CONNECT WITH US  

ಮಲಯಾಳಂಗೆ ಮೈತ್ರಿ

ಪುನೀತ್‌ ಮತ್ತು ಮೋಹನ್‌ ಲಾಲ್‌ ಅಭಿನಯಿಸಿರುವ ಮತ್ತು ಎಲ್ಲರಿಂದಲೂ ಪ್ರಶಂಸೆಗೆ ಒಳಗಾಗಿರುವ "ಮೈತ್ರಿ' ಚಿತ್ರವು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಹಾಗಂತ ಕನ್ನಡದ ಚಿತ್ರವು ಮಲಯಳಂಗೆ ಡಬ್‌ ಆಗಿ ಬಿಡುಗಡೆಯಾಗುತ್ತಿದೆ ಎಂದುಕೊಂಡರೆ ತಪ್ಪು. ನಿರ್ದೇಶಕ ಗಿರಿರಾಜ್‌ ಸದ್ದಿಲ್ಲದೆ ಅಲ್ಲಿನ ವಾತಾವರಣಕ್ಕೆ ಮತ್ತು ಅಲ್ಲಿನ ಕಲಾವಿದರನ್ನಿಟ್ಟುಕೊಂಡು ಶೇ 50ರಷ್ಟು ರೀಶೂಟ್‌ ಮಾಡಿಕೊಂಡಿದ್ದಾರೆ. ಅದನ್ನೇ ಬಿಡುಗಡೆ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ.

"ಕನ್ನಡವಲ್ಲದೆ ಮಲಯಾಳಂನಲ್ಲೂ ಚಿತ್ರ ಮಾಡಬೇಕೆಂಬ ಐಡಿಯಾ ಇತ್ತು. ಹಾಗಾಗಿ ಅಲ್ಲಿನ ನೇಟಿವಿಟಿಗೆ ಮತ್ತು ಅಲ್ಲಿನ ಕಲಾವಿದರನ್ನಿಟ್ಟುಕೊಂಡು ಶೇ 50ರಷ್ಟು ರೀಶೂಟ್‌ ಮಾಡಿದ್ದೇವೆ. ಇಲ್ಲಿ ರವಿ ಕಾಳೆ ಮಾಡಿದ ಪಾತ್ರವನ್ನು ಅಲ್ಲಿ ಕಲಾಭವನ್‌ ಮಣಿ ಮಾಡಿದ್ದಾರೆ. ಇನ್ನು ಅನು ಜೋಸೆಫ್ ಮುಂತಾದ ಕಲಾವಿದರು ಆ ಚಿತ್ರದಲ್ಲಿದ್ದಾರೆ. ಚಿತ್ರ ಡಬ್ಬಿಂಗ್‌ ಮುಗಿದು ಇದೀಗ ಡಿಟಿಎಸ್‌ ಹಂತದಲ್ಲಿದೆ. ಮಾರ್ಚ್‌ ಎರಡನೆಯ ವಾರದಲ್ಲಿ ಮಲಯಾಳಂ "ಮೈತ್ರಿ' ಬಿಡುಗಡೆಯಾಗಲಿದೆ' ಎಂದರು.

Trending videos

Back to Top