CONNECT WITH US  

ಇಂದು ಚಂದ್ರಗ್ರಹಣ

ಉಡುಪಿ: ಶನಿವಾರ ಹುಣ್ಣಿಮೆಯಂದು ಚಂದ್ರಗ್ರಹಣ ಆಗುತ್ತಿದೆ. ಈ ಗ್ರಹಣ ಭಾರತದಲ್ಲಿ ಚಂದ್ರೋದಯವಾಗುವ ಮೊದ‌ಲೇ ಖಗ್ರಾಸ ಮುಗಿದು, ಖಂಡಗ್ರಾಸ ಮಾತ್ರ ಗೋಚರಿಸಲಿದೆ.

ಗ್ರಹಣ ಮಧ್ಯಾಹ್ನ 3.45ಕ್ಕೆ ಪ್ರಾರಂಭಗೊಂಡರೂ ನಮಗೆ ಗೋಚರಿಸದೆ ಪಶ್ಚಿಮದಲ್ಲಿ ಸೂರ್ಯಾಸ್ತವಾಗುತ್ತಿದ್ದಂತೆ ಸಂಜೆ 6.44ರ ವೇಳೆ ಪೂರ್ವದಿಗಂತದಲ್ಲಿ 40 ಅಂಶ ಗ್ರಹಣಗೊಂಡ ಚಂದ್ರ ಉದಯಿಸಲಿದ್ದಾನೆ. 7.14ರ ವರೆಗೆ ಅಂದರೆ ಒಟ್ಟು 30 ನಿಮಿಷ ಗ್ರಹಣ ಗೋಚರವಾಗಲಿದೆ.

ಈ ಗ್ರಹಣ ಖಗ್ರಾಸವಾಗಿ (5.28ರಿಂದ 5.32ರ ವರೆಗೆ) ಶಾಂತಸಾಗರ, ಅಲಾಸ್ಕ್, ಪೂರ್ವ ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌, ಜಪಾನ್‌ಗೆ ಮಾತ್ರ ಕಾಣಿಸುವುದು. ಪಶ್ಚಿಮ ಹಾಗೂ ಉತ್ತರ ಅಮೆರಿಕಕ್ಕೆ ಕೊನೆಯ ಕ್ಷಣಗಳು ಕಾಣಿಸುವುದಿಲ್ಲ. ಹಾಗೆಯೇ ಮಧ್ಯ ಮತ್ತು ಪೂರ್ವ ಏಷ್ಯಾಗೆ ಅಂತಿಮ ಕ್ಷಣಗಳು ಮಾತ್ರ ಕಾಣಿಸಲಿವೆ. ಯುರೋಪ್‌ ಹಾಗೂ ಆಫ್ರಿಕಾಕ್ಕೆ ಕಾಣಿಸುವುದೇ ಇಲ್ಲ.

ಶಾಸ್ತ್ರದ ಪ್ರಕಾರ ಹಗಲು ಪೂರ್ತಿ ಆಹಾರ ನಿಷಿದ್ಧ. ಆದರೆ ಬಾಲರು, ವೃದ್ಧರು, ಅನಾರೋಗ್ಯಪೀಡಿತರು ಪೂರ್ವಾಹ್ನ 11 ಗಂಟೆಯೊಳಗೆ ಆಹಾರ ಸ್ವೀಕರಿಸಿ ಗ್ರಹಣ ಮುಗಿದ ಬಳಿಕ ಸ್ನಾನ ಮಾಡಿ ಆಹಾರ ಸ್ವೀಕರಿಸಬೇಕು.

Trending videos

Back to Top