CONNECT WITH US  

ಜಯ ಕರ್ನಾಟಕ ಗ್ರಾಮ ಘಟಕಕ್ಕೆ ಚಾಲನೆ

ಶಿಗ್ಗಾವಿ: ದೇಶ ಭ್ರಷ್ಟಾಚಾರದಿಂದ ಹಾಗೂ ಕಮಿಷನ್‌ ಹಾವಳಿಯಿಂದ ಹಾಳಾಗುತ್ತಿದೆ. ಯುವಕರೇ ಸ್ವಲ್ಪ ನಿಮ್ಮ ಶ್ರಮ ಕೊಟ್ಟರೆ ಸ್ವತ್ಛ, ಸ್ವಾಸ್ಥ ಸಮಾಜವನ್ನು ನಮ್ಮ ಜಯಕರ್ನಾಟಕ ಸಂಘಟನೆ ಒದಗಿಸುತ್ತದೆ ಎಂದು ಜಯಕರ್ನಾಟಕ ಸಂಘಟನೆಯ ಹಾವೇರಿ ತಾಲೂಕಾಧ್ಯಕ್ಷ ರಮೇಶ ಜಾಲಹಳ್ಳಿ ಹೇಳಿದರು.

ತಾಲೂಕಿನ ಕೋಣನಕೇರಿ ಗ್ರಾಮದಲ್ಲಿ ಗ್ರಾಮಘಟಕ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಸಂಘಟನೆಗಳು ಅವಶ್ಯಕ, ಭ್ರಷ್ಟಾಚಾರವನ್ನು ಬೇರು ಮಟ್ಟದಲ್ಲಿ ಕಿತ್ತು ಹಾಕುವುದು ಸಂಘಟನೆಯ ಮುಖ್ಯ ಗುರಿಯಾಗಿದೆ. ಸಂಘಟಕರು ಶಾಂತಿಯುತ ಹೊರಾಟದಿಂದ ಯಶಸ್ಸು ಪಡೆಯಬೇಕಾಗಿದೆ. ಸಂಘಟಕರು ಕಾನೂನಿನ ಅಡಿಯಲ್ಲಿ ಉತ್ತಮ ಸಮಾಜಕ್ಕಾಗಿ ಬಡವರ ಪರವಾಗಿ ಹೋರಾಡಲು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕೆಂದರು.

ತಾಲೂಕು ಅಧ್ಯಕ್ಷ ದುರಗಪ್ಪ ವಡ್ಡರ, ಕೋಣನಕೇರಿ ಗೌರವಾಧ್ಯಕ್ಷ ಯಲ್ಲಪ್ಪ ಚವಾಣ ಮಾತನಾಡಿದರು. ಉಪಾಧ್ಯಕ್ಷ ಈರಪ್ಪ ಹಳ್ಳೆಪ್ಪನವರ, ಮುಖಂಡರಾದ ಹನುಮಂತ ಬಂಡಿವಡ್ಡರ, ರವಿ ಓಲೇಕಾರ, ಮಂಜುನಾಥ ಸೂರ್ಯವಂಶ, ನಾಗರಾಜ ಸೂರ್ಯವಂಶ, ಶೇಖಪ್ಪ ಹಾಲಪ್ಪನವರ, ಗೋವಿಂದಪ್ಪ ವಾಲೀಕಾರ, ಯಲ್ಲಪ್ಪ ವಡ್ಡರ, ನಾಗಪ್ಪ ಕಾಮನಹಳ್ಳಿ, ನೂತನ ಕೋಣನಕೇರಿ ಗ್ರಾಮ ಘಟಕದ ಅಧ್ಯಕ್ಷ ಸಂತೋಷ ಬಪ್ಪನಕಟ್ಟಿ, ಉಪಾಧ್ಯಕ್ಷ ನಾಗರಾಜ ಮಾಸನಕಟ್ಟಿ, ಗಣಪತಿ ಮಾಸನಕಟ್ಟಿ, ಸಂತೋಷ ಹೊನ್ನಮ್ಮನವರ, ಮಾರುತಿ ಮುರಾರಿ ಹಾಗೂ ಇತರರಿದ್ದರು.

Trending videos

Back to Top