CONNECT WITH US  

ಶಕುಂತಳಾ ಭಟ್‌ಗೆ ಪಣಿಯಾಡಿ ಪ್ರಶಸ್ತಿ

ಉಡುಪಿ: ತುಳುಕೂಟ ನೀಡುವ ದಿ| ಎಸ್‌.ಯು. ಪಣಿಯಾಡಿ ಪ್ರಶಸ್ತಿಗೆ ಈ ಬಾರಿ ಹಳೆಯಂಗಡಿಯ ಎಚ್‌. ಶಕುಂತಳಾ ಭಟ್‌ ಅವರ "ಒಯ್ಲ' ಕಾದಂಬರಿ ಆಯ್ಕೆಯಾಗಿದೆ.

ತುಳು ಸಾಹಿತ್ಯ ಜನಪ್ರಿಯಗೊಳ್ಳಲು ಕಳೆದ 20 ವರ್ಷಗಳಿಂದ ಪಣಿಯಾಡಿ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು 8,000 ರೂ. ನಗದು ಬಹುಮಾನ ಹೊಂದಿದೆ. ಡಾ| ಕಾತ್ಯಾಯಿನಿ ಕುಂಜಿಬೆಟ್ಟು, ಪುತ್ತಿಗೆ ಪದ್ಮನಾಭ ರೈ, ಸುಲೋಚನಾ ಕೊಡವೂರು ಅವರನ್ನು ಒಳಗೊಂಡ ಸಮಿತಿಯು "ಒಯ್ಲ' ಹಸ್ತಪ್ರತಿಯನ್ನು ಆಯ್ಕೆ ಮಾಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಆ. 15ರಂದು ನಡೆಯಲಿದೆ ಎಂದು ಪ್ರಶಸ್ತಿ ಸಮಿತಿ ಸಂಚಾಲಕ ನಂದಕುಮಾರ್‌, ತುಳುಕೂಟದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ತಿಳಿಸಿದ್ದಾರೆ.

Trending videos

Back to Top