CONNECT WITH US  

ಜಾರಕಿಹೊಳಿಗೆ ಸಣ್ಣ ಕೈಗಾರಿಕೆ ನೀಡಿ ಅಬಕಾರಿ ಖಾತೆ ಹಿಂಪಡೆದ ಸಿದ್ದು

ಬೆಂಗಳೂರು: ತಮ್ಮ ಆಪ್ತ ಸತೀಶ್‌ ಜಾರಕಿ ಹೊಳಿ ಬೇಡಿಕೆಯಂತೆ ಅಬಕಾರಿ ಖಾತೆಯನ್ನು ಹಿಂಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಣ್ಣ ಕೈಗಾರಿಕೆ ಖಾತೆ ನೀಡುವ ಬಗ್ಗೆ ಗೌರ್ನರ್‌ಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಆಪ್ತ ಸತೀಶ್‌ ಜಾರಕಿಹೊಳಿ ಅವರ ಬೇಡಿಕೆಯಂತೆ ಅಬಕಾರಿ ಖಾತೆಯನ್ನು ಹಿಂಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಣ್ಣ ಕೈಗಾರಿಕೆ ಖಾತೆ ಹಂಚಿಕೆ ಮಾಡಲು ಮುಂದಾಗಿದ್ದಾರೆ.

ಖಾತೆ ಬದಲಾವಣೆ ಬಗ್ಗೆ ರಾಜ್ಯಪಾಲ ವಜುಭಾಯ್‌ ವಾಲಾ ಅವರಿಗೆ ಗುರುವಾರ ಮುಖ್ಯಮಂತ್ರಿ ಕಚೇರಿಯಿಂದ ಪತ್ರ ರವಾನೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ತಮ್ಮೊಂದಿಗೆ ಮುನಿಸಿಕೊಂಡು ರಾಜೀನಾಮೆಗೆ ಮುಂದಾಗಿದ್ದ ಸತೀಶ್‌ ಜಾರಕಿಹೊಳಿ ಅವರಿಗೆ ವಿಧಾನಮಂಡಲ ಅಧಿವೇಶನದ ನಂತರ ಅಬಕಾರಿ ಖಾತೆಯೊಂದಿಗೆ ಹೆಚ್ಚುವರಿ ಖಾತೆಯನ್ನು ನೀಡುವ ಭರವಸೆಯನ್ನು ಸಿಎಂ ನೀಡಿದ್ದರು ಎನ್ನಲಾಗಿತ್ತು. ಆದರೆ, ಇದೀಗ ಹೆಚ್ಚುವರಿಯಾಗಿ ಖಾತೆ ನೀಡುವ ಬದಲು ಜಾರಕಿಹೊಳಿ ಅವರ ಬೇಡಿಕೆಯಂತೆ ಅಬಕಾರಿ ಖಾತೆಯನ್ನು ಹಿಂಪಡೆದು ಸಣ್ಣ ಕೈಗಾರಿಕೆ ಖಾತೆಯನ್ನು ನೀಡಲು ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ.


Trending videos

Back to Top