CONNECT WITH US  

ಮಹಿಳಾ ಹಾಸ್ಟೆಲ್‌ಗೆ ನುಗ್ಗಿ ಗೂಸಾ ತಿಂದ ಯುವಕ

ಮೈಸೂರು: ವಿದ್ಯಾರ್ಥಿನಿಯರ ನಿಲಯಕ್ಕೆ ಅಕ್ರಮವಾಗಿ ಪ್ರವೇಶಿಸಿ ಅಸಭ್ಯವಾಗಿ ವರ್ತಿಸಿದ ಯುವಕನನ್ನು ನಿಲಯಾರ್ಥಿಗಳೇ ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಾನಸಗಂಗೋತ್ರಿಯಲ್ಲಿ ನಡೆದಿದೆ. ಮಾನಸಗಂಗೋತ್ರಿಯ ಸೆನೆಟ್‌ ಭವನದ ಸಮೀಪದಲ್ಲಿರುವ ಸ್ನಾತಕೋತ್ತರ ವಿದ್ಯಾರ್ಥಿನಿಯರ ನೂತನ ವಿದ್ಯಾರ್ಥಿನಿಲಯ(ಬ್ಲಾಕ್‌-3)ದ ಶೌಚಾಲಯಕ್ಕೆ ಬುಧವಾರ ಮಧ್ಯರಾತ್ರಿ 1 ಗಂಟೆ ವೇಳೆಯಲ್ಲಿ ಯುವಕನೊಬ್ಬ ಪ್ರವೇಶಿಸಿದ್ದಾನೆ. ಆರಂ¸‌ದಲ್ಲಿ ಈತನನ್ನು ಕಂಡು ಗಾಬರಿಗೊಂಡ ವಿದ್ಯಾರ್ಥಿನಿಯರು, ನಂತರ ಆತನನ್ನು ಹಿಡಿದು, ಕೈ ಕಾಲುಗಳನ್ನು ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಯಲಕ್ಷಿಪುಂ ಠಾಣೆ ಪೊಲೀಸರು ಅಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಅಪರಿಚಿತ ಯುವಕನ ಬಳಿಯಿಂದ ಕಾಮಪ್ರಚೋದನೆಯ ಪತ್ರವನ್ನು ವಿದ್ಯಾರ್ಥಿನಿಯರು ಪೊಲೀಸರಿಗೆ ನೀಡಿದ್ದಾರೆ.

ಅಲ್ಲದೆ ವಿದ್ಯಾರ್ಥಿನಿಯರು ಸೆರೆ ಹಿಡಿದ ಈ ಯುವಕ ಮಂಗಳವಾರ ರಾತ್ರಿ ಸಹ ವಿದ್ಯಾರ್ಥಿನಿಲಯಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದು, ಈ ಸಂದರ್ಭದಲ್ಲಿ ಈತನನ್ನು ಕಂಡ ಕೆಲ ವಿದ್ಯಾರ್ಥಿನಿಯರು ಗಾಬರಿಯಿಂದ ಕಿರುಚಿಕೊಂಡ ಪರಿಣಾಮ ಸ್ಥಳದಿಂದ ಕಾಲ್ಕಿತ್ತಿದ್ದ ಎನ್ನಲಾಗಿದೆ. ಆದರೆ ಅಪರಿಚಿತ ಯುವಕ ವಿದ್ಯಾರ್ಥಿನಿಯರ ನಿಲಯಕ್ಕೆ ಅಕ್ರಮವಾಗಿ ಪ್ರವೇಶಿಸಿರುವ ಬಗ್ಗೆ ವಿದ್ಯಾರ್ಥಿನಿಯರು ಹಾಗೂ ವಿಶ್ವವಿದ್ಯಾಲಯದ ಯಾರೊಬ್ಬರು ದೂರು ನೀಡದ ಕಾರಣ ಆರೋಪಿಯ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.

ಬೀದಿಗಿಳಿದ ವಿದ್ಯಾರ್ಥಿನಿಂ‌ುರು
ವಿದ್ಯಾರ್ಥಿನಿಯರ ನಿಲಯಕ್ಕೆ ರಾತ್ರಿ ವೇಳೆಯಲ್ಲಿ ಅಪರಿಚಿತ ಯುವಕ ಅಕ್ರಮವಾಗಿ ಪ್ರವೇಶಿಸಿದ್ದ ಘಟನೆಯಿಂದ ಆತಂಕಗೊಂಡ ವಿದ್ಯಾರ್ಥಿನಿಯರು ಬುಧವಾರ ಬೆಳಗ್ಗೆ ವಿದ್ಯಾರ್ಥಿನಿಲಯದ ಎದುರು ಪ್ರತಿ¸‌ಟನೆ ನಡೆಸಿದರು. ಹಾಸ್ಟೆಲ್‌ನಲ್ಲಿ ವಾಸವಾಗಿರುವ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ನಿಲಯ ಪಾಲಕರು ಮತ್ತು ಸಹಾಯಕ ಕ್ಷೇಮಪಾಲಕರು ವಿಪಲರಾಗಿದ್ದು, ಘಟನೆ ಕುರಿತು ಮಾಹಿತಿ ನೀಡಲು ದೂರವಾಣಿ ಕರೆ ಮಾಡಿದರೂ ಯಾರೊಬ್ಬರೂ ಸ್ಪಂದಿಸಲಿಲ್ಲ. ಅಲ್ಲದೆ ಘಟನೆಗೆ ಸಂಬಂಧಿಸಿದಂತೆ ಹುಡುಗಿಯರೇ ಹುಡುಗರನ್ನು ಕರೆಸಿಕೊಳ್ಳುತ್ತಾರೆ ಎಂದು ಸಹಾಯಕ ಕ್ಷೇಮಪಾಲಕರು ಹೇಳಿಕೆ ನೀಡಿರುವುದು ಖಂಡನೀಯ. ಹೀಗಾಗಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪ್ರತಿ¸‌ಟನಾನಿರತ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು. ಮೈಸೂರು ವಿವಿ ಆಡಳಿತ ಮಂಡಳಿಯವರು ಈಗಲಾದರೂ ಇತ್ತ ಗಮನವಹಿಸಿ ವಿದ್ಯಾರ್ಥಿನಿಲಯಕ್ಕೆ ಸೂಕ್ತ ಗೋಡೆ ನಿರ್ಮಿಸಬೇಕು, ವಿದ್ಯಾರ್ಥಿನಿಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕೆಂದು ಒತ್ತಾಯಿಸಿದರು. ಈ ವೇಳೆ ಸ್ಥಳಕ್ಕೆ ಬೇಟಿ ನೀಡಿದ ಮೈಸೂರು ವಿವಿ ಕುಲಸಚಿವ ಪೊ›. ಬಸವರಾಜು, ವಿದ್ಯಾರ್ಥಿನಿಯರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ¸‌ರವಸೆ ನೀಡಿದ ಬಳಿಕ ವಿದ್ಯಾರ್ಥಿನಿಯರು ಪ್ರತಿ¸‌ಟನೆ ಹಿಂಪಡೆದರು.
 

Trending videos

Back to Top