CONNECT WITH US  

ನೂತನ ಗರಡಿ ಮನೆ ಉದ್ಘಾಟನೆ

ಲಕ್ಷ್ಮೇಶ್ವರ: ಗದಗ ಜಿಲ್ಲಾ ಭಾರತೀಯ ಶೈಲಿ ಕುಸ್ತಿ ಫೈಲ್ವಾನರ ಸಂಘ(ರಿ) ಲಕ್ಷ್ಮೇಶ್ವರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗರಡಿ ದೊಡೂxರ, ಹಮಾಲರ ಸಂಘ ಎಪಿಎಂಸಿ ಯಾರ್ಡ್‌ ಲಕ್ಷ್ಮೇಶ್ವರ ಇವರ ಸಂಯುಕ್ತಾಶ್ರಯದಲ್ಲಿ ದೊಡೂxರ ಗ್ರಾಮದಲ್ಲಿ ರಾಷ್ಟ್ರಮಟ್ಟದ ಆಹ್ವಾನಿತ ಮಹಿಳಾ ಮತ್ತು ಪುರುಷ ಕುಸ್ತಿ ಪಂದ್ಯಾವಳಿ ಹಾಗೂ ನೂತನ ಗರಡಿ ಮನೆ ಉದ್ಘಾಟನೆ ಮತ್ತು ಸಂಘದ 10ನೇ ವಾರ್ಷಿಕೋತ್ಸವ ಸಮಾರಂಭ ಗುರುವಾರ ಜರುಗಿತು. ಸಾನ್ನಿಧ್ಯ ವಹಿಸಿದ್ದ ಶಿರಹಟ್ಟಿ ಫಕ್ಕೀರಸ್ವಾಮಿಮಠದ ಜಗದ್ಗುರು ಫಕ್ಕೀರಸಿದ್ಧರಾಮ ಮಹಾಸ್ವಾಮೀಜಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೂತನ ಗರಡಿ ಮನೆ ಉದ್ಘಾಟಿಸಿ ಮಾತನಾಡಿ, ಭಾರತೀಯ ಕ್ರೀಡೆಗಳಲ್ಲಿ ಅತ್ಯಂತ ಪುರಾತನ ಇತಿಹಾಸ ಹೊಂದಿರುವ ಕುಸ್ತಿ ಮತ್ತು ಕಬಡ್ಡಿ ಪ್ರಚಲಿತವಾಗಿದ್ದವು. ಆದರೆ ಕಾಲ ಬದಲಾದಂತೆ ಬೇರೆ ಬೇರೆ ಕ್ರೀಡೆಗಳ ಪ್ರಭಾವ ಹೆಚ್ಚಿ ಕುಸ್ತಿ ಮತ್ತು ಕಬಡ್ಡಿ ಕ್ರೀಡೆಗಳು ನಶಿಸುತ್ತಿವೆ. ಇದರಿಂದಾಗಿ ದೇಹದ ಮೇಲೆ ಪರಿಣಾಮಗಳುಂಟಾಗಿ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದರು.

ಪುರುಷರ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು, ಕುಸ್ತಿ ಮೂಲ ಕಲೆಯಾಗಿದೆ. ಹಿಂದಿನ ಕಾಲದಲ್ಲಿ ರಾಜಮಹಾರಾಜರು ಈ ಕಲೆಯನ್ನು ಪೋಷಿಸುತ್ತಿದ್ದರು. ಶ್ರೀ ಕೃಷ್ಣ ದೇವರಾಯರ ಕಾಲದಲ್ಲಿ ಕುಸ್ತಿ ಕ್ರೀಡೆಗೆ ಹೆಚ್ಚು ಒತ್ತು ನೀಡಿದ್ದರು ಎಂದರು. ಮಹಿಳಾ ಕುಸ್ತಿ ಪಂದ್ಯಾವಳಿಯನ್ನು ರಾಜ್ಯ ಅಂಬೇಡ್ಕರ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಲಾಜಮ್ಮ ಮತ್ತು ಜಿಪಂ ಅಧ್ಯಕ್ಷೆ ಶಾಂತವ್ವ ದಂಡಿನ, ತಾಪಂ ಅಧ್ಯಕ್ಷೆ ಶಾರದಾ ಕವಲೂರ ಉದ್ಘಾಟಿಸಿ ಮಾತನಾಡಿದರು. ಮೈಲಾರ ಕ್ಷೇತ್ರದ ಧರ್ಮಾಧಿಧಿಕಾರಿ ಶ್ರೀ ಗುರು ವೆಂಕಪ್ಪಯ್ಯ ಒಡೆಯರ್‌ ಹಾಗೂ ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಎಸ್‌.ಎನ್‌.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಕ್ರೀಡಾಕೂಟದ ಪ್ರಾಯೋಜಕ ಶಿವಾನಂದ ಬೆಂತೂರ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಉಗ್ರಾಣ ನಿಗಮ ಅಧ್ಯಕ್ಷ ಜಿ.ಎಸ್‌.ಗಡ್ಡದೇವರಮಠ, ಜಿಪಂ ಅಧ್ಯಕ್ಷೆ ಶಾಂತವ್ವ ದಂಡಿನ, ತಾಪಂ ಅಧ್ಯಕ್ಷೆ ಶಾರದಾ ಕವಲೂರ, ಚನ್ನಪ್ಪ ಜಗಲಿ, ಎಚ್‌.ಎನ್‌.ಅಮರಾಪುರ,ಎಸ್‌.ಪಿ.ಬಳಿಗಾರ, ಪಿಎಸ್‌ಐ ರವಿಚಂದ್ರ ಡಿ.ಬಿ, ಬಸಣ್ಣ ಹಂಜಿ, ಚಂದ್ರಶೇಖರ ಮುದಕಣ್ಣವರ, ಎಸ್‌.ಪಿ.ಬಳಿಗಾರ, ರವಿಕಾಂತ ಅಂಗಡಿ, ಐ.ಎಸ್‌.ಪೂಜಾರ, ದೇವಪ್ಪ ಗಡೇದ, ಅಮರಪ್ಪ ಗುಡಗುಂಟಿ ಸೇರಿದಂತೆ ಇತತರು ಇದ್ದರು. ಶಿಕ್ಷಕ ಎನ್‌.ವೈ.ಕುರಿ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತ ಕುಸ್ತಿಪಟು ಪ್ರೇಮಾ ಹುಚ್ಚಣ್ಣವರ, ರಾಷ್ಟ್ರೀಯ ಕುಸ್ತಿಪಟು ಜಯಶ್ರೀ ಗುಟಗುಂಟಿ, ಮೇಘಾ ಗಡೇದ, ರಾಷ್ಟ್ರೀಯ ಸೆ„ಕ್ಲಿಂಗ್‌ ಕ್ರೀಡಾಪಟು ಹಾಗೂ ಕುಸ್ತಿಪಟು ಬಸೀರಾ ವಕಾರದ ಅವರನ್ನು ಸನ್ಮಾನಿಸಲಾಯಿತು.

Trending videos

Back to Top