CONNECT WITH US  

ನಿರಂತರ ಸಾಧನೆಯಿಂದ ಯಶಸ್ಸು: ಭಟ್‌

ಮಂಗಳೂರು : ಸಾಧನೆಯ ನಿರಂತರತೆ ಯಶಸ್ಸಿನ ಮೂಲ ಎಂದು ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ ಭಟ್‌ ಮಂಗಳವಾರ ಹೇಳಿದರು.

ಬ್ಯಾಂಕ್‌ನ ಕಳೆದ ಆರ್ಥಿಕ ವರ್ಷದ ಅಂತಿಮ ತ್ತೈಮಾಸಿಕದ ಸಾಧನೆ ಬಗ್ಗೆ ಪ್ರಾದೇಶಿಕ ಮುಖ್ಯಸ್ಥರ ಪರಾಮರ್ಶನ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಡಿಮೆ ವೆಚ್ಚದ ಠೇವಣಿ, ಸೊತ್ತುಮೌಲ್ಯ ಪರಿಗಣಿತ ಮುಂಗಡ ಹೆಚ್ಚಳ, ಅನುತ್ಪಾದಕ ವೆಚ್ಚದ ಕಡಿತ ಮುಂತಾದ ಪ್ರಮುಖ ವಿಚಾರಗಳ ಬಗ್ಗೆ ಬ್ಯಾಂಕ್‌ ವಿಶೇಷ ಕಾಳಜಿ ಹೊಂದಿದೆ. ಜಾಗತಿಕ ಡಿಜಿಟಲ್‌ ಬ್ಯಾಂಕಿಂಗ್‌ ಪರಿಗಣಿಸಿ ಐಟಿ ಆಧಾರಿತ ವ್ಯವಹಾರ ಮಾಹಿತಿ ಘಟಕ ಸ್ಥಾಪಿಸಲಾಗಿದೆ ಎಂದು ಅವರು ವಿವರಿಸಿದರು.

ಚೀಫ್‌ ಜನರಲ್‌ ಮೆನೇಜರ್‌ ಮಹಾಬಲೇಶ್ವರ ಎಂ.ಎಸ್‌. ಸ್ವಾಗತಿಸಿದರು. ಜನರಲ್‌ ಮೆನೇಜರ್‌ಗಳಾದ ಎನ್‌. ಉಪೇಂದ್ರ ಪ್ರಭು, ಡಾ| ಮೀರಾ ಅರಾನ್ಹಾ, ರಘುರಾಮ, ರಾಘವೇಂದ್ರ ಭಟ್‌ ಎಂ., ಚಂದ್ರಶೇಖರ ರಾವ್‌ ಬಿ. ಉಪಸ್ಥಿತರಿದ್ದರು. ಡಿಜಿಎಂ ವಿಜಯಶಂಕರ ರೈ ಕೆ.ವಿ. ವಂದಿಸಿದರು.

ಕರ್ಣಾಟಕ ಬ್ಯಾಂಕ್‌ನ ಕಳೆದ ಆರ್ಥಿಕ ವರ್ಷದ ಅಂತಿಮ ತ್ತೈಮಾಸಿಕದ ಸಾಧನೆ ಬಗ್ಗೆ ಪ್ರಾದೇಶಿಕ ಮುಖ್ಯಸ್ಥರ ಪರಾಮರ್ಶನ ಸಭೆ ಜರಗಿತು.

Trending videos

Back to Top