CONNECT WITH US  

ಮಡೆ ಮಡೆ ಸ್ನಾನ ದೂರಾಗಲಿ: ನಿರ್ದೇಶಕ ಗಿರಿರಾಜ್‌

ಕೋಲಾರ: ಮಡೆಮಡೆ ಸ್ನಾನ ಪದ್ದತಿ ಮಕ್ಕಳೊಳಗೆ ದ್ವೇಷ ಹುಟ್ಟಿಸುವ, ಮನಸ್ಸುಗಳನ್ನು ಕಲುಷಿತಗೊಳಿಸುವಂತಾಗಿದ್ದು ಇದರ ನಿಯಂತ್ರಣಕ್ಕೆ ಕಾನೂನುಗಳು ಬೇಕು, ಮನುಷ್ಯ ಜಾತಿ ತಾನೊಂದೆವಲಂ ಎಂಬುದು ಸಾಮಾಜಿಕ ಸತ್ಯವಾಗಲಿ ಎಂದು ಚಲನಚಿತ್ರ ನಿರ್ದೇಶಕ ಬಿ.ಎಂ. ಗಿರಿರಾಜ್‌, ಆಶಿಸಿದರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆಯುತ್ತಿರುವ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇ ಗೋಷ್ಠಿಯಲ್ಲಿ, ಮಡೆಮಡೆಸ್ನಾನ ಮತ್ತುಸಾಂಸ್ಕೃತಿಕ ರಾಜಕಾರಣ ಕುರಿತು ಮಾತನಾಡುತ್ತಿದ್ದರು.

ತಮ್ಮ ನಿರ್ದೇಶನದ "ಮೈತ್ರಿ'ಚಲನಚಿತ್ರದಲ್ಲಿ50 ಅಡಿಯ ಆಂಜನೇಯನ ಮೂರ್ತಿಯ ಬಗ್ಗೆಅಗ್ರಪೂಜೆ ಗಣಪತಿಗೆ ಸಲ್ಲದೆ, ಆಂಜನೇಯನಿಗೆ ಯಾಕೆ ಮಾಡ್ತೀರಿ ಎಂದು ಸಾಮಾಜಿಕ ಜಾಲತಾಣದಲ್ಲಿಪ್ರತಿಕ್ರೀಯೆ ವ್ಯಕ್ತವಾಗಿದ್ದನ್ನು ಉಲ್ಲೇಖೀಸಿ, ಇದೀಗ ದೇವರು-ದೇವರುಗಳ ಮದ್ಯೆ ಸಂಘ ಹುಟ್ಟಿಕೊಂಡು ಒಳಗೆ ಒಳಗೆ ಒಡೆದು ಆಶಯಗಳು ಕೂಡ ಈಡೇರದಂತಾಗುತ್ತಿದೆ ಎಂದರು.

ಮಾನವ ಕೌಶಲ ಮತ್ತು ತಂತ್ರಜಾnನ ಕುರಿತು ಉಪನ್ಯಾಸಕ ಎಸ್‌.ಪ್ರವೀಣ್‌ ವಿಷಯ ಮಂಡಿಸುತ್ತಾ, ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಕೌಶಲವನ್ನು ಬಳಸುವುದರಿಂದ ಆರಂಭಗೊಂಡು ಮಾನವ ವಿಕಾಸವಾದಂತೆ ಕೌಶಲವೂ ಅಭಿವೃದ್ಧಿಹೊಂದಿತು.
ಕಣ್ಣು ಮತ್ತುಕೈಗಳ ಅನುಸಂಧಾನದಿಂದ ನಿಖರ ಮತ್ತುಜಾಗೃತೆಯಿಂದ ಕೆಲಸ ಮಾಡುವ ಬಲ್ಲವನಾಗಿದ್ದಾನೆ.ಮಾನವ ತನ್ನ ಕೌಶಲತೆಯನ್ನು ಹರಡುವ ಅನಿವಾರ್ಯತೆ ಇದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಕೆ.ಸಿ. ರಘು, ಭಾರತದ ಜಿಡಿಪಿ ಶೇ. 7.4ರಷ್ಟಿದೆ. ಆದರೆ ಪರಿಸರ ನಾಶದ ಲೆಕ್ಕ ಹಾಕಿದರೆ ಜಿಡಿಪಿಶೇ. 6ಕ್ಕಿಳಿಯುತ್ತದೆ. ಈ ಯುಗವನ್ನು 6ನೇ ಮಹಾಪ್ರಳಯ ಎಂದು ಕರೆಯಲಾಗುತ್ತದೆ. ಭೂಮಿಯಲ್ಲಿನ 30 ಸಾವಿರ ಸಸ್ಯಸಂಕುಲಗಳು ಖಾಲಿಯಾಗಿದೆ. ಮಗುವಿಗೆ ತಾಯಿಯ ಹಾಲೇ ಶ್ರೇಷ್ಠ ಎಂದು ಶಿಕ್ಷಣ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಇಂದು ಆಹಾರ ಪದ್ಧತಿ ಅರ್ಥಿಕತೆಯ ಸ್ವರೂಪ ಪಡೆದಿದೆ. ಮಾರುಕಟ್ಟೆಅಭಿವೃದ್ಧಿಅಳೆಯುವ ಮಾಪನವಾಗಿದ್ದು, ನೋಡುವ ದೃಷ್ಠಿಕೋನ ಬದಲಾಗಬೇಕು. ಮೈ ಬಣ್ಣ ಕಪ್ಪಗಿದ್ದಲ್ಲಿಎಲ್ಲ ಅಧ್ಯಯನಗಳ ಪ್ರಕಾರ ಕ್ಯಾನ್ಸರ್‌ ಬರುವುದಿಲ್ಲಎಂದು ದೃಢಪಟ್ಟಿದೆ. ಇಂದು ರಾಗಿಯನ್ನುಬಿಳಿ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
 

Trending videos

Back to Top