೆ.

ಸೋಂಕಿನ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಿ, ಸೋಂಕಿತರಿಗೆ ದೊರೆಯುವ ಸೇವೆಗಳ ಬಗ್ಗೆ ತಿಳಿಸುವ ಮೂಲಕ ಎಚ್‌ಐವಿ ನಿಯಂತ್ರಿಸುವುದು ಅಭಿಯಾನದ ಉದ್ದೇಶ. ಮುಖ್ಯವಾಗಿ ವಲಸಿಗರು, ಕೃಷಿ ಕಾರ್ಮಿಕರು, ಯುವಜನರು, ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು, ಗೃಹಿಣಿಯರು, ಕಾಲೇಜು ವ್ಯಾಸಂಗ ಮಾಡುತ್ತಿರುವ ಹದಿಹರೆಯದ ವಿದ್ಯಾರ್ಥಿ ಸಮುದಾಯ, ಗ್ರಾ.ಪಂ. ಸದಸ್ಯರು, ನಾನಾ ಉದ್ಯೋಗದಲ್ಲಿರುವ ಯುವಜನರನ್ನು ಅಭಿಯಾನದ ಮೂಲಕ ತಲುಪಿ, ಮಾಹಿತಿ ನೀಡಲಾಗುತ್ತದೆ.

‌ು ವರ್ಷಗಳಲ್ಲಿ 840 ಸಾವುಲ್ಲೆಯಲ್ಲಿ 7552 ಮಂದಿ ಎಚ್‌ಐವಿ/ಏಡ್ಸ್‌ ಸೋಂಕಿತರಿದ್ದಾರೆ. ಇವರಲ್ಲಿ 5491 ಮಂದಿ ಅÂಂಟಿ ರಿಟ್ರೋ ವೈರಲ್‌ ಥೆರಪಿ(ಎಆರ್‌ಟಿ) ಕೇಂದ್ರದಲ್ಲಿ ನೋಂದಣಿ ಮಾಡಿಸಿದ್ದು, 3591 ಮಂದಿ ಎಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 104 ಮಂದಿ ಮಕ್ಕಳು. ಕಳೆದ ಏಪ್ರಿಲ್‌ನಿಂದ ಜನವರಿ ಅಂತ್ಯದವರೆಗೆ ಎಚ್‌ಐವಿ ಪರೀಕ್ಷೆಗೆ ಒಲಗಾದ 40,569 ಮಂದಿಯಲ್ಲಿ 570 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಇವರಲ್ಲಿ 539 ಮಂದಿ ಜಿಲ್ಲೆಯ ಎಆರ್‌ಟಿಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ 20,779 ಮಂದಿ ಗರ್ಭಿಣಿಯರ ಎಚ್‌ಐವಿ ಪರೀಕ್ಷೆ ನಡೆಸಿದ್ದು, 21 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. 2009ರಿಂದ ಈವರೆಗೆ ಒಟ್ಟು 840 ಮಂದಿ ಎಚ್‌ಐವಿ/ಏಡ್ಸ್‌ ಸೋಂಕಿತರು ಮೃತಪಟ್ಟಿದ್ದಾರೆ.
 


Trending videos

Back to Top