ಜೀವನ ಪ್ರೀತಿಯ ಜನಪದ ಕುಣಿತಗಳು


Team Udayavani, May 12, 2017, 3:45 AM IST

11-KALA-2.jpg

ತುಳುನಾಡಿನ ಭೌಗೋಳಿಕ ಸ್ಥಿತಿ, ಜೀವನ ಕ್ರಮ ಬದಲಾದಂತೆ ಇಲ್ಲಿನ ಜನಪದ ಕುಣಿತಗಳ ಸ್ವರೂಪವೂ ಬದಲಾಗುತ್ತ ಬಂದಿದೆ, ಕೆಲವು ಮಾಯವಾಗಲು ತೊಡಗಿವೆ. ಈ ಹಿನ್ನೆಲೆಯಲ್ಲಿ ಸಮಗ್ರ ದಾಖಲೀಕರಣ, ಸಚಿತ್ರ ಗ್ರಂಥ ಪ್ರಕಾಶನದ ಉದ್ದೇಶದಿಂದ ಉಡುಪಿಯ 
ಆರ್‌ಆರ್‌ಸಿ ನಡೆಸಿದ ಈ ದಾಖಲೀಕರಣಕ್ಕೆ ಮಹಣ್ತೀವಿದೆ.

ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ (ಆರ್‌ಆರ್‌ಸಿ)ವು ಕಳೆದ ಇತ್ತೀಚೆಗೆ ಮಣಿಪಾಲ ವಿಶ್ವವಿದ್ಯಾಲಯದ ಆಡಳಿತಾತ್ಮಕ ವ್ಯಾಪ್ತಿಯೊಳಗೆ ಸೇರಿರುವುದು ಜಾನಪದ ಅಧ್ಯಯನಾಸಕ್ತರಿಗೆ ಸಂತೋಷದ ವಿಷಯವಾಗಿದೆ. ಇದರ ಬಳಿಕ ಆರ್‌ಆರ್‌ಸಿ ಸಂಸ್ಥೆಯು ಮೊದಲ ಬಾರಿಗೆ ಸುಳ್ಯ ತಾಲೂಕಿನಲ್ಲಿ ಮೂರು ದಿನಗಳ ಜನಪದ ಕುಣಿತಗಳ ದಾಖಲೀಕರಣವನ್ನು ಹಮ್ಮಿಕೊಂಡಿತ್ತು. ಸುಮಾರು ಇಪ್ಪತ್ತೆçದು ವರ್ಷಗಳ ಹಿಂದೆ ಪೊ›. ಕು. ಶಿ. ಹರಿದಾಸ ಭಟ್ಟರ ನೇತೃತ್ವದಲ್ಲಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಮನೆ ಏರ್ಯ ಬೀಡಿನ ಅಂಗಳದಲ್ಲಿ ತುಳುನಾಡಿನ ಬಹುತೇಕ ವಿದ್ವಾಂಸರ ಭಾಗವಹಿಸುವಿಕೆಯ ಮೂಲಕ ಜನಪದ ಕುಣಿತಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಕಳೆದ ಇಷ್ಟು ವರ್ಷಗಳಲ್ಲಿ ತುಳುನಾಡಿನ ಭೌಗೋಳಿಕ ಸ್ಥಿತಿ, ಜೀವನ ಕ್ರಮ ಬದಲಾದಂತೆ ಈ ಕುಣಿತಗಳ ಸ್ವರೂಪವೂ ಬದಲಾಗುತ್ತ ಬಂದಿದೆ. ಬಹುತೇಕ ಕುಣಿತಗಳು ಕೃಷಿಬದುಕಿನೊಂದಿಗೆ ತಳಕು ಹಾಕಿ ಕೊಂಡಿದ್ದು, ಕೃಷಿ ನಮ್ಮಿಂದ ದೂರವಾಗುತ್ತಿದ್ದಂತೆ ಇವೂ ಮಾಯವಾಗಲು ಶುರುವಾಗಿವೆ. ಹಿಂದಿನ ಕಾಲದ ಬಡತನ ಈಗ ಇಲ್ಲ, ಹೀಗಾಗಿ ಜೀವನ ನಿರ್ವಹಣೆಯ ನೆಪದಲ್ಲಿ ಇವು ಉಳಿದುಕೊಳ್ಳಲೂ ಸಾಧ್ಯವಿಲ್ಲ. ಕೆಲವು ಕುಣಿತಗಳು ಆರಾಧನೆಯ ಹಿನ್ನೆಲೆಯಿಂದ ಮೂಡಿ ಬಂದವಾದ ಕಾರಣ ಶಿಷ್ಟ ಸಂಪ್ರದಾಯದ ಚೌಕಟ್ಟಿನೊಳಗೆ ಬಂಧಿಸಲ್ಪಟ್ಟು ಉಳಿದುಕೊಂಡಿವೆ. ಈ ಹಿನ್ನೆಲೆಯಲ್ಲಿ ಮತ್ತೂಮ್ಮೆ ತುಳುನಾಡಿನ ಜನಪದ ಕುಣಿತಗಳನ್ನು ಸಮಗ್ರವಾಗಿ ದಾಖಲಿಸಿಕೊಂಡು ಸಚಿತ್ರ ಸಮೇತವಾಗಿ ಗ್ರಂಥರೂಪದಲ್ಲಿ ಪ್ರಕಟಿಸಬೇಕೆಂಬ ಆರ್‌ಆರ್‌ಸಿಯ ಕನಸು ನನಸಾದದ್ದು ಇದೇ ಎಪ್ರಿಲ್‌ ತಿಂಗಳ 29, 30 ಹಾಗೂ ಮೇ 1, 2017ರಂದು. ಸುಳ್ಯ ತಾಲೂಕಿನ ಬೆಳ್ಳಾರೆ ಸಮೇಪ ಪನ್ನೆ ಪ್ರಭಾಕರ ರೈಯವರ ಮನೆಯ ಅಂಗಳದಲ್ಲಿ ಸುಮಾರು ಇಪ್ಪತ್ತು ಅಪೂರ್ವ ಜನಪದ ಕುಣಿತಗಳ ಪ್ರದರ್ಶನವನ್ನು ಸಂಯೋಜಿಸಲಾಯಿತು. ಇದರಲ್ಲಿ ಸುಮಾರು 250 ಕಲಾವಿದರು ಭಾಗ‌ವಹಿಸಿದ್ದರು. ಈ ಪ್ರದರ್ಶನ-ದಾಖಲೀಕರಣದ ನೇತೃತ್ವವನ್ನು ಆರ್‌ಆರ್‌ಸಿಯ ಡಾ| ಅಶೋಕ ಆಳ್ವ, ಸುಳ್ಯದ ಡಾ| ಸುಂದರ ಕೇನಾಜೆ ಹಾಗೂ ಡಾ| ವೈ. ಎನ್‌. ಶೆಟ್ಟಿ ಅವರು ವಹಿಸಿದ್ದರು. ದಾಖಲಾತಿಯನ್ನು ಆರ್‌ಆರ್‌ಸಿಯ ಲಚ್ಚೇಂದ್ರ ಅವರನ್ನೊಳಗೊಂಡ ತಂಡ ಹಾಗೂ ಛಾಯಾಚಿತ್ರದಲ್ಲಿ ಯಜ್ಞ ಮಂಗಳೂರು ಅವರು ಸಹಕರಿಸಿದ್ದರು. ಸ್ಥಳೀಯವಾಗಿ ಆರ್‌. ಕೆ. ಬೆಳ್ಳಾರೆ, ನಂದರಾಜ್‌ ಸಂಕೇಶ ಹಾಗೂ ಲಿಂಗಪ್ಪ ಇವರ ಸಹಕಾರ ಸ್ಮರಣೀಯ.

ದಾಖಲೀಕರಣಗೊಂಡ ಕೆಲವು ಕುಣಿತಗಳು
ಮೊದಲ ದಿನ ಪೂರ್ವಾಹ್ನ ಸುಳ್ಯ ತಾಲೂಕು, ಬಾಳಿಲದ ನಾರಾಯಣ ಹಾಗೂ ಕೇಶವ ಇವರಿಂದ ಮದಿಮ್ಮಾಯ ಮದಿಮ್ಮಾಲ್‌ ಕುಣಿತ ನಡೆಯಿತು. ಹೆಸರೇ ಸೂಚಿಸುವಂತೆ ಮದುಮಗ ಮತ್ತು ಮದುಮಗಳು ಈ ಕುಣಿತದ ಪಾತ್ರಧಾರಿಗಳು. ಈ ಕುಣಿತಕ್ಕೆ ಪೂರಕವಾಗಿ ಸಂಧಿ ಇದೆ. ಈ ಜನಾಂಗದ ಗಂಡು ಮತ್ತು ಹೆಣ್ಣು ಒಟ್ಟಾಗಿ ತೆಂಬರೆಯೆಂಬ ವಾದನದ ಹಿಮ್ಮೇಳ ದೊಂದಿಗೆ ಹಾಡುತ್ತಿದ್ದರು. ಮಾಯಿ ಹುಣ್ಣಿಮೆಯಿಂದ ಆರಂಭಿಸಿ ಸುಗ್ಗಿ ಹುಣ್ಣಿಮೆಯವರೆಗೆ ಒಂದು ತಿಂಗಳ ಕಾಲ ರಾತ್ರಿ ಮನೆ ಮನೆಗೆ ಹೋಗಿ ಈ ಕುಣಿತ ನಡೆಸುತ್ತಾರೆ. ಈ ಕುಣಿತದ ಹಾಡಿನಲ್ಲಿ ಒಂದು ಕಥೆ ಇದೆ. ಏಳು ಜನ ಕನ್ಯೆಯರು ಘಟ್ಟದ ಮೇಲಿನಿಂದ ತುಳುದೇಶಕ್ಕೆ ಬರುತ್ತಾರೆ. ಇವರು ಆರು ಅಮಾವಾಸ್ಯೆ, ಮೂರು ಹುಣ್ಣಿಮೆ ಮನೆಮನೆಗೆ ಬೇಡುತ್ತ ಹೋಗಿ ಒಂದು ದಿನ ಶಿವರಾತ್ರಿಯಂದು ಉಪ್ಪಿನಂಗಡಿ ಮಖೆ ಸ್ನಾನ ಮಾಡಲು ಹೋಗುತ್ತಾರೆ. ಅಲ್ಲಿ ಕಿರಿಯಾಕೆಗೆ ಜಾರಕಳುವ ಎಂಬಾತನ ಪರಿಚಯವಾಗಿ ಆತನ ಜತೆ ಕಂಚಿದರಿ ದೇಸೆ ಅರ್ಥಾತ್‌ ಮದುವೆಯಾಗುತ್ತದೆ ಎಂದು ತಿಳಿಸುವಲ್ಲಿಗೆ ಹಾಡು ಮುಕ್ತಾಯವಾಗುತ್ತದೆ. ಸುಳ್ಯ ಪರಿಸರದಲ್ಲಿರುವ ಬಹುಮುಖ್ಯ ಕುಣಿತಗಳಲ್ಲಿ ಸಿದ್ಧವೇಷವೂ ಒಂದು. ಮಲೆಕುಡಿಯ ಹಾಗೂ ಗೌಡ ಜನಾಂಗದವರು ನಡೆಸಿರುವ ಕುಣಿತಗಳನ್ನು ಪ್ರತ್ಯೇಕವಾಗಿ ದಾಖಲಿಸಿಕೊಳ್ಳಲಾಗಿದೆ. ಸುಗ್ಗಿ ಹುಣ್ಣಿಮೆಯಿಂದ ಆರಂಭಿಸಿ 10 ದಿನಗಳ ಕಾಲ ನಡೆಸುವ ಈ ಕುಣಿತಗಳಲ್ಲಿ ಪುರ್ಸೆರೆ ಜೋಕುಲು, ಸನ್ಯಾಸಿ, ದಾಸಯ್ಯ ಹಾಗೂ ಅರ್ಚಕ ಭಟ್ರಾ ಅಲ್ಲದೆ ಹಾಡಿನವರು ಹೀಗೆ 25 ಜನ ಇರುತ್ತಾರೆ. ಇಲ್ಲಿನ ಹಾಡು ಕನ್ನಡದಲ್ಲಿದೆ. ಸಾಮಾನ್ಯವಾಗಿ ಈ ಹಾಡಿನಲ್ಲಿ ದಿಮಿಸಾಲೆಯ ಜತೆ ಇವರ 108 ಮಠಗಳ ವಿವರಗಳು ಬರುತ್ತವೆ. ಸುಬ್ರಹ್ಮಣ್ಯ ಮಠದ ವಿವರಗಳು ಬರುವಾಗ ಸನ್ಯಾಸಿಯು ರಂಗಕ್ಕೆ ಪ್ರವೇಶವಾಗಿ ಕುಣಿಯುತ್ತಾನೆ ಮತ್ತು ಅರ್ಚಕರಿಗೆ ತನ್ನ ಲಕ್‌ಡಿ ಪೂಜೆ ಮಾಡುವಂತೆ ಕೇಳಿಕೊಳ್ಳುತ್ತಾನೆ. ನಾವು ಬೇಡಲು ಬರುವವರಲ್ಲ, ಕಿರಿಕಿರಿ ಮಾಡುವವರಲ್ಲ, ದುಡ್ಡು ಕೊಟ್ಟು ಕಳಿಸಿರಯ್ಯ ಎನ್ನುತ್ತಾ ತಮ್ಮ ಕುಣಿತವನ್ನು ಮುಗಿಸುತ್ತಾರೆ. ಈ ಪ್ರಕಾರದಲ್ಲಿ ನಾಥ ಸಂಪ್ರದಾಯದ ದಟ್ಟವಾದ ಚಹರೆಗಳು ಇರುವುದು ಕಂಡು ಬರುತ್ತವೆ. ಸುಬ್ರಹ್ಮಣ್ಯದ ಕಡೆ ಈ ಕುಣಿತವನ್ನು ಪುರ್ಸೆರ್‌ ಎಂದೂ ಕರೆಯುವುದಿದೆ. ಪುರ್ಸೆರ್‌ ದೈವ ಊರು ಇಳಿಯಲಾಗದೆ ಈ ವೇಷದಲ್ಲಿ ಬಂತು ಎಂಬ ಹೇಳಿಕೆಯೂ ಇದೆ.

ಕಾವೇರಿ ಪುರುಷ ಕುಣಿತವು ಸಾಮಾನ್ಯವಾಗಿ ಕಾವೇರಿ ಸಂಕ್ರಮಣದಿಂದ ಆರಂಭಿಸಿ ಕೆಲವು ದಿನ ಕಾಲ ಈ ಕುಣಿತ ನಡೆಯುತ್ತದೆ. ಈ ಕುಣಿತದಲ್ಲಿಯೂ ನಾಥ ಸಂಪ್ರದಾಯದ ಚಹರೆಗಳು ಇರುವುದನ್ನು ಕಾಣಬಹುದಾಗಿದೆ. ಕೃಷ್ಣ ಜಾಂಬವ ಕುಣಿತ ನವರಾತ್ರಿ ಉತ್ಸವದ ಸಂದರ್ಭ ನಡೆಸುವಂಥದ್ದು. ಪೌರಾಣಿಕ ಕಲ್ಪನೆಯ ಕೃಷ್ಣಧಿ-ಜಾಂಬವರು ತಾಸೆ ಹಾಗೂ ಡೋಲಿನ ಲಯಕ್ಕನುಗುಣವಾಗಿ ಕುಣಿಯುವುದು ಮತ್ತು ಕೃಷ್ಣ ಒಬ್ಬ ಗೋಪಾಲಕನಾಗಿ ಕಂಡು ಬರುತ್ತಾನೆ. ಕೃಷ್ಣ ಜಾಂಬವರ ನಡುವಿನ ಜಗಳ, ಜಾಂಬವನನ್ನು ಕೃಷ್ಣ ಸೋಲಿಸುವುದು ಇವಿಷ್ಟು ಇಲ್ಲಿ ಕಾಣಿಸುವ ಅಂಶಗಳು. ಇದಕ್ಕೆ ಪೂರಕವಾಗಿ ಯಾವುದೇ ಹಾಡು, ಕಥೆ, ಐತಿಹ್ಯಗಳಿರುವುದು ಕಂಡು ಬರುವುದಿಲ್ಲ. 
ದುಡಿ, ಚೆನ್ನು, ಕನ್ಯಾಪು, ಮಾದಿರ, ಮದಿಮ್ಮಾಯ ಮದಿಮ್ಮಾಳ್‌ ಹಾಗೂ ಆದಿ ದ್ರಾವಿಡರ ಮದಿಮ್ಮಾಯ ಮದಿಮ್ಮಾಳ್‌ ಮುಂತಾದ ಕುಣಿತಗಳಲ್ಲಿ ಹೆಚ್ಚಾಗಿ ಹೆಂಗಸರೇ ಉತ್ಸಾಹದಿಂದ ಭಾಗವಹಿಸಿದ್ದು ಮಹತ್ವ¨ªಾಗಿತ್ತು. ತುಳುನಾಡಿನ ಜನಪದ ಕುಣಿತಗಳ ಒಟ್ಟು ನಿರ್ವಹಣೆಯಲ್ಲಿ ಸುಳ್ಯ ತಾಲೂಕಿನ ಹೆಂಗಸರ ಪಾತ್ರ ಬಲು ದೊಡ್ಡದು. 

ದುಡಿ ಕುಣಿತ ಆ ಜನವರ್ಗದ ಕಠಿನ ಪರಿಶ್ರಮದ ಸಂಕೇತವಾಗಿ ಉಳಿದು ಬಂದಿರುವುದನ್ನು ಕಾಣಬಹುದು. ದುಡಿಯನ್ನು ಬಾರಿಸುವಾಗ ಏಳುವ ಸದ್ದೇ ಅದು ತುಳುವಿನ “ಬೆನ್‌ ಬೆನ್‌’ ಹಾಗೂ “ಈ ಬೆಂದ್‌ಂಡ ಉಣ್‌ಂಬ’ ಎಂಬ ರೀತಿಯಲ್ಲಿ ತಿಳಿಸುವಂತಿದೆ. ಯಾವತ್ತೂ ಸೋಮಾರಿಯಾಗಿ ಬದುಕದೆ ದುಡಿಮೆಯ ಮೂಲಕ ಬದುಕನ್ನು ಕಟ್ಟಿಕೋ ಎಂಬುದೇ ಇಲ್ಲಿನ ಕುಣಿತದ ತಾತ್ಪರ್ಯ. ಚೆನ್ನು ಅನಾಥ ಹೆಣ್ಣು ಮಗುವೊಬ್ಬಳ ಬದುಕಿನ ಕಥೆಯನ್ನು ಸಾರುವ ಕುಣಿತ. ಇದು ಸ್ತ್ರೀ ಸ್ವಾತಂತ್ರ್ಯ, ಬಡತನ ಹಾಗೂ ಸ್ವಾಭಿಮಾನದ ಸಂದೇಶ‌ವನ್ನು ಸಾರುವ ಕುಣಿತವೂ ಹೌದು. ಸುಗ್ಗಿ ಅಮಾವಾಸ್ಯೆ ಕಳೆದು ಆರಂಭವಾಗುವ ಈ ಕುಣಿತ ಸುಗ್ಗಿ ಹುಣ್ಣಿಮೆಗೆ ಮುಕ್ತಾಯ ವಾಗುತ್ತದೆ. ಕನ್ಯಾಪು ಕುಣಿತ ದುಡಿಯ ನುಡಿತದೊಂದಿಗೆ ಹೆಂಗಸರು ವೃತ್ತಾಕಾರವಾಗಿ ಕುಣಿಯುವ ಒಂದು ಕುಣಿತ. ಇದರ ಹಾಡಿನಲ್ಲಿ ಊರಿಗೆ ಬರುವ ಮಾರಿ ರೋಗಗಳನ್ನು ಹೊರಹಾಕಿ ಸಮಸ್ತ ಮಾನವ, ಸಸ್ಯ ಮತ್ತು ಪ್ರಾಣಿ ಸಂಪತ್ತಿಗೆ ತೊಂದರೆ ಬಾರದಂತೆ ರಕ್ಷಿಸುವ ಅಭಯ ಇರುವುದನ್ನು ಕಾಣಬಹುದಾಗಿದೆ. ಮಾದಿರ ಕುಣಿತ ಸಾಮಾನ್ಯವಾಗಿ ಹೆಂಗಸರು ಪೂಕರೆ, ಬಾಕಿಮಾರು ಗ¨ªೆಗೆ ಬಾಳೆ ಹಾಕುವ ಸಂದರ್ಭ ಮನೆಮನೆಗೆ ಹಗಲು ಹೊತ್ತಲ್ಲಿ ಹೋಗಿ ಕುಣಿಯುವ ಕುಣಿತ. ಕೆಲವು ಕಡೆ ವಿಷುವಿಗೂ ಈ ಕುಣಿತವನ್ನು ನಡೆಸುವುದಿದೆ.

ಸುಳ್ಯ ತಾಲೂಕಿನ ದೇವಚಳ್ಳದ ಶ್ರೀಧರ ವಿ.ನಾಯ್ಕ ಮತ್ತು ತಂಡ ಅಮೊ°ರ ಕುಣಿತವನ್ನು ನಡೆಸಿಕೊಟ್ಟರು. ಸಾಮಾನ್ಯವಾಗಿ ಈ ಕುಣಿತವನ್ನು ಧಾರ್ಮಿಕ ಆಚರಣೆಯಾದ ಗೋಂದೊಲು ಪೂಜೆಯ ಸಂದರ್ಭ ನಡೆಸುತ್ತಾರೆ. ಕೃಷ್ಣ ನಾಯ್ಕ ಪೆಲ್ತಾಜೆ ಮತ್ತು ತಂಡದವರು ತುಳುನಾಡಿನಲ್ಲಿ ಬಹು ಅಪರೂಪವಾಗಿ ಕಂಡುಬರುವ ಬಾಲೆಸಾಂತ್‌ ಕುಣಿತವನ್ನು ನಡೆಸಿಕೊಟ್ಟರು. ಇದೂ ಒಂದು ಆಚರಣಾತ್ಮಕ ಕುಣಿತ. ಈ ಕುಣಿತವನ್ನೂ ಬುಡಕಟ್ಟು ಜನಾಂಗದವರು ನಡೆಸುತ್ತಾರೆ. ತುಳುವಿನ ಮಾಯಿ ಹತ್ತರಂದು ಪ್ರಾರಂಭಿಸಿ ಮಾಯಿ ಹುಣ್ಣಿಮೆಗೆ ಮುಗಿಸಬೇಕೆಂಬುದು ಕ್ರಮ. ಶೃಂಗೇರಿ ಶಾರಂದಾಂಬೆಯ ಉತ್ಸವಮೂರ್ತಿಯ ಜತೆಗೆ ಕೊರಗ ಕೊರಪೊಳು, ಮೈ ಪೂರ್ತಿ ಒಣ ಬಾಳೆಎಲೆಗಳನ್ನು ಸುತ್ತಿಕೊಂಡ ಸನ್ಯಾಸಿ, ಅಂಚೆಯವ, ಮಂಗನನ್ನು ಕುಣಿಸುವವ, ಮುಸ್ಲಿಂ ವೇಷಧಾರಿ, ಭೂತ, ಭೂತದ ಮಾಣಿ -ಹೀಗೆ ಸಂದರ್ಭಕ್ಕೆ ತಕ್ಕಂತೆ ವೇಷಗಳು ಇರುತ್ತವೆ. ಕೆಲವು ಕುಣಿತಗಳು ಹಾಸ್ಯ ಪಾತ್ರಗಳಾಗಿರುತ್ತವೆ. ಬಾಲ್‌ ಬಾಲೊÂà ಬಾಲೆಸಾಂತ್‌ ಹಾಡನ್ನು ಹಾಡುತ್ತಾ ಮನೆಮನೆಗೆ ಬರುವ ಇವರು ಎಲ್ಲರೂ ಒಟ್ಟಾಗಿ ಅಂಗಳದಲ್ಲಿ ಕುಣಿದು ಆ ನಂತರ ಒಂದೊಂದೇ ಪಾತ್ರಗಳು ರಂಗದ ಮುಂದೆ ಬಂದು ತಮ್ಮ ಪ್ರದರ್ಶನವನ್ನು ನೀಡುತ್ತವೆ. ಇಲ್ಲಿನ ಸನ್ಯಾಸಿ ವೇಷ ಸುಳ್ಯ ಪರಿಸರದ ಸಿದ್ಧ ವೇಷದ ಸನ್ಯಾಸಿಗೆ ಸಮನಾಗಿದೆ. ಬೆಳ್ತಂಗಡಿ ತಾಲೂಕಿನ ಉರುಂಬಿದೊಟ್ಟು ಭಾಗದಲ್ಲಿ ಇದೇ ರೀತಿಯ ಕುಣಿತವನ್ನು ಪುರ್ಸೆರ್‌ ಹೆಸರಲ್ಲಿ ನಡೆಸುತ್ತಾರೆ. ಅವರೂ ದಿಮಿಸಾಲೆ ಹಾಡನ್ನು ಬಳಸುತ್ತಾರೆ. ಅಚ್ಯುತ ಗುತ್ತಿಗಾರು ಹಾಗೂ ತಂಡದವರು ಪಿಲಿಪಂಜಿ ಕುಣಿತ ನಡೆಸಿದರು. ಬೆಳ್ತಂಗಡಿ ಭಾಗದ ಪಿಲಿಪಂಜಿ ಕುಣಿತಕ್ಕೂ ಸುಳ್ಯ ಭಾಗದ ಕುಣಿತಕ್ಕೂ ವ್ಯತ್ಯಾಸವಿದೆ. ತುಳುನಾಡಿನಲ್ಲಿ ಬಹಳ ಅಪೂರ್ವವಾಗಿ ಕಂಡುಬರುವ ಭೈರರ ಕುಣಿತವನ್ನು ವಿ. ಜಿ. ಪರಮೇಶ್ವರ ಅವರು ನಡೆಸಿಕೊಟ್ಟರು. ಮಹಾಭಾರತದ ಪಾಂಡವರು – ಕೌರವರ ವೈಮನಸ್ಸು, ಮೋಸದ ಜೂಜಿನ ಪ್ರಸಂಗ, ಪಾಂಡವರ ವನವಾಸ ಇತ್ಯಾದಿ ಭಾಗವನ್ನು ತಾಳದೊಂದಿಗೆ ಹಾಡುತ್ತ ನಾರದನಂತೆ ವೇಷ ಹಾಕಿ ಕುಣಿಯುವುದು ಈ ಕುಣಿತದ ವಿಶೇಷತೆ. ತನ್ನ ಅಪ್ಪನಿಂದ ಕಲಿತ ಈ ಕಲೆಯನ್ನು ಸಾಮಾನ್ಯವಾಗಿ ನವರಾತ್ರಿ, ದೀಪಾವಳಿ ಸಂದರ್ಭಗಳಲ್ಲಿ ನಡೆಸುತ್ತಾರೆ. ಭೈರರ ಕುಣಿತದ ಕೊನೆಯ ಕೊಂಡಿಯಾಗಿ ಇದು ಉಳಿದು ಬಂದಿದೆ.

ಕಂಗೀಲು ಕುಣಿತ ವೇಷಭೂಷಣ, ಹಾಡು, ಹಿನ್ನೆಲೆ ವಾದನಗ‌ಳಲ್ಲಿ ಹೆಚ್ಚಿನ ಬದಲಾವಣೆಯನ್ನು ಪಡೆಯದಿದ್ದರೂ ಬಹುತೇಕವಾಗಿ ಇದು ಅನೇಕ ಜಾನಪದ ಉತ್ಸವ, ಕಲಾವೇದಿಕೆಗಳಲ್ಲಿ ಪ್ರದರ್ಶನ ಗೊಳ್ಳುತ್ತಿರುವುದರಿಂದ ತನ್ನ ಸ್ವರೂಪದಲ್ಲಿ ಕಲಾಪ್ರದರ್ಶನದ ಅಂಶಗಳನ್ನು ಮೈಗೂಡಿಸಿ ಕೊಂಡಿದೆ. ಆಟಿ ಕಲೆಂಜ ಊರಿನ ಮಾರಿಕಳೆಯು ವುದಕ್ಕೆ ಬರುವ ಕುಣಿತವಾದರೂ ಇದರ ಬಣ್ಣ ಮತ್ತು ವೇಷಭೂಷಣಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದಿ ದ್ರಾವಿಡರಲ್ಲಿ ಹೆಣ್ಣಿಗೆ ಮದುವೆ ನಿಶ್ಚಯವಾಗಿ ತನ್ನ ಒಡೆಯನ ಮನೆಗೆ ಮದುವೆ ಹೇಳಿಕೆ ಕೊಡುವ ಹಾಡು ಮತ್ತು ಕುಣಿತದ ಮದಿಮ್ಮಾಳೆ ಕುಣಿತವಿದೆ. ಈ ಎಲ್ಲ ಕುಣಿತಗಳು ಕೇವಲ ಆಂಗಿಕ ಅಭಿನಯಗಳಾ ಗದೆ, ಸಾಂಸ್ಕೃತಿಕ ಮತ್ತು ಸಾಮುದಾಯಿಕ ಸ್ಥಿತಿಯ ಪ್ರತಿಬಿಂಬಗಳಾಗಿವೆ. ಹಾಗಾಗಿ, ಸಂಸ್ಕೃತಿ ಮತ್ತು ಸಮಾಜದ ಅಧ್ಯಯನ ಮಾಡುವವರಿಗೆ ಇವು ಮುಖ್ಯ ಆಕರಗಳೆನಿಸುತ್ತವೆ. ಆಧುನಿಕತೆ ಮತ್ತು ನವ ಜೀವನವಿಧಾನದ ಓಘದಲ್ಲಿ ಈ ಕುಣಿತಗಳು ಮರೆಯಾಗುವ ಸಾಧ್ಯತೆ ಇದೆ. ಹಾಗಾಗಿ, ಇವುಗಳನ್ನು ದೃಶ್ಯ ದಾಖಲೀಕರಣ ಮಾಡಿರುವ ಆರ್‌ಆರ್‌ಸಿ ಸಂಸ್ಥೆಯು ಮಹಣ್ತೀದ ಕೆಲಸ ಮಾಡಿದೆ. ಪ್ರಸ್ತುತ ಆರ್‌ಆರ್‌ಸಿ ಸಂಸ್ಥೆಯು ಮಣಿಪಾಲ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬಂದಿರುವುದರಿಂದ ಅಕಡೆಮಿಕ್‌ ಅಧ್ಯಯನದ ದೃಷ್ಟಿಯಲ್ಲಿಯೂ ಈ ದಾಖಲೀಕರಣವು ಅಮೂಲ್ಯ ಆಕರವೆನಿಸಲಿದೆ. 

ಡಾ| ಅಶೋಕ ಆಳ್ವ

ಟಾಪ್ ನ್ಯೂಸ್

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.