CONNECT WITH US  

ಇದು ಮೆಕ್ಸಿಕೋದ ಡಿಶುಂ ಡಿಶುಂ ಮೇಳ!

ಯುವಕರು ಕಣ್‌ ಬಾಯ್ಬಿಟ್ಟು ನೋಡುವ, ದಾಂಡಿಗರು ಬಡಿದಾಡಿಕೊಳ್ಳುವ ಡಬ್ಲೂಡಬ್ಲೂಇ, ಕುಸ್ತಿ ಇತ್ಯಾದಿ ನಮಗೆ ಹೊಸದೇನಲ್ಲ. ಅವೆಲ್ಲಾ ಕ್ರೀಡೆಗಳ ಸಾಲಿಗೆ ಸೇರಿದವು. ಆದರೆ ಹೀಗೆ ಹೊಡೆದಾಡುವುದಕ್ಕೆಂದೇ ವಿಶೇಷವಾದ ಮೇಳವೊಂದಿದೆ ಅಂದರೆ ನೀವು ನಂಬಲೇ ಬೇಕು. ಅದು ನಡೆಯುವುದು ಮೆಕ್ಸಿಕೋದಲ್ಲಿ. ಇಲ್ಲಿನ ಗ್ಯುರೆರೋ ಪ್ರಾಂತ್ಯದಲ್ಲಿ ನಹುವಾ ಸಮುದಾಯ ವಾರ್ಷಿಕ ಹಬ್ಬವಾಗಿ ಈ ಹೊಡೆದಾಟವನ್ನು ಆಯೋಜಿಸುತ್ತದೆ. ಪುರುಷರು, ಮಹಿಳೆಯರು ಎನ್ನದೇ ಈ ಹೊಡೆದಾಟ, ಜಗಳದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಹೊಡೆದಾಟ ಮಾತ್ರ ಕಿರಿಯರು ಕಿರಿಯರೊಂದಿಗೆ, ಹಿರಿಯರು ಹಿರಿಯರೊಂದಿಗೇ ಮಾಡಬೇಕು. ಹೊಡೆಯುವುದರಲ್ಲಿ, ನೂಕಾಟ, ತಳ್ಳಾಟ, ಗುದ್ದುವುದರಲ್ಲಿ ಮುಲಾಜೇ ಇಲ್ಲ. ಜಗಳಗಂಟರ ಪಾಲಿಗೆ ಈ ವಾರ್ಷಿಕ ಹಬ್ಬ ಎಂದರೆ ಒಂದು ಉಜ್ವಲ ಅವಕಾಶವಿದ್ದಂತೆ, ಅಂದಹಾಗೆ ಈ ಬಡಿದಾಟದ ಹಬ್ಬ ಇಂದು ನಿನ್ನೆಯದಲ್ಲ. ಕಳೆದ 500 ವರ್ಷಗಳಿಂದ ನಡೆಯುತ್ತಲೇ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಜಗಳಗಂಟರ ಪಾಲಿಗೆ ಇದು ದೊಡ್ಡ ಹಬ್ಬವೇ ಆಗಿದ್ದು, ನಹುವಾ ಸಮುದಾಯವರಲ್ಲದೆ ಇತರರೂ ಬಂದು ಭಾಗಿಯಾಗುತ್ತಾರಂತೆ. ಇತ್ತೀಚೆಗೆ ಈ ಡಿಶುಂ ಡಿಶುಂ ಹಬ್ಬ ನಡೆದಿದ್ದು, 20 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಇಷ್ಟಾಗಿ ಹಬ್ಬದಲ್ಲಿ ಒದೆ ತಿನ್ನುವುದರಲ್ಲಿ ಯಾವುದೇ ಬೇಸರವೂ ಇಲ್ಲ ಕೆಲವರ ದವಡೆ ಮುರಿದುಕೊಂಡದ್ದು, ಹಲ್ಲು ಹೋದದ್ದು, ಮೂಗು ಮುರಿದು ರಕ್ತ ಬಂದಿದ್ದು ಎಲ್ಲಾ ಇಲ್ಲಿ ಕಾಮನ್‌. ಡಿಶುಂ ಡಿಶುಂ ನಿಮಗೂ ಇಷ್ಟವಾದರೆ ಒಂದು ಕೈ ನೋಡಬಹುದು!

Trending videos

Back to Top