CONNECT WITH US  

ಕೆಎಂಸಿ : ಬಲಭಾಗದಲ್ಲಿ ಹೃದಯಹೊಂದಿರುವ ವ್ಯಕ್ತಿಗೆ ಶಸ್ತ್ರಚಿಕಿತ್ಸೆ

ಮಂಗಳೂರು : ಅತ್ಯಂತ ವಿರಳವೆನಿಸಿರುವ ದೇಹದ ಬಲಭಾಗದಲ್ಲಿ ಹೃದಯ ಹೊಂದಿರುವ ವ್ಯಕ್ತಿಯೊಬ್ಬರಿಗೆ ಕೆಎಂಸಿ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ| ಎಂ. ಎನ್‌. ಭಟ್‌ ನೇತೃತ್ವದ ತಂಡ ನಿರ್ವಹಿಸಿ ಸಾಧನೆ ಮಾಡಿದೆ.

ಈ ವಿರಳವಾದ ವೈದ್ಯಕೀಯ ಸ್ಥಿತಿಗೆ ಡೆಕ್ಸ್ತ್ರೋಕಾರ್ಡಿಯಾ ಎನ್ನುತ್ತಾರೆ. ಬೆಳ್ತಂಗಡಿಯ ಕೃಷಿಕ ಶೀನಪ್ಪ ಗೌಡ (63) ಎದೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ತಪಾಸಣೆಗಾಗಿ ಕೆಎಂಸಿ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯ ಪ್ರಮುಖ ಹೃದ್ರೋಗ ತಜ್ಞ ಡಾ| ಎಂ.ಎನ್‌. ಭಟ್‌ ಅವರು ತಪಾಸಣೆ ನಡೆಸಿದಾಗ ಈ ವ್ಯಕ್ತಿಗೆ ಸಾಮಾನ್ಯವಾಗಿ ಎಲ್ಲರಿಗೆ ಇರುವಂತೆ ಎಡಭಾಗ ಬದಲಿಗೆ ಹೃದಯ ಬಲಭಾಗದಲ್ಲಿರುವುದು ಪತ್ತೆಯಾಯಿತು. ಇದಲ್ಲದೆ ಅವರಿಗೆ ಹೃದಯಾಘಾತವಾಗಿತ್ತು. ಈ ಪರೀಕ್ಷೆಯ ತತ್‌ಕ್ಷಣ ಅವರಿಗೆ ಕರೋನರಿ ಆ್ಯಂಜಿಯೋಪ್ಲಾಸ್ಟಿ ನಡೆಸಿದ್ದು, ಹೃದಯದ ಶುದ್ಧರಕ್ತನಾಳದಲ್ಲಿ ಒಂದು ಸ್ಥಳದಲ್ಲಿ ಅಡ್ಡಿಯಾಗಿರುವುದು ಕಂಡು ಬಂದಿತ್ತು. ಎ. 14ರಂದು ಅವರಿಗೆ ಯಶಸ್ವಿ ಶಸ್ತ್ರಕ್ರಿಯೆ ನಡೆಸಲಾಯಿತು.

ಸ್ಟೆಂಟ್‌ ಅಳವಡಿಕೆಯೊಂದಿಗೆ ಆ್ಯಂಜಿಯೋ ಪ್ಲಾಸ್ಟಿ ಕಾರ್ಯ ಸವಾಲಿನದಾಗಿತ್ತು. ಏಕೆಂದರೆ ಈ ಉತ್ಪನ್ನ ಎಡಭಾಗದ ಹೃದಯಕ್ಕೆ ಸೂಕ್ತ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ. ಕೊನೆಗೆ ಬಲ ತೋಳಿನ ಮೂಲಕ ಆ್ಯಂಜಿಯೋ ಪ್ಲಾಸ್ಟಿಯನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಪ್ರಕ್ರಿಯೆಯಲ್ಲಿ ತಾಂತ್ರಿಕ ನವೀನತೆ ಬಳಸಿ ಬಲಭಾಗದ ಹೃದಯ ರಕ್ತನಾಳದಲ್ಲಿ ಸ್ಟೆಂಟ್‌ ಅಳವಡಿಸಲಾಯಿತು. ಕ್ರಮ ಯಶಸ್ವಿಯಾಗಿದ್ದು ರೋಗಿ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ಇದು ಅತ್ಯಂತ ವಿರಳವಾದ ಪ್ರಕರಣ. ಡೆಕ್ಸ್ತ್ರೋಕಾರ್ಡಿಯಾ ಅತ್ಯಂತ ಅಪರೂಪವಾಗಿದ್ದು ಜನ ಸಂಖ್ಯೆಯ ಶೇ. 0.008ರಷ್ಟು ಮಂದಿಯಲ್ಲಿ ಕಾಣಸಿಗುತ್ತದೆ. ಹೃದಯಾಘಾತದೊಂದಿಗೆ ಡೆಕೊÕ$óàಕಾರ್ಡಿಯಾ ಮತ್ತಷ್ಟು ವಿರಳವಾಗಿದ್ದು ಕಳೆದ 10 ವರ್ಷಗಳಲ್ಲಿ ಮಂಗಳೂರಿನಲ್ಲಿ ಕಂಡ ಎರಡನೇ ಪ್ರಕರಣ ಇದಾಗಿದೆ. ಕಾಕತಾಳೀಯವೆಂದರೆ ಹತ್ತು ವರ್ಷಗಳ ಹಿಂದೆ ಇದೇ ರೀತಿಯ ಪ್ರಕರಣವನ್ನು ನಾನೇ ಪತ್ತೆ ಮಾಡಿ ಚಿಕಿತ್ಸೆ ನೀಡಿದ್ದೆ.
- ಡಾ| ಎಂ.ಎನ್‌. ಭಟ್‌, ಶಸ್ತ್ರಚಿಕಿತ್ಸಾ ತಜ್ಞ

Trending videos

Back to Top