CONNECT WITH US  

ಸಲಹೆಗಳಿಂದ ಒಡೆದ ಮನಸ್ಸುಗಳ ಬದುಕು ಹಸನು

ಬೀದರ: ಧಾರ್ಮಿಕ ನೆಲೆಯಿರುವ ವ್ಯಕ್ತಿಗಳು ಸಲಹೆ ನೀಡಿದರೆ ಒಡೆದ ಮನಸ್ಸುಗಳ ಬದುಕು ಹಸನಾಗುತ್ತದೆ ಎಂದು ಔರಾದ ಹೆಚ್ಚುವರಿ ದಿವಾಣಿ ನ್ಯಾಯಾಧಿಧೀಶ ಸೋಮಶೇಖರ ಬಾದಾಮಿ ಅಭಿಪ್ರಾಯಪಟ್ಟರು. ನಗರದ ಗಿರಿಜಾ ಸಭಾ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಸ್ಥ ಕುಟುಂಬ ಕೌಟುಂಬಿಕ ಸಲಹಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ನ್ಯಾಯಾಂಗ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ಸಾಮ್ಯತೆ ಇಲ್ಲ. ನ್ಯಾಯಾಂಗ ಆರೋಪಿಗಳಿಗೆ ಶಿಕ್ಷಿಸುತ್ತಿದೆ. ಧರ್ಮ ರೋಗ ಹರಡದಂತೆ ಲಸಿಕೆ ಹಾಕಿ ದಾರಿ ತಪ್ಪಿದವರಿಗೆ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು.

ಅನಕ್ಷರಸ್ಥ ಹಾಗೂ ಮಧ್ಯಮ ಕುಟುಂಬಗಳಲ್ಲಿ ಕೌಟುಂಬಿಕ ಕಲಹಗಳು ಕಡಿಮೆ. ಭೌತಿಕ ಜನಾಂಗದಲ್ಲಿ ಕೌಟುಂಬಿಕ ಕಲಹವೇ ಹೆಚ್ಚು. ಸಣ್ಣತನಕ್ಕೆ ವಿವಾದ ಸೃಷ್ಟಿಸಿಕೊಂಡು ವಿಚ್ಛೇದನ ಪಡೆಯುತ್ತಾರೆ. ಎಲ್ಲ ರಂಗದಲ್ಲಿ ಕೌಟುಂಬಿಕ ಸಮಸ್ಯೆಗಳು ಹೆಚ್ಚುತ್ತಿವೆ. ಮೊದಲು ಎಲ್ಲರೂ ಒಂದೇ ಕುಟುಂಬದಲ್ಲಿ ಪರಸ್ಪರ ಸೌಜನ್ಯದಿಂದ ಬದುಕುತ್ತಿದ್ದರು. ಮಹಿಳೆಯರು ಧಾರ್ಮಿಕವಾಗಿರಬೇಕು. ಅಲ್ಲದೇ ಶಿಕ್ಷಣ ಕ್ಷೇತ್ರದಲ್ಲಿಯೂ ಮುಂದೆ ಬರಬೇಕು. ಕುಟುಂಬದ ಸಮಸ್ಯೆಗಳ ನಿವಾರಣೆಗೆ ಎಲ್ಲರೂ ಒಂದಾಗಿ ಬಾಳಬೇಕು ಎಂದು ಸಲಹೆ ನೀಡಿದರು. ಕೌಟುಂಬಿಕ ವಿವಾದ ಬಗೆಹರಿಸಬೇಕಾದರೆ, ಸಮಸ್ಯೆ ಎಲ್ಲಿ ಉದ್ಭವಾಗಿದೆ ಎಂಬುವುದನ್ನು ಅರಿತುಕೊಂಡರೆ ಪರಿಹರಿಸಲು ಸಾಧ್ಯವಾಗುತ್ತದೆ. ಸಲಹಾ ಕೇಂದ್ರಕ್ಕೆ ನ್ಯಾಯಾಂಗದಿಂದಲೂ ಸಹಕಾರ ಮಾಡುತ್ತೇವೆ. ಸಲಹಾ ಕೇಂದ್ರಕ್ಕೆ ಕಕ್ಷಿದಾರರನ್ನು ಒಪ್ಪಿಸಿ ಕಳುಹಿಸುತ್ತೇವೆ. ಈ ಕೇಂದ್ರ ಅನೇಕ ಕುಟುಂಬಗಳಿಗೆ ದಾರಿದೀಪವಾಗಲಿ ಎಂದು ಶುಭ ಹಾರೈಸಿದರು.

ಕೇಂದ್ರದ ಗೌರವಾಧ್ಯಕ್ಷೆ ಡಾ| ಗಂಗಾಬಿಕಾ ಪಾಟೀಲ ಮಾತನಾಡಿ, ಸತಿ-ಪತಿಗಳು ಒಂದಾಗಿ ಬಾಳಬೇಕು. ಗಂಡ-ಹೆಂಡತಿ ಜಗಳದಿಂದ ಕುಟುಂಬಗಳು ಒಡೆಯುತ್ತಿವೆ. ಗಂಡ-ಹೆಂಡಿರ ಮನ ಒಂದಾದರೆ, ಅದೇ ನಂದಾದೀಪವಾಗುತ್ತದೆ. ಮನೆ ಬೇರೆಯಾದರೂ ಮನಸ್ಸು ಬೇರೆಯಾಗಬಾರದು. ಧರ್ಮದ ತಳಹದಿ ಸಮಾಜ ಮೇಲೆ ಕಟ್ಟಬೇಕು. ಕಟ್ಟಡ ಕಟ್ಟುವಾಗ ಬಿರುಕು ಉಂಟಾಗುತ್ತದೆ. ಇದರ ಪರಿಹಾರಕ್ಕಾಗಿ ಸಲಹಾ ಕೇಂದ್ರ ತೆರೆಯಲಾಗಿದೆ. ಪರಸ್ಪರ ಅರ್ಥಮಾಡಿಕೊಂಡು ಬದುಕಿದರೆ ಬದುಕಿನಲ್ಲಿ ಶಾಂತಿ ಸಿಗುತ್ತದೆ ಎಂದು ಹೇಳಿದರು. ಖಾಧಿದಿ ಗ್ರಾಮೋದ್ಯೋಗ ಸಂಘದ ಅಧ್ಯಕ್ಷ ಮಾಣಿಕಪ್ಪ ಗಾದಾ ಮಾತನಾಡಿ, ಬಹಳಷ್ಟ ಜನರು ಕೌಟುಂಬಿಕವಾಗಿ ಸಮಸ್ಯೆಗಳು ಎದುರಿಸುತ್ತಿದ್ದಾರೆ. ಕೋರ್ಟ್‌-ಕಚೇರಿಗಿಂತ ಕೌಟುಂಬಿಕ ಸಲಕಾ ಕೇಂದ್ರಕ್ಕೆ ಬಂದರೆ ಶೀಘ್ರವೇ ಕೌಟುಂಬಿಕ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕೇಂದ್ರದ ಅಧ್ಯಕ್ಷ ಪ್ರೊ| ಎಸ್‌.ಬಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಕೌಟುಂಬಿಕ ಸಲಹಾ ಕೇಂದ್ರದ ಗೌರವಾಧ್ಯಕ್ಷರಾಗಿ ಡಾ| ಗಂಗಾಬಿಕಾ ಪಾಟೀಲ, ಅಧ್ಯಕ್ಷರಾಗಿ ಪ್ರೊ| ಎಸ್‌.ಬಿ. ಬಿರಾದಾರ, ಉಪಾಧ್ಯಕ್ಷರಾಗಿ ಡಾ| ವಿಜಯಶ್ರೀ ಭಶೆಟ್ಟಿ, ಮಂಗಲಾ ಭಾಗವತ, ಪ್ರಧಾನ ಕಾರ್ಯದರ್ಶಿಯಾಗಿ ವೀರಶೆಟ್ಟಿ ಶಿವಶೆಟ್ಟಿ, ಸಹ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಬಿರಾದಾರ, ಸಲಹಾ ಸದಸ್ಯರಾಗಿ ಡಾ| ರಾಘವೇಂದ್ರ ವಾಘಲೆ, ಮಲ್ಲಿಕಾರ್ಜುನ ಮೈಲಾರೆ, ಉಮಾದೇವಿ ಚಿಲ್ಲರ್ಗೆ, ಮಹಾದೇವಿ ಬಿರಾದಾರ, ಸೂರ್ಯಕಾಂತ ಮಠಪತಿ, ಚಂದ್ರಶೇಖರ ಹಂಗರಗಿ ಆಯ್ಕೆಯಾಗಿದ್ದಾರೆ. ಹೆಚ್ಚಿನ ಮಾಹಿತಿಗೆ ಸ್ವಸ್ಥ ಕುಟುಂಬ ಕೌಟುಂಬಿಕ ಸಲಹಾ ಕೇಂದ್ರ, ಖಾದಿ ಗ್ರಾಮೋದ್ಯೋಗ ಸಂಘ ಕಟ್ಟಡ, ಬೀದರ. ಮೊ. 97410 89299, 92429 32673 ಗೆ ಸಂಪರ್ಕಿಸಬೇಕು ಎಂದು ನಿವೃತ್ತ ಎಎಸ್‌ಐ ಚಂದ್ರಶೇಖರ ಹಂಗರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Trending videos

Back to Top