CONNECT WITH US  

ಸಚಿವ ಜಾರಕಿಹೊಳಿಗೆ ಇಂದು ಹೆಚ್ಚುವರಿ ಖಾತೆ?

ಬೆಂಗಳೂರು: ತಮ್ಮ ಜತೆ ಮುನಿಸಿಕೊಂಡಿದ್ದಾಗ ಸಚಿವ ಸತೀಶ್‌ ಜಾರಕಿಹೊಳಿಗೆ ನೀಡಿದ್ದ ಭರವಸೆಯಂತೆ ಗುರುವಾರ ಹೆಚ್ಚುವರಿ ಖಾತೆಯೊಂದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ದಯಪಾಲಿಸುವ ಸಾಧ್ಯತೆಯಿದೆ. ಅಬಕಾರಿ ಖಾತೆ ಬದಲಾಯಿಸಲಿಲ್ಲ ಎಂದು ಬೇಸರಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸತೀಶ್‌ ಜಾರಕಿಹೊಳಿಗೆ ಏಪ್ರಿಲ್‌ನಲ್ಲಿ ಸಂಪುಟ ಪುನಾರಚನೆ ಮಾಡುವವರೆಗೂ ಹೆಚ್ಚುವರಿ ಖಾತೆಯೊಂದನ್ನು ನೀಡುವುದಾಗಿ ಮುಖ್ಯಮಂತ್ರಿ ಮನವೊಲಿಸಿದ್ದರು. ಈ ಸಂದರ್ಭದಲ್ಲಿ ಸಣ್ಣ ಕೈಗಾರಿಕೆ ಖಾತೆಯನ್ನು ಜಾರಕಿಹೊಳಿ ಅವರಿಗೆ ನೀಡುವ ಸಾಧ್ಯತೆಯಿದೆ ಎನ್ನಲಾಗಿತ್ತು. ಮೂಲಗಳ ಪ್ರಕಾರ ಯಾವ ಖಾತೆ ನೀಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿಯವರು ಗುರುವಾರ ನಿರ್ಧಾರ ಕೈಗೊಳ್ಳಲಿದ್ದು, ತಮ್ಮ ಬಳಿ ಇರುವ ನಾಲ್ಕು ಖಾತೆಗಳ ಪೈಕಿ (ರೇಷ್ಮೆ, ಸಣ್ಣ ಕೈಗಾರಿಕೆ, ಬೃಹತ್‌ ಕೈಗಾರಿಕೆ ಹಾಗೂ ಗಣಿ) ಒಂದು ಖಾತೆ ನೀಡುವ ಸಂಭವವಿದೆ. ಬಹುತೇಕ ಸಣ್ಣ ಕೈಗಾರಿಕೆ ಅಥವಾ ರೇಷ್ಮೆ ಖಾತೆಯನ್ನು ಜಾರಕಿಹೊಳಿಗೆ ನೀಡಬಹುದು ಎನ್ನಲಾಗಿದೆ.
 

Trending videos

Back to Top