CONNECT WITH US  

ಡಾ| ಆರ್‌.ಟಿ.ರಮಾಗೆ ರಂಗಸಿರಿ ಪ್ರಶಸ್ತಿ ಪ್ರದಾನ

ಧಾರವಾಡ : ರಂಗಪರಿಸರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವರಂಗಭೂಮಿ ದಿನಾಚರಣೆ-ರಂಗಸಿರಿ ಪ್ರಶಸ್ತಿ ಪ್ರದಾನ ಹಾಗೂ ರಂಗಕಲಾವಿದ ನಟ ಶೇಖರ ಪಂ.ಬಸವರಾಜ ಮನ್ಸೂರ ಅವರ ಸ್ಮರಣಾರ್ಥ ಪೌರಾಣಿಕ ನಾಟಕೋತ್ಸವದ ಸಮಾರೋಪ ಸಮಾರಂಭ ನಗರದ ಕವಿಸಂನಲ್ಲಿ ಶುಕ್ರವಾರ ನಡೆಯಿತು.

ರಂಗಸಿರಿ ಪ್ರಶಸ್ತಿ ಸೀÌಕರಿಸಿ ಮಾತನಾಡಿದ ಡಾ| ಆರ್‌.ಟಿ. ರಮಾ, ಬಾಲ ಕಲಾವಿದೆಯಾಗಿ ರಂಗಪ್ರವೇಶ ಮಾಡಿದ ತಾವು ಜಾಗತಿಕ ರಂಗಭೂಮಿಯ ದೃಷ್ಟಿಯಲ್ಲಿ ಇಂದು ಅಭಿನಯ ಕಲೆಯಿಂದ ಪರಿಚಯಿಸಿಕೊಳ್ಳುತ್ತಿರುವುದಾಗಿ ತಿಳಿಸಿದರು.

ನಾಟಕ ಅಭಿನಯ ಮಾಡುವಾಗ ಸಹಪಾಠಿಗಳು ದೂರ ಮಾಡಿ ಯಾರೂ ಮಾತನಾಡುತ್ತಿರಲಿಲ್ಲ. ಏನೋ ಅನಾಹುತ ಮಾಡಿದ್ದೇನೋ, ಅಪರಾಧ ಮಾಡಿದ್ದೇನೋ ಎಂಬಂತೆ ನೋಡುತ್ತಿದ್ದರು. ಆದರೆ ಪಾತ್ರದಲ್ಲಿ ಬರುವ ಸುಖ, ಸಂತೋಷ, ದುಃಖದ ಪಾತ್ರಗಳು ಈ ಎಲ್ಲ ದುಃಖವನ್ನು ಮರೆಸಿತು. ನಂತರ ಅವಕಾಶಗಳು ಕೈಬೀಸಿ ಕರೆದವು ಎಂದು ಹಳೆಯ ನೆನಪು ಮೆಲಕು ಹಾಕಿದರು.
ಅಭ್ಯಾಸದ ಜೊತೆಗೆ ನಟನೆ, ಬಡತನದ ನಡುವೆ ನಾಟಕಗಳು ಹೀಗೆ ರಂಗಭೂಮಿ ಒಡನಾಟ ಇಲ್ಲಿಯವರೆಗೂ ಕರೆ ತಂದಿತು. ಇಂದು ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ರಂಗಸಿರಿ ಪ್ರಶಸ್ತಿ ಪಡೆಯಲು ಅರ್ಹಳಾಗಿದ್ದೇನೆ. ಇದು ಪ್ರೇಕ್ಷಕರು ತನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ ಎಂದರು.

ಅತಿಥಿಯಾಗಿದ್ದ ನಾಟಕ ಅಕಾಡೆಮಿ ಸದಸ್ಯ ಕೆ.ಜಗುಚಂದ್ರ ಮಾತನಾಡಿ, ರಂಗಭೂಮಿ ಎಂದರೆ ಸುಖದ ನೋವು. ಆದರೂ ಇದನ್ನು ಬಲ್ಲವರಾಗಿಯೂ ಈ ಸುಖಕ್ಕಾಗಿ ಪರಿತಪಿಸುವ ಕಲಾವಿದ ಕಲೆಗೆ ಬೆಲೆ ಬರುವಂತೆ ಬದುಕುತ್ತಾನೆ. ನಾಡಿನ ಕಲೆಯನ್ನು ಸಂರಕ್ಷಿಸುತ್ತಾನೆ. ಇದು ರಂಗಭೂಮಿಯಿಂದ ಮಾತ್ರ ಸಾಧ್ಯ ಎನ್ನುವುದನ್ನು ನಾವೆಲ್ಲ ಮನಗಾಣಬೇಕಾಗಿದೆ ಎಂದು ಹೇಳಿದರು.
ಪಂ.ಬಸವರಾಜ ಮನ್ಸೂರ ಕುರಿತು ಪ್ರಕಟವಾದ ಪುಸ್ತಕವನ್ನು ಡಾ| ಬಾಳಣ್ಣ ಸೀಗಿಹಳ್ಳಿ ಬಿಡುಗಡೆಗೊಳಿಸಿದರು.

ರಂಗಪರಿಸರ ಅಧ್ಯಕ್ಷ ವಿಠuಲ ಕೊಪ್ಪದ ಅಧ್ಯಕ್ಷತೆ ವಹಿಸಿದ್ದರು. ಶಶಿಧರ ನರೇಂದ್ರ, ರಂಗಪರಿಸರ ಸಂಚಾಲಕ ಜೀವನ ಲಂಗೋಟಿ, ವಿರುಪಾಕ್ಷಪ್ಪ ಅಂಗಡಿ, ವೈಭವ, ಶಂಕರ ಹೂಗಾರ, ಸುನಂದಾ ನಿಂಬನಗೌಡರ, ಚೈತ್ರಾ ಲಂಗೋಟಿ ಇದ್ದರು. ಚಂದ್ರಶೇಖರ ಜಿಗಜಿನ್ನಿ ನಿರೂಪಿಸಿದರು. ಮಕಬೂಲ್‌ ಹುಣಸಿಕಟ್ಟಿ ವಂದಿಸಿದರು. ನಂತರ ಹುಬ್ಬಳ್ಳಿಯ ರಂಗರೇಕಾ ತಂಡದಿಂದ ಬಸವರಾಜ ಚಕ್ರಸಾಲಿ ನಿರ್ದೇಶನದಲ್ಲಿ ಭಕ್ತ ಪ್ರಲ್ಹಾದ ನಾಟಕ ಪ್ರದರ್ಶಗೊಂಡಿತು.

ಧಾರವಾಡವೆಂದರೆ ಕಲೆಯ ತವರೂರು. ಇಲ್ಲಿ ಏನೇ ಮಾಡಬೇಕಾದರೂ ಭಯದಿಂದಲೇ ಬದುಕಬೇಕು. ಭಯದಿಂದಲೇ ಪ್ರದರ್ಶನ ನೀಡಬೇಕು. ನನಗೆ 65 ವಯಸ್ಸು ತುಂಬಿದ್ದರೂ ಈಗಲೂ ಧಾರವಾಡವೆಂದರೆ ನನಗೆ ನಡುಕ ಹುಟ್ಟಿ ಬರುತ್ತದೆ.
-ಡಾ| ಆರ್‌.ಟಿ.ರಮಾ.
 

Trending videos

Back to Top