CONNECT WITH US  

ಗ್ರಾಪಂ ಅನುದಾನ ಬಳಕೆಗೆ ವಿಶೇಷ ಮಾರ್ಗಸೂಚಿ: ರಂದೀಪ

ವಿಜಯಪುರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ತ್ವರಿತ ವಿಲೇವಾರಿ, ತಪ್ಪಿತಸ್ಥರಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವ ನಿಟ್ಟಿನಲ್ಲಿ ಅಗತ್ಯ ಮಾರ್ಗದರ್ಶನ ನೀಡುವ ಕುರಿತಂತೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಧಿಕಾರಿ ಡಿ.ರಂದೀಪ ಹೇಳಿದರು. ಗುರುವಾರ ನಗರದ ಡಾ| ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ನಡೆದ ಜಿಲ್ಲಾಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರಿ ಅಭಿಯೋಜಕರೊಂದಿಗೆ ಈ ಕುರಿತಂತೆ ಪ್ರತ್ಯೇಕ ಸಭೆ ನಡೆಸಿ, ವಿಶೇಷ ಗಮನ ಹರಿಸಲಾಗುತ್ತದೆ. ದೌರ್ಜನ್ಯ ಪ್ರಕರಣಗಳ ಕುರಿತು ಪೊಲೀಸ್‌ ಇಲಾಖೆ ಈಗಾಗಲೇ ಜಿಲ್ಲಾ ನ್ಯಾಯಾಧಿಧೀಶರೊಂದಿಗೆ ಚರ್ಚಿಸಿದ್ದು, ಅಗತ್ಯ ಮಾರ್ಗದರ್ಶನ ನೀಡಿದ್ದಾರೆ. ಹೆಚ್ಚಿನ ಮುತುವರ್ಜಿ ವಹಿಸಿ, ದೌರ್ಜನ್ಯ ಎಸಗಿದವರಿಗೆ ಶಿಕ್ಷೆಯಾಗುವ ನಿಟ್ಟಿನಲ್ಲಿ ಸಾಕ್ಷÂಗಳ ಬಲಪಡಿಸುವಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಸರ್ಕಾರಿ ಅಭಿಯೋಜಕರೊಂದಿಗೆ ಚರ್ಚಿಸಿ ಅಗತ್ಯ ಮಾರ್ಗದರ್ಶನ ಸೇರಿದಂತೆ ಇತರೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಗತ್ಯ ನೆರವು ನೀಡಲಾಗುವುದೆಂದು ಹೇಳಿದರು.

ನಗರ ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿ ಶೇ.25ರ ಅನುದಾನ ಬಳಕೆಗೆ ಪ್ರಸಕ್ತ ವರ್ಷದಿಂದ ಜಿ.ಪಂ. ನಿಂದ ಮಾರ್ಗಸೂಚಿ ರೂಪಿಸಿ, ಎಲ್ಲ ಗ್ರಾ.ಪಂ.ಗಳಿಗೆ ನೀಡಲಾಗುತ್ತದೆ. ಈ ಮಾರ್ಗಸೂಚಿಯಂತೆ ಅನುದಾನ ಬಳಕೆ ಮಾಡಲಾಗುವುದು ಎಂದು ಜಿ.ಪಂ. ಸಿಇಓ ಶಿವಕುಮಾರ ವಿವರಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಸಣ್ಣಪುಟ್ಟ ವ್ಯಾಜ್ಯಗಳು ನಡೆಯುತ್ತವೆ. ಈ ವ್ಯಾಜ್ಯಗಳಿಗೆ ಜಾತಿನಿಂದನೆ, ದೌರ್ಜನ್ಯ ಪ್ರಕರಣ ದಾಖಲಿಸಲಾಗುತ್ತಿದೆ. ಇದರಿಂದ ಮುಗ್ಧರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೇ ನಿಜವಾದ ದೌರ್ಜನ್ಯ ಪ್ರಕರಣಗಳು ಅರ್ಥ ಕಳೆದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು ಮೂಡಿಸಲು ಜಾಗೃತಿ ಸಮಿತಿಯ ಸದಸ್ಯರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಧಿಕಾರಿಗಳು ಸಲಹೆ ನೀಡಿದರು.

ದೌರ್ಜನ್ಯ ಸೇರಿದಂತೆ ಯಾವುದೇ ಸಂಕಷ್ಟ ಹೇಳಿಕೊಂಡು ಸಾರ್ವಜನಿಕರು ಪೊಲೀಸ್‌ ಠಾಣೆಗೆ ಆಗಮಿಸದಲ್ಲಿ ದೂರು ದಾಖಲಿಸುವುದು ಠಾಣಾಧಿಧಿಕಾರಿಯ ಕರ್ತವ್ಯ. ಒಂದೊಮ್ಮೆ ಪ್ರಕರಣ ದಾಖಲಿಸದಿದ್ದರೆ ಸಂಬಂಧಿಧಿಸಿದ ಠಾಣಾಧಿಧಿಕಾರಿಯ ವಿರುದ್ಧವೇ ದೂರು ದಾಖಲಿಸಬೇಕೆಂದು ಸರ್ವೋತ್ಛ ನ್ಯಾಯಾಲಯ ಆದೇಶಿಸಿದೆ. ಹೀಗಾಗಿ ಠಾಣೆಯಲ್ಲಿ ದೂರು ದಾಖಲಿಸಲು ಹಿಂದೇಟು ಹಾಕುವ ನಿರ್ದಿಷ್ಟ ಪ್ರಕರಣಗಳಿದ್ದರೆ ತಮ್ಮ ಗಮನಕ್ಕೆ ತರಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಧಿಕಾರಿಗಳು ಸಲಹೆ ನೀಡಿದರು.

ಗ್ರಾಮಗಳಲ್ಲಿ ಅಸ್ಪ ೃಶ್ಯತೆ ನಿರ್ಮೂಲನೆಗೆ ಬೀದಿನಾಟಕ, ವಿಚಾರ ಸಂಕಿರಣದಂತಹ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದರ ಹೊರತಾಗಿಯೂ ಪರಿಶಿಷ್ಟರ ಕುಂದು-ಕೊರತೆ ಆಲಿಸಲು ಸಭೆಗಳನ್ನು ನಡೆಸಲಾಗುತ್ತದೆ. ಎಸ್ಪಿ ಅವರು ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದಲ್ಲಿ, ಪ್ರತಿ ತಿಂಗಳು ಠಾಣಾ ವ್ಯಾಪ್ತಿಯಲ್ಲಿ ಪರಿಶಿಷ್ಟ ಸಮುದಾಯದ ಸಮಸ್ಯೆ ಆಲಿಸಲಿದ್ದಾರೆ. ಇದರಿಂದ ಪರಿಶಿಷ್ಟರಿಗೆ ತಮ್ಮ ಸಮಸ್ಯೆ ನಿವೇದಿಸಿಕೊಳ್ಳಲು ನೆರವಾಗುತ್ತದೆ ಎಂದರು.

ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಸರ್ಕಾರಿ ಸೌಲಭ್ಯ ಹಾಗೂ ಸರ್ಕಾರಿ ನೌಕರಿ ಪಡೆದಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಶೀಲಿಸಬೇಕು. ಅಂಬಿಗೇರ, ದುರYಮುರಗಿ ಜನಾಂಗದವರು ಪರಿಶಿಷ್ಟ ವರ್ಗದ ಜಾತಿ ಪ್ರಮಾಣಪತ್ರ ಪಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಈ ಕುರಿತಂತೆ ತನಿಖೆ ನಡೆಸಬೇಕು. ಶಾಲಾ ದಾಖಲಾತಿ ವೇಳೆ ಪೋಷಕರ ಜಾತಿ-ವಂಶವಾಹಿ ಪರಿಗಣಿಸಿ ದಾಖಲಾತಿಗೆ ಮುಂದಾಗಬೇಕು. ಈ ಕುರಿತು ಡಿಡಿಪಿಐ ಅವರು ಶಾಲೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸೂಚಿಸಲಾಯಿತು.

ಪರಿಶಿಷ್ಟರೆಂದು ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಉದ್ಯೋಗ ಪಡೆದಿರುವ ನಾಲ್ಕು ಪ್ರಕರಣಗಳಲ್ಲಿ ಮೂರು ಪ್ರಕರಣಗಳನ್ನು ಈ ತಿಂಗಳಾಂತ್ಯಕ್ಕೆ ವಿಲೇ ಮಾಡಲಾಗುತ್ತದೆ. ಏಪ್ರಿಲ್‌ ಮಾಸಾಂತ್ಯಕ್ಕೆ ಇನ್ನೊಂದು ಪ್ರಕರಣವನ್ನೂ ಇತ್ಯರ್ಥಪಡಿಸಲಾಗುತ್ತದೆ. ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುವುದನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತದೆ. ಸ್ಮಶಾನ ಭೂಮಿ, ಗಂಗಾಕಲ್ಯಾಣ ಯೋಜನೆಗೆ ವಿದ್ಯುತ್‌ ಸಂಪರ್ಕ, ದೌರ್ಜನ್ಯ ಪ್ರಕರಣಗಳ ಅನುದಾನ ಬಿಡುಗಡೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.

ಜಿಲ್ಲಾ ಸಮಾಜ ಕಲ್ಯಾಣ ಅಧಿಧಿಕಾರಿ ರಾಮನಗೌಡ ಕನ್ನೊಳ್ಳಿ ಸಭೆಗೆ ಮಾಹಿತಿ ನೀಡಿದರು. ಮಹಾನಗರ ಪಾಲಿಕೆ ಆಯುಕ್ತ ಎಸ್‌.ಜಿ.ರಾಜಶೇಖರ, ಜಿ.ಪಂ. ಯೋಜನಾಧಿಧಿಕಾರಿ ನಿಂಗಪ್ಪ, ಹೆಸ್ಕಾಂ ಅಭಿಯಂತರ ಗೊಟ್ಯಾಳ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಎಸ್ಪಿ ಗಜಾಕೋಶ, ಜಿಲ್ಲಾ ವಾರ್ತಾಧಿಧಿಕಾರಿ ಡಾ| ಬಿ.ಆರ್‌.ರಂಗನಾಥ, ಜಿಲ್ಲಾ ಜಾಗೃತ ಸಮಿತಿ ಸದಸ್ಯರಾದ ಸುರೇಶ ಮಣ್ಣೂರ, ಶಶಿಕಾಂತ ಮಾಲಗತ್ತಿ, ಅರವಿಂದ ಸಾಲವಾಡಗಿ, ಗಣಪತಿ ಬಾಣಿಕೋಲ, ಶಿವಾನಂದ ಪಟ್ಟೇದ, ಬಾಳಾಸಾಹೇಬ ಹಂಚಿನಾಳ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಹಾಗೂ ವಿವಿಧ ತಾಲೂಕುಗಳ ತಹಶೀಲ್ದಾರರು ಸಭೆಯಲ್ಲಿ ಉಪಸ್ಥಿತರಿದ್ದರು.

Trending videos

Back to Top