CONNECT WITH US  

ಹತ್ತನೆಯ ಸಾಹಿತ್ಯ - ಸಂಸ್ಕೃತಿ ಸಮಾವೇಶ ಸಮಾರೋಪ

ನಮ್ಮ ವರ್ತನೆಗಳಿಂದ ಜನ ಬೆಲೆ ಕಟ್ಟುತ್ತಾರೆ - ಬೊಳುವಾರ್‌ ಮಹಮದ್‌ ಕುಂಞî…

ಮುಂಬಯಿ: ಇಂದು ಜಗತ್ತಿನಲ್ಲಿ ಭಯೋತ್ಪಾದನೆ ನಿಂತು ಹೋದರೆ ಕೆಲವು ದೇಶಗಳಿಗೆ ಏನೂ ಆದಾಯ ಬರುವುದಿಲ್ಲ. ಜಗಳ ನಿರಂತರ ನಡೆಯುತ್ತಿದ್ದರೆ ಅವರಲ್ಲಿನ ಶಸ್ತ್ರಾಸ್ತ್ರ ಉತ್ಪಾದನೆಗೆ ಮಾರುಕಟ್ಟೆ ಸಿಗುತ್ತದೆ. ಸರಕಾರಗಳನ್ನು ಹೆಚ್ಚಾಗಿ ನಡೆಸುವವರು ಉದ್ಯಮಿಗಳು. ಇವರ ಇಷ್ಟದ ಪ್ರಕಾರ ಸರಕಾರ ನಡೆಯುತ್ತದೆ. ಇಂತಹ ವಾತಾವರಣದ ನಡುವೆ ಭಯೋತ್ಪಾದನೆಯ ನಿಜ ಕಾರಣಗಳು ಹಾಗೂ ವಿಶ್ವ ಶಾಂತಿಯ ಕನಸುಗಳನ್ನು ಹುಡುಕುವುದು ಅಷ್ಟು ಸುಲಭದ ಮಾತಲ್ಲ. ಧರ್ಮಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎನ್ನುವುದು ತಪ್ಪು. ನಮಗೆ ಬೆಲೆ ಬರುವುದು ನಮ್ಮ ಉತ್ತಮ ವರ್ತನೆಗಳಿಂದ ಹೊರತು, ಧರ್ಮ ಗ್ರಂಥಗಳಿಂದ ಅಲ್ಲ. ಒಬ್ಬ ಉತ್ತಮ ಹಿಂದೂ, ಒಬ್ಬ ಉತ್ತಮ ಮುಸ್ಲಿಂ ಎಂದು ನಮ್ಮ ನಮ್ಮ ಉತ್ತಮ ವರ್ತನೆಗಳನ್ನು ಕಾಣಿಸಿದರೆ ಮಾತ್ರ ಧರ್ಮ ಗ್ರಂಥಗಳೂ ಆವಾಗ ಶ್ರೇಷ್ಟವಾಗುತ್ತವೆ ಎಂದು ಹೆಸರಾಂತ ಬಂಡಾಯ ಸಾಹಿತಿ ಬೋಳುವಾರು ಮಹಮ್ಮದ್‌ ಕುಂಞî… ಹೇಳಿದರು.

ಮಾ. 8 ರಂದು ಸಂಜೆ ಕರ್ನಾಟಕ ಸಂಘದ ಡಾ| ಎಂ. ವಿಶ್ವೇಶ್ವರಯ್ಯ ಸಭಾಗƒಹದಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕƒತ ಕರ್ನಾಟಕ ಸಂಘ ಮುಂಬಯಿ ವತಿಯಿಂದ, ಕನ್ನಡ ಮತ್ತು ಸಂಸ್ಕೃತಿ  ಇಲಾಖೆ, ಬೆಂಗಳೂರು ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಹತ್ತನೆಯ ಸಾಹಿತ್ಯ ಸಂಸ್ಕƒತಿ ಸಮಾವೇಶದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು 14-15 ವರ್ಷ ಪ್ರಾಯದ ಮಕ್ಕಳಲ್ಲಿ ದೇಶಪ್ರೇಮವನ್ನು ಹುಟ್ಟಿಸುವ ದೃಶ್ಯವಿದೆ. ಮಕ್ಕಳಲ್ಲಿ ಇಂತಹ ದೇಶಪ್ರೇಮ ಹುಟ್ಟಿಸುವುದು ಸುಲಭ. ಆದರೆ ಇಂದಿನ ನಮ್ಮ ದೇಶಪ್ರೇಮ ಶತ್ರುಗಳು ಇರೋ ತನಕ ಮಾತ್ರ ಇರುವಂಥದ್ದು. ಇಂತಹ ದೇಶಪ್ರೇಮ ಅಪಾಯಕರ. ಮಕ್ಕಳ ತಲೆಯಲ್ಲಿ ನಾವು ಉತ್ತಮವಾದುದನ್ನು ತುಂಬಿಸಬೇಕು. ನಮ್ಮ ನಮ್ಮ ದೇವರಿಗೆ ಕೈ ಮುಗಿಯೋಣ. ಆದರೆ ಇನ್ನೊಂದು ದೇವರಿಗೂ ಮಕ್ಕಳು ಕೈ ಮುಗಿದರೆ ಅದು ನಮ್ಮ ದೇವರಲ್ಲ ಎಂದು, ಆ ಮುಗª ಮಕ್ಕಳ ಮನದಲ್ಲಿ ತಿರಸ್ಕಾರ ಹುಟ್ಟುವಂತೆ ಹೇಳಲು ಹೋಗಬೇಡಿ ಎಂದು ನುಡಿದು ಕರ್ನಾಟಕ ಸಂಘ ಕೊಡಮಾಡಿದ ಪ್ರತಿಷ್ಟಿತ ಸಾಧನಾ ಶಿಖರ ಪ್ರಶಸ್ತಿಯನ್ನು ವೇದಿಕೆಯಲ್ಲಿ ಪ್ರದಾನಿಸಿದ್ದನ್ನು ನೆನಪಿಸಿ ಪ್ರಶಸ್ತಿ ಪಡೆಯಲೂ ಸ್ಪರ್ಧೆಗಳು ನಡೆಯುತ್ತಿರುವ ದಿನಗಳು. ಇಂತಹ ಸ್ಥಿತಿಯಲ್ಲಿ ಮುಂಬಯಿಯಲ್ಲಿ ಸದ್ದಿಲ್ಲದೆ ಕನ್ನಡದ ಕೆಲಸ ಮಾಡುತ್ತಾ ಬಂದಿರುವ ಕರ್ನಾಟಕ ಸಂಘ ಮುಂಬಯಿ ಕೊಡಮಾಡಿದ ಸಾಧನಾ ಶಿಖರ ಪ್ರಶಸ್ತಿಗೆ ಹೆಚ್ಚಿನ ಮೌಲ್ಯ ಇದೆ. ಇಂತಹ ಪ್ರಶಸ್ತಿಯನ್ನು ಇಂದು ತನ್ನ ಹಸ್ತದಿಂದ ಪ್ರದಾನಿಸುವ ಅವಕಾಶ ದೊರೆತಿರುವುದು ಅತೀವ ಆನಂದವಾಗಿದೆ ಎಂದರು.

ವೇದಿಕೆಯ ಗಣ್ಯರು ಮುಂಬಯಿಯ ಸಾಹಿತಿ, ಅಕ್ಷಯದ ಗೌರವ ಸಂಪಾದಕ ಎಂ. ಬಿ. ಕುಕ್ಯಾನ್‌ ಮತ್ತು ಚಿತ್ರ ಕಲಾವಿದ ಕಾಂದಿವಲಿಯ ದಿವಾಕರ ಶೆಟ್ಟಿ ಅವರನ್ನು ಶಾಲು, ಸ್ಮರಣಿಕೆ, ಫಲ, ಪುಷ್ಪಗುತ್ಛ, ಹತ್ತು ಸಾವಿರ ರೂ. ಗೌರವ ಧನವನ್ನಿತ್ತು ಸಾಧನಾ ಶಿಖರ ಪ್ರಶಸ್ತಿಯನ್ನು ಪ್ರದಾನಿಸಿದರು. ಇದೇ ವೇದಿಕೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಬಿಲ್ಲವರ ಅಸೋಸಿಯೇಶನ್‌ನ ಗೌ. ಅಧ್ಯಕ್ಷ ಜಯ ಸಿ. ಸುವರ್ಣ ಅವರನ್ನು ಶಾಲು, ಫಲ, ಪುಷ್ಪಗುಚ್ಚ, ಸ್ಮರಣಿಕೆಯನ್ನಿತ್ತು ಸಂಘದ ವತಿಯಿಂದ ಸಮ್ಮಾನಿಸಲಾಯಿತು.

ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಓಂದಾಸ್‌ ಕಣ್ಣಂಗಾರ್‌ ಸ್ವಾಗತ ಪ್ರಸ್ತಾವನೆಗೈದರು. ಸಂಘದ ಉಪಾಧ್ಯಕ್ಷ ಶ್ರೀನಿವಾಸ ಜೋಕಟ್ಟೆ ಗಣ್ಯರನ್ನು ಗೌರವಿಸಿದರು. ರಂಗ ನಿರ್ದೇಶಕ ಡಾ| ಭರತ್‌ ಕುಮಾರ್‌ ಪೊಲಿಪು ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಅನಂತರ ಮನೋರಂಗ, ಬೆಂಗಳೂರು ಇವರಿಂದ ಅರುಣ್‌ ಮೂರ್ತಿ ನಿರ್ದೇಶನದಲ್ಲಿ ಲೀಲಾಂತ್ಯ ಕನ್ನಡ ನಾಟಕ ಪ್ರದರ್ಶನಗೊಂಡಿತು.

ಎಲ್ಲಾ ಸಂಘ ಸಂಸ್ಥೆಗಳು ಒಟ್ಟು ಸೇರಿ ಈಗಾಗಲೇ ತನ್ನನ್ನು ಸಮ್ಮಾನ ಮಾಡಿದ್ದರೂ ಇಂದಿನ ಈ ಸಮ್ಮಾನವನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ. ಬಿಲ್ಲವರ ಅಸೋಸಿಯೇಶ್‌ನ ಸದಸ್ಯರು, ಭಾರತ್‌ ಬ್ಯಾಂಕ್‌ ನನಗೆ ಸೇವೆ ಮಾಡಲು ಅವಕಾಶ, ಬೆಂಬಲವನ್ನು ನೀಡಿದ್ದರಿಂದಲೇ ತನಗೆ ರಾಜ್ಯೋತ್ಸವ ಪ್ರಶಸ್ತಿ ಬಂತು ಎಂದು ತಿಳಿದಿರುವೆ - ಜಯ ಸಿ. ಸುವರ್ಣ (ಕರ್ನಾಟಕ ರಾಜ್ಯೋತ್ಸವ ಪುರಸ್ಕೃತರು).

ತನ್ನನ್ನು ಸಾಹಿತಿಯಾಗಿ ಗುರುತಿಸಿ ಸಂಘವು ನೀಡಿದ ಈ ಪ್ರಶಸ್ತಿ, ಸಮ್ಮಾನವು ಖುಷಿ ನೀಡಿದೆ. ತಾನೆಂದೂ ಸಮ್ಮಾನದ ಹಿಂದೆ ಹೋಗಿಲ್ಲ. ಸಾಹಿತಿ ಆದದ್ದೇ ಯೋಗಾನುಯೋಗ. ನಾನು ಉದ್ಯಮಿ. ಅಕ್ಷಯಕ್ಕೆ ನನ್ನನ್ನು ಸಂಪಾದಕನನ್ನಾಗಿ ಜಯ ಸಿ. ಸುವರ್ಣರು ಕರೆಸಿಕೊಂಡಿದ್ದರು. ಅಂದಿನಿಂದ ಇಂದಿನ ತನಕವೂ ಅಕ್ಷಯದ ಮೂಲಕ ಬರೆಯುತ್ತಲೇ ಬಂದಿದ್ದೇನೆ. ನಾನು ರಾತ್ರಿಶಾಲೆಯ ವಿದ್ಯಾರ್ಥಿ. ರಾತ್ರಿಶಾಲೆಯ ವಿದ್ಯಾರ್ಥಿಯ ಬರಹಕ್ಕೂ ಮನ್ನಣೆ ಸಿಕ್ಕಿದ್ದು ಸಂತೋಷ ತಂದಿದೆ - ಎಂ. ಬಿ. ಕುಕ್ಯಾನ್‌ (ಸಾಹಿತಿ)

82 ವರ್ಷದಿಂದ ಮುಂಬಯಿಯಲ್ಲಿ ಕನ್ನಡದ ಕೆಲಸಗಳನ್ನು ಮಾಡುತ್ತಾ ಬೆಳೆಯುತ್ತಾ ಬಂದಿದೆ ಈ ಸಂಘ. ಇತ್ತೀಚಿನ ದಶಕದಲ್ಲಿ ಹೆಚ್ಚು ಸಕ್ರಿಯವಾಗಿದೆ. ಸ್ನೇಹ ಸಂಬಂಧ ಪತ್ರಿಕೆಯ ಮೂಲಕವೂ ಇಲ್ಲಿನ ಕನ್ನಡ ಕಾರ್ಯಕ್ರಮಗಳನ್ನು ಗಮನಿಸುತ್ತಾ ಬಂದಿದ್ದೇನೆ. ಈಗಾಗಲೇ ತನಗೆ ಹಲವು ಪ್ರಶಸ್ತಿ ಬಂದಿದೆ. ಆದರೆ ಈ ಕರ್ನಾಟಕ ಸಂಘ ನನ್ನನ್ನು ಗುರುತಿಸಿ ನೀಡಿದ ಈ ಸಾಧನಾ ಶಿಖರ ಪ್ರಶಸ್ತಿ ಅವೆಲ್ಲಕ್ಕಿಂತ ಮಿಗಿಲಾಗಿದೆ - ದಿವಾಕರ ಶೆಟ್ಟಿ (ಕಲಾವಿದ).

 ಚಿತ್ರ : ಸುಭಾಶ್‌ ಶಿರಿಯಾ
 

Trending videos

Back to Top