CONNECT WITH US  

ಗೋವಾ ಕರಾವಳಿಯಲ್ಲಿ ನೌಕಾಪಡೆ ವಿಮಾನ ಪತನ

ಪಣಜಿ: ಇತ್ತೀಚೆಗೆ ಹಲವು ದುರ್ಘ‌ಟನೆಗ ಳಿಗೆ ಸಾಕ್ಷಿಯಾಗುತ್ತಿರುವ ಭಾರತೀಯ ನೌಕಾಪಡೆಯಲ್ಲಿ ಮತ್ತೂಂದು ಅವಘಡ ಸಂಭವಿಸಿದೆ. ನೌಕಾಪಡೆಗೆ ಸೇರಿದ ಸರ್ವೇಕ್ಷಣಾ ವಿಮಾನವೊಂದು ಗೋವಾ ಕರಾವಳಿಯಲ್ಲಿ ಮಂಗಳವಾರ ತಡರಾತ್ರಿ ಪತನಗೊಂಡಿದೆ. ಈ ಘಟನೆಯಲ್ಲಿ ಇಬ್ಬರು ಅಧಿಕಾರಿಗಳು ನಾಪತ್ತೆಯಾಗಿದ್ದರೆ, ಒಬ್ಬ ಅಧಿಕಾರಿಯನ್ನು ರಕ್ಷಿಸಲಾಗಿದೆ.

ಡಾರ್ನಿಯರ್‌ ಕಂಪನಿಗೆ ಸೇರಿದ ಈ ವಿಮಾನ ಗೋವಾ ಕರಾವಳಿಯಲ್ಲಿ ರಾತ್ರಿ ತರಬೇತಿ ಹಾರಾಟದಲ್ಲಿತ್ತು. ಗೋವಾ ಕರಾವಳಿಯ ನೈಋತ್ಯ ದಿಕ್ಕಿಗೆ 25 ನಾಟಿಕಲ್‌ ಮೈಲು ದೂರದಲ್ಲಿ ಪತನ ಹೊಂದಿದೆ. ಈ ಕುರಿತು ವಿಚಾರಣೆಗೆ ಆದೇಶಿಸಲಾಗಿದೆ. ನಾಪತ್ತೆಯಾಗಿರುವ ಇಬ್ಬರು ಅಧಿಕಾರಿಗಳ ಶೋಧ ಕಾರ್ಯಾಚರಣೆಗೆ 9 ಹಡಗು

ಹಾಗೂ ಕೆಲವು ವಿಮಾನಗಳನ್ನು ನಿಯೋಜಿಸಲಾಗಿದೆ ಎಂದು ನೌಕಾಪಡೆ ವಕ್ತಾರ ಕ್ಯಾಪ್ಟನ್‌ ಡಿ.ಕೆ. ಶಮಾ ಅವರು ನವದೆಹಲಿಯಲ್ಲಿ ತಿಳಿಸಿದ್ದಾರೆ. ಗೋವಾ ದಲ್ಲಿರುವ ನೌಕಾಪಡೆಯ ವಾಯು ಕೇಂದ್ರದೊಂದಿಗೆ ರಾತ್ರಿ 10.02ರಲ್ಲಿ ವಿಮಾನ ಸಂಪರ್ಕ ಕಡಿದುಕೊಂಡಿತ್ತು ಎಂದು ವಿವರಿಸಿದ್ದಾರೆ.

ಕಮಾಂಡರ್‌ ನಿಖೀಲ್‌ ಜೋಶಿ ಎಂಬುವ ರನ್ನು ರಕ್ಷಿಸಲಾಗಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದುರಂತದ ವಿಷಯ ತಿಳಿಯುತ್ತಿದ್ದಂತೆ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌.ಕೆ. ಧವನ್‌ ಅವರು ಗೋವಾಕ್ಕೆ ದೌಡಾಯಿಸಿದ್ದಾರೆ.

ಕೆಲವೇ ತಿಂಗಳ ಹಿಂದೆ ವಿಶಾಖಪಟ್ಟಣ ಕರಾವಳಿಯಲ್ಲಿ ನೌಕೆಯೊಂದು ಮುಳುಗಿ, ಐದು ಮಂದಿ ಸಾವನ್ನಪ್ಪಿದ್ದರು. 2013ರ ಆಗಸ್ಟ್‌ನಲ್ಲಿ ಐಎನ್‌ಎಸ್‌ ಸಿಂಧುರಕ್ಷಕ ನೌಕೆ ಮುಂಬೈ ಕರಾವಳಿಯಲ್ಲಿದ್ದಾಗ ಬೆಂಕಿ ಕಾಣಿಸಿಕೊಂಡು 18 ಮಂದಿ ಮರಣ ಹೊಂದಿದ್ದರು.

Trending videos

Back to Top