CONNECT WITH US  

ಐಸ್‌ಕ್ರೀಂ ತುಳು ಚಿತ್ರದ ಆಡಿಯೋ ಸಿಡಿ ಬಿಡುಗಡೆ

ಮಂಗಳೂರು: ಸಾಯಿ ಸಾಗರ್‌ ಕ್ರಿಯೇಶನ್ಸ್‌ ನಿರ್ಮಾಣದ ಐಸ್‌ಕ್ರೀಂ' ತುಳು ಚಿತ್ರದ ಆಡಿಯೋ ಸಿಡಿ ಬಿಡುಗಡೆ ಶನಿವಾರ ಸಂಜೆ ಮಂಗಳೂರು ವಿ.ವಿ. ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಮೂಡುಬಿದರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅವರು ಚಿತ್ರದ ಆಡಿಯೋ ಬಿಡುಗಡೆಗೊಳಿಸಿದರು.

ಶಾಸಕ ಮೊದೀನ್‌ ಬಾವ, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಎಸ್‌.ಡಿ. ಶರಣಪ್ಪ, ಹಿರಿಯ ಪತ್ರಕರ್ತ ಅನಂತ ಚಿನಿವಾರ್‌, ಮಿಜಾರು ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ, ರೋಟರಿ ಜಿಲ್ಲಾ ಅಸಿಸ್ಟೆಂಟ್‌ ಗವರ್ನರ್‌ ಕೆ.ಎಸ್‌. ಪೈ, ನಮ್ಮ ಟಿ.ವಿ. ನಿರ್ದೇಶಕ ಡಾ| ಶಿವಶರಣ್‌ ಶೆಟ್ಟಿ, ಚಿತ್ರ ನಿರ್ದೇಶಕ ವಿಜಯ ಕುಮಾರ್‌ ಕೊಡಿಯಾಲಬೈಲ್‌, ನಿರ್ಮಾಪಕ ದೇವದಾಸ್‌ ಪಾಂಡೇಶ್ವರ, ಸಂಗೀತ ನಿರ್ದೇಶಕ ಮದನ ಮೋಹನ್‌ ಮುಖ್ಯ ಅತಿಥಿಗಳಾಗಿದ್ದರು. ನಟಿ ಪಾಖೀ ಹೆಗ್ಡೆ ವಿಶೇಷ ಅತಿಥಿಯಾಗಿದ್ದರು.

ದಿನೇಶ್‌ ಅತ್ತಾವರ ಹಾಗೂ ಮಿಥುನ್‌ರಾಜ್‌ ಅವರನ್ನು ಸಮ್ಮಾನಿಸಲಾಯಿತು. ನಾಯಕ ನಟ ರೂಪೇಶ್‌ ಶೆಟ್ಟಿ, ನಟಿ ಅನ್ವಿತಾ ರಾವ್‌ ಉಪಸ್ಥಿತರಿದ್ದರು.

ನಿರ್ಮಾಪಕ-ನಿರ್ದೇಶಕ ಪ್ರೀತಮ್‌ ಸಾಗರ್‌ ಸ್ವಾಗತಿಸಿದರು. ನಿರ್ಮಾಪಕಿ ನವಿತಾ ಜೈನ್‌ ವಂದಿಸಿದರು. ನಿರ್ದೇಶಕ ವೇಣುಗೋಪಾಲ್‌ ಶೆಟ್ಟಿ ಪ್ರಸ್ತಾವಿಸಿದರು.

ಈ ಸಂದರ್ಭ ಅಂತರ್‌ ಕಾಲೇಜು ನೃತ್ಯ ಸ್ಪರ್ಧೆ, ಮಿಮಿಕ್ರಿ, ಸಂಗೀತ ರಸಮಂಜರಿ, ಮಿಸ್ಟರ್‌ ಐಸ್‌ಕ್ರೀಮ್‌, ಮಿಸ್‌ ಐಸ್‌ಕ್ರೀಮ್‌ ಹಾಗೂ ಐಸ್‌ಕ್ರೀಮ್‌ ಕ್ಯುಟೀ ಸ್ಪರ್ಧೆ ಆಯೋಜಿಸಲಾಗಿತ್ತು.

ಹೊಸಬರಿಂದ ಕೂಡಿದ, ಹೊಸತನವಿರುವ ಈ ಚಿತ್ರದಲ್ಲಿ ಹಾರರ್‌, ಆ್ಯಕ್ಷನ್‌, ಕಾಮಿಡಿ, ಲವ್‌ ಎಲ್ಲವನ್ನು ಹದವಾಗಿ ಬೆರೆಸಲಾಗಿದೆ. ಸ್ನೇಹಿತರ ಜತೆ ಛಾಲೆಂಜ… ಸ್ವೀಕರಿಸಿದ ನಾಯಕ ಹೊಸ ಸಾಹಸಕ್ಕೆ ಕೈ ಹಾಕುವ ವಿಭಿನ್ನ ಕಥೆಯಾಧಾರಿತ ಚಿತ್ರ ಇದಾಗಿದೆ. ಇಡೀ ಸಿನಿಮಾದಲ್ಲಿ ಕರಾವಳಿಯ ಫೇಮಸ್‌ ತಿನಿಸು ಐಸ್‌ಕ್ರೀಮ… ಮುಖ್ಯ ಪಾತ್ರ ವಹಿಸಿದೆ. ಈ ಕಾರಣಕ್ಕೆ ಚಿತ್ರಕ್ಕೆ ಐಸ್‌ಕ್ರೀಮ…' ಟೈಟಲ… ಬಳಸಲಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿÇÉೆಗಳ ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಮುಂದಿನ ತಿಂಗಳು ಚಿತ್ರ ಬಿಡುಗಡೆಗೊಳ್ಳಲಿದೆ ಎಂದು ನಿರ್ಮಾಪಕ-ನಿರ್ದೇಶಕ ಪ್ರೀತಮ್‌ ಸಾಗರ್‌ ತಿಳಿಸಿದ್ದಾರೆ.

Trending videos

Back to Top