CONNECT WITH US  

ಸಂಗೀತದಿಂದ ಚಿತ್ತಶುದ್ದಿ

ಮೈಸೂರು: ಸಂಗೀತ ಕೇಳುವವರ ಮನ ಮುಟ್ಟುವುದರ ಜತೆಗೆ ಅವರ ಚಿತ್ತವನ್ನು ಶುದ್ಧಿ ಮಾಡುತ್ತದೆ ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸರ್ವಮಂಗಳಾ ಶಂಕರ್‌ ಅಭಿಪ್ರಾಯಪಟ್ಟರು. ಮೈಸೂರು ವಿವಿ ಮಹಾರಾಜ ಕಾಲೇಜು ಪಠ್ಯೇತರ ಚಟುವಟಿಕೆಗಳ ಸಮಿತಿ ಕಾಲೇಜಿನ ಶತಮಾನೋತ್ಸವ ಸಮಾರಂಭದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀಮತಿ ಪದ್ಮಜಾ ಪ್ರಸಾದ್‌ ಸ್ಮಾರಕ ಅಂತರ ಕಾಲೇಜು ಸಂಗೀತ ಸ್ಪ$ರ್ಧೆಗಳ ಕಾರ್ಯಕ್ರಮದಲ್ಲಿ ಪದ್ಮಜಾ ಪ್ರಸಾದ್‌ ಭಾವಚಿತ್ರಕ್ಕೆ ಪುಷ್ಪಾ$ರ್ಚನೆ ಮಾಡಿ ಅವರು ಮಾತನಾಡಿದರು.

ಎಲ್ಲರನ್ನು ಮುಟ್ಟುವ, ಎಲ್ಲರ ಎದೆಯನ್ನು ತಟ್ಟುವಂತಹ ದಿವ್ಯ ಶಕ್ತಿ ಸಂಗೀತಕ್ಕಿದೆ. ಸಂಗೀತ ಕೇಳುವವರ ಮನ ಸೆಳೆಯುತ್ತದೆ, ಮುದಗೊಳಿಸುತ್ತದೆ. ಹಾಗೆಯೇ ಅವರ ಚಿತ್ತ ಶುದ್ಧಿ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಸಹ ಅಷ್ಟೇ ಮುಖ್ಯ. ಇದರಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮನ್ನು ನಾವು ಮುದಗೊಳಿಸಿಕೊಳ್ಳಬೇಕು. ಜಗತ್ತಿನಲ್ಲಿ ಅತ್ಯುತ್ತಮ ಕಲಾ ಪ್ರತಿಭೆಯಾಗಿ ನಿಲ್ಲಬೇಕು. ಜೊತೆಗೆ ನಮ್ಮ ದೇಶದ, ನಮ್ಮ ಮನೆಯ ಒಳಿತಿಗಾಗಿ ದುಡಿಯಬೇಕು ಎಂದು ಅವರು ಕರೆ ನೀಡಿದರು.

ಮೈಸೂರು ವಿವಿ ಕುಲಸಚಿವ ಪೊ›.ಸಿ.ಬಸವರಾಜು ಮಾತನಾಡಿ, ಸಂಗೀತಕ್ಕೆ ಯಾವುದೇ ಧರ್ಮ, ಜಾತಿಯ ಸೋಂಕಿಲ್ಲ. ಎಲ್ಲವನ್ನು, ಎಲ್ಲರನ್ನು ಒಳಗೊಂಡಂತೆ ಪ್ರತಿಯೊಬ್ಬರನ್ನು ಅತ್ಯುತ್ತಮವಾಗಿ ರೂಪಿಸುವ ಶಕ್ತಿ ಸಂಗೀತಕ್ಕಿದೆ. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಶಿಕ್ಷಣದ ಜೊತೆ ಜೊತೆಗೆ ಸಾಂಸ್ಕೃತಿಕ ಶಿಕ್ಷಣವನ್ನು ಸಹ ಪಡೆದುಕೊಳ್ಳಬೇಕು. ಅದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ತಿಳಿಸಿದರು.

ಈಗಾಗಲೇ ಎಲ್ಲಾ ಸಂಸ್ಕೃತಿ, ಸಂಸ್ಕಾರಗಳಿಗಿಂತ ಭಾರತೀಯ ಸಂಸ್ಕೃತಿ ಉತ್ತಮವಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿ ಗಳು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ದೇಶೀಯ ಸಂಸ್ಕೃತಿಗೆ ಒತ್ತು ನೀಡಬೇಕು. ಆ ಮೂಲಕ ದೇಶೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು.

ನ್ಯಾಕ್‌ ಸಮಿತಿ ಭೇಟಿ : ಯಾವುದೇ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸುವುದೆಂದರೆ ಸುಲಭ ಮಾತಲ್ಲ. ಅದಕ್ಕೆ ಉತ್ತಮ ಹೆಸರು ತಂದುಕೊಡಲು ಒಬ್ಬನಿಂದಲೂ ಸಹ ಸಾಧ್ಯವಿಲ್ಲ. ಇದಕ್ಕೆ ಅಧ್ಯಾಪಕರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರ ಸಹಕಾರ ಮುಖ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅತೀ ಶೀಘ್ರದಲ್ಲೇ ನ್ಯಾಕ್‌ ಕಮಿಟಿ ಮಹಾರಾಜ ಕಾಲೇಜಿಗೆ ಭೇಟಿ ನೀಡಲಿದ್ದು, ಪ್ರತಿಯೊಬ್ಬರು ಶಿಸ್ತುಬದ್ಧವಾಗಿರಬೇಕು ಎಂದು ಸೂಚನೆ ನೀಡಿದರು.

ಮಂಗಳವಾರ ನಡೆದ ಸಂಗೀತ ಸ್ಪ$ರ್ಧೆಯಲ್ಲಿ ಜಿಲ್ಲೆಯ 10 ಕಾಲೇಜುಗಳಿಂದ 75ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿ ದ್ದರು. ಅದರಲ್ಲಿ ನಗರದ ಲಲಿತಾಕಲಾ ಕಾಲೇಜು, ವಿದ್ಯಾವರ್ಧಕ ಕಾಲೇಜು, ಆದಿಚುಂಚನಗಿರಿ, ವಿದ್ಯಾವಿಕಾಸ, ಜೆಎಸ್‌ಎಸ್‌ ಊಟಿ ರಸ್ತೆ ಮತ್ತು ಚಾಮರಾಜನಗರ ಜೆಎಸ್‌ಎಸ್‌ ಹಾಗೂ ಬಿ.ಇಡಿ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಮಹಾರಾಜ ಕಾಲೇಜು ಪ್ರಾಂಶುಪಾಲ ಡಾ.ಬಿ.ನಾಗರಾಜ ಮೂರ್ತಿ, ಆಡಳಿತಾಧಿಕಾರಿ ಡಾ.ವಸಂತ, ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಆರ್‌.ಎನ್‌.ಪದ್ಮನಾಭ, ಪದ್ಮಜಾ ಪ್ರಸಾದ್‌ ಸಹೋದರ ಎನ್‌.ಚಂದ್ರಶೇಖರ್‌, ಪತ್ನಿ ಉಷಾ ಚಂದ್ರಶೇಖರ್‌, ಕಾಲೇಜಿನ ಪಠ್ಯೇತರ ಚಟುವಟಿಕೆ ಸಮಿತಿ ಸಂಚಾಲಕ ಡಾ.ಕೆ.ತಿಮ್ಮಯ್ಯ ಮತ್ತಿತರರು ಹಾಜರಿದ್ದರು.
 

Trending videos

Back to Top