CONNECT WITH US  

ಶ್ರೀ ಪಾಂಡುರಂಗ ದೇವಸ್ಥಾನ ಉದ್ಘಾಟನೆ

ಲಕ್ಷ್ಮೇಶ್ವರ: ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಜೀಣೊìàದ್ಧಾರಗೊಳಿಸಿದ ಶ್ರೀ ಪಾಂಡುರಂಗ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ, ವಾಣಿಜ್ಯ ಸಂಕೀರ್ಣ ಉದ್ಘಾಟನೆ, ಸಮುದಾಯ ಭವನ ಅಡಿಗಲ್ಲು, ಗಣಪತಿ ದೇವಸ್ಥಾನ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮಗಳು ಶುಕ್ರವಾರ ಜರುಗಿದವು. ಮುಕ್ತಿ ಮಂದಿರ ಧರ್ಮಕ್ಷೇತ್ರದ ವಿಮಲರೇಣುಕರು ಕಳಸಾರೋಹಣ ನೆರವೇರಿಸಿದರು. ಪಂಢರಪುರದ ಶ್ರೀಗಳು ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದರು. ವಾಣಿಜ್ಯ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಅವರು, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜಗಳು ಛಿದ್ರವಾಗುತ್ತಿರುವುದು ವಿಷಾದನೀಯ. ಸಮಾಜವನ್ನು ಒಗ್ಗೂಡಿಸುವ ದಿಕ್ಕಿನಲ್ಲಿ ದೇವಸ್ಥಾನಗಳು ಮಹತ್ತರ ಪಾತ್ರವಹಿಸುತ್ತಿವೆ. ಅಲ್ಲದೇ ದೇವಸ್ಥಾನಗಳು ಶ್ರದ್ಧೆ, ಗೌರವ ಮತ್ತು ಆತ್ಮಜಾಗೃತಿ ಹೆಚ್ಚಿಸಿ ಭಕ್ತಿಯನ್ನುಂಟು ಮಾಡುತ್ತಿವೆ ಎಂದರು.

ಸಮಾಜ ಎಂದರೆ ಕೇವಲ ಯಾವುದೋ ಒಂದು ಜಾತಿಗೆ ಸೀಮಿತವಾಗದೇ ಸರ್ವೆà ಜನಃ ಸುಖೀನೋಭವಂತು ಎನ್ನುವಂತೆ ಸರ್ವ ಜನರ ಸೇವೆ, ಲೋಕ ಕಲ್ಯಾಣವಾಗಿದೆ. ಆದರೆ ಹೆಚ್ಚುತ್ತಿರುವ ವೈಷಮ್ಯಗಳಿಂದಾಗಿ ಸಮಾಜದ ಶಾಂತಿ ಮತ್ತು ಸ್ವಾಸ್ಥ Â ಹಾಳಾಗುತ್ತಿದೆ. ಸರ್ವ ಜನಾಂಗದವರು ಪೂಜಿಸುವ ಏಕೈಕ ದೇವರು ಪಾಂಡುರಂಗ ರುಕ್ಮಿàಣಿ. ಪಂಢರಾಪುರಕ್ಕೆ ದಿಂಡಿಯಾತ್ರೆ ಮಾಡುವ ಮೂಲಕ ಪಾಂಡುರಂಗನ ಭಜನೆ ಮಾಡುತ್ತ ಸಾಗುವವರು ಇಡೀ ಸಮಾಜಕ್ಕೆ ಒಳಿತು ಬಯಸುವವರಾಗಿದ್ದಾರೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು, ಲಕ್ಷ್ಮೇಶ್ವರ ಪಟ್ಟಣದಲ್ಲಿ ಕೆಲವೇ ಸಂಖ್ಯೆಯಲ್ಲಿರುವ ಭಾವಸಾರ ಕ್ಷತ್ರಿಯ ಸಮಾಜದವರು ಇತರ ಸಮಾಜದವರೊಂದಿಗೆ ಹೊಂದಿರುವ ಉತ್ತಮ ಬಾಂಧವ್ಯ ಇಂಥ ದೊಡ್ಡ ಪ್ರಮಾಣದ ದೇವಸ್ಥಾನ ನಿರ್ಮಾಣ ಮತ್ತು ಅದರಡಿ ವಿವಿಧ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿಸಲು ಸಾಧ್ಯ ಎಂದರು.

ಸಮಾರಂಭದಲ್ಲಿ ನಿಗಮಗಳ ಅಧ್ಯಕ್ಷರಾದ ಜಿ.ಎಸ್‌.ಗಡ್ಡದೇವರಮಠ, ಟಿ.ಈಶ್ವರ, ಮಾಜಿ ಸಚಿವ ಸಿ.ಎಂ.ಉದಾಸಿ, ಮಾಜಿ ಶಾಸಕ ಎಸ್‌.ಎನ್‌.ಪಾಟೀಲ ಮಾತನಾಡಿದರು. ಪಂಢರಾಪುರದ ಶ್ರೀ ಚೈತನ್ಯ ಸದ್ಗುರು ಹ.ಭ.ಪ ಗೋಪಾಲ ಮಹಾರಾಜ ವಾಸಕರ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ರಾಮಣ್ಣ ಲಮಾಣಿ, ಪುರಸಭೆ ಅಧ್ಯಕ್ಷೆ ಗಂಗಮ್ಮ ಗದ್ದಿ, ಪ್ರಕಾಶ ಲಿಂಬಯ್ಯಸ್ವಾಮಿಮಠ, ನಾರಾಯಣರಾವ್‌ ತಾತೂಸ್ಕರ, ಸುರೇಶ ಕಪಟಕರ, ಚಂಬಣ್ಣ ಬಾಳಿಕಾಯಿ, ತಾರಾ ವೆರ್ಣೇಕರ, ಫಕ್ಕೀರಪ್ಪ ಬೋಮಲೇ, ಶ್ರೀನಿವಾಸ ಮಾಂಡ್ರೆ, ಕಾಶಿನಾಥ ಭೋಮಲೇ, ವೆಂಕಟೇಶ ಮಾತಾಡೆ, ಸತೀಶ ಮಾಂಡ್ರೆ, ಅರುಣ ನವಲೆ, ವಾಸು ಭೋಮಲೆ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಕಿರಣ ನವಲೆ ಸ್ವಾಗತಿಸಿದರು. ರಮೇಶ ನವಲೆ ನಿರೂಪಿಸಿದರು. ವೆಂಕಟೇಶ ಮಾತಾಡೆ ವಂದಿಸಿದರು.

Trending videos

Back to Top