CONNECT WITH US  

150 ಮಂದಿ ಇದ್ದ ವಿಮಾನ ಪತನಗೊಳಿಸಿದ್ದು ಸಹಪೈಲಟ್‌!

ಪ್ಯಾರಿಸ್‌: 150 ಮಂದಿ ಪ್ರಯಾಣಿಕರನ್ನು ಹೊತ್ತೂಯುತ್ತಿದ್ದ ಜರ್ಮನ್‌ವಿಂಗ್ಸ್‌ ವಿಮಾನ ಮಂಗಳವಾರ ಫ್ರಾನ್ಸ್‌ನ ಆಲ್ಪ್ ಪರ್ವತ ಶ್ರೇಣಿಯಲ್ಲಿ ಪತನ ಹೊಂದಿದ್ದಕ್ಕೆ ತಾಂತ್ರಿಕ ಸಮಸ್ಯೆ ಕಾರಣವಲ್ಲ. ಆ ವಿಮಾನದ ಸಹಪೈಲಟ್‌ ಉದ್ದೇಶಪೂರ್ವಕವಾಗಿಯೇ ವಿಮಾನವನ್ನು ಪತನಗೊಳಿಸಿದ್ದಾನೆ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

ಆದರೆ ಇದರ ಹಿಂದೆ ಭಯೋತ್ಪಾದಕರ ಕೈವಾಡವೇನಾದರೂ ಅಡಗಿದೆಯೇ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಲಭಿಸಿಲ್ಲ. ಸಹಪೈಲಟ್‌ ಯಾವ ಕಾರಣಕ್ಕಾಗಿ ವಿಮಾನವನ್ನು ಬೇಕಂತಲೇ ನಾಶಪಡಿಸಿದ ಎಂಬುದರ ಕುರಿತೂ ವಿವರ ದೊರೆತಿಲ್ಲ.

ಶೌಚಾಲಯಕ್ಕೆ ಹೋಗುವ ಸಲುವಾಗಿ ವಿಮಾನದ ಮುಖ್ಯ ಪೈಲಟ್‌ ಕಾಕ್‌ಪಿಟ್‌ನಿಂದ ಎದ್ದು ಬಂದಿದ್ದರು. ಅವರು ಮರಳಿ ಕಾಕ್‌ಪಿಟ್‌ಗೆ ಹೋಗಲು ಆಗಲಿಲ್ಲ. ಏಕೆಂದರೆ ಅಷ್ಟರಲ್ಲಿ ಕಾಕ್‌ಪಿಟ್‌ನ ಬಾಗಿಲು ಬಂದ್‌ ಆಗಿತ್ತು. ಈ ನಡುವೆ, ವಿಮಾನದ ಸಹ ಪೈಲಟ್‌ ಅಂಡ್ರಿಯಾಸ್‌ ಲುಬಿಟ್ಜ್(28) ಎಂಬಾತ ವಿಮಾನದ ಎತ್ತರವನ್ನು ಬೇಕಂತಲೇ ದಿಢೀರ್‌ ಕೆಳಕ್ಕೆ ಇಳಿಸಿ ಆಲ್ಪ್$Õ ಪರ್ವತಶ್ರೇಣಿಯಲ್ಲಿ ಪತನಗೊಳ್ಳುವಂತೆ ಮಾಡಿದ್ದಾನೆ ಎಂದು ಬ್ರೈಸ್‌ ರಾಬಿನ್‌ ಎಂಬ ಫ್ರಾನ್ಸ್‌ನ ತನಿಖಾಧಿಕಾರಿ ಹೇಳಿದ್ದಾರೆ.

ವಿಮಾನವನ್ನು ನಾಶಗೊಳಿಸುವುದು ಸಹ ಪೈಲಟ್‌ನ ಉದ್ದೇಶವಾಗಿತ್ತು. ಹೀಗಾಗಿ ವಿಮಾನ ಪತನಗೊಳ್ಳುತ್ತಿದ್ದರೂ ಕಾಕ್‌ಪಿಟ್‌ನಲ್ಲಿ ಆತ ಒಂದೇ ಒಂದು ಮಾತನ್ನೂ ಆಡಿಲ್ಲ. ಪತನಗೊಂಡ ವಿಮಾನದಿಂದ ವಶಪಡಿಸಿಕೊಳ್ಳಲಾಗಿರುವ ಬ್ಲ್ಯಾಕ್‌ಬಾಕ್ಸ್‌ನ ಲ್ಲಿರುವ ಕಾಕ್‌ಪಿಟ್‌ ವಾಯ್ಸ ರೆಕಾರ್ಡರ್‌ನಿಂದ ಸಹಪೈಲಟ್‌ನ ದುಷ್ಕೃತ್ಯ ಬೆಳಕಿಗೆ ಬಂದಿದೆ ಎಂದು ಅವರು ವಿವರಿಸಿದ್ದಾರೆ.

ವಿಮಾನ ದಿಢೀರನೆ ಕೆಳಕ್ಕೆ ಇಳಿಯುತ್ತಿದ್ದಾಗ ಮುಖ್ಯ ಪೈಲಟ್‌ ಕಾಕ್‌ಪಿಟ್‌ ಪ್ರವೇಶಿಸಲು ಯತ್ನಿಸುತ್ತಾರೆ. ಬಾಗಿಲು ಬಂದ್‌ ಆಗಿದ್ದ ಕಾರಣ ಅದನ್ನು ಬಡಿಯುತ್ತಾರೆ. ಆಗಲೂ ತೆರೆಯದಿದ್ದಾಗ ಬಾಗಿಲು ಒಡೆಯುವ ಪ್ರಯತ್ನ ನಡೆಸುತ್ತಾರೆ ಎಂಬ ಮಾಹಿತಿಯೂ ವಾಯ್ಸ ರೆಕಾರ್ಡರ್‌ನಿಂದ ಲಭಿಸಿದೆ.

ಈ ನಡುವೆ ವಿಮಾನ ಪತನಕ್ಕೆ ಕಾರಣನಾದ ಎಂದು ಹೇಳಲಾಗುತ್ತಿರುವ ಸಹಪೈಲಟ್‌ ಲುಬಿಟ್ಜ್, ಜರ್ಮನಿಯ ಮೊಂಟಾಬೌರ್‌ ನಗರದವನಾಗಿದ್ದಾನೆ. ತಾವು ಆತನನ್ನು ಕಡೆಯ ಬಾರಿ ಕಂಡಾಗ ಲುಬಿಟ್ಜ್ ಒತ್ತಡದಲ್ಲಿ ಇರಲಿಲ್ಲ ಎಂದು ಆತನನ್ನು ಬಲ್ಲವರು ತಿಳಿಸಿದ್ದಾರೆ. ಜರ್ಮನ್‌ವಿಂಗ್ಸ್‌ ವಿಮಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಆತ ಖುಷಿಪಡುತ್ತಿದ್ದ. ಚೆನ್ನಾಗಿಯೇ ಕೆಲಸ ಮಾಡುತ್ತಿದ್ದ ಎಂದಿದ್ದಾರೆ.

ಈ ನಡುವೆ, ಜರ್ಮನ್‌ವಿಂಗ್ಸ್‌ ಕಂಪ ನಿಯ ಮಾಲೀಕ ಸಂಸ್ಥೆಯಾಗಿದ ಲುಫ್ತಾನ್ಸಾ ಕಂಪನಿ, ದುರಂತಕ್ಕೀಡಾದ ವಿಮಾನದಲ್ಲಿದ್ದ ಪೈಲಟ್‌ಗಳ ಹೆಸರನ್ನು ಈವರೆಗೂ ಬಹಿರಂಗಪಡಿಸಿಲ್ಲ. ಆದರೆ ಸಹಪೈಲಟ್‌ 2013ರ ಸೆಪ್ಟೆಂಬರ್‌ನಲ್ಲಿ ನೇಮಕಗೊಂಡಿದ್ದ. 630 ಗಂಟೆಗಳ ಕಾಲ ವಿಮಾನಯಾನ ಅನುಭವ ಹೊಂದಿದ್ದ ಎಂದು ಹೇಳಿದೆ.

ಜರ್ಮನ್‌ ವಿಂಗ್ಸ್‌ಗೆ ಸೇರಿದ ಏರ್‌ಬಸ್‌ ಎ320 ವಿಮಾನ ಸ್ಪೇನ್‌ನ ಬಾರ್ಸಿಲೋನಾದಿಂದ ಜರ್ಮನಿಯ ಡುಸ್ಸೆಲ್‌ಡಾಫ್ìಗೆ ಬರುತ್ತಿದ್ದ ವೇಳೆ ಮಂಗಳವಾರ ಬೆಳಗ್ಗೆ ಆಲ್ಪ್$Õì ಪರ್ವತ ಶ್ರೇಣಿಯಲ್ಲಿ ಪತನ ಹೊಂದಿತ್ತು.

Trending videos

Back to Top