ಲಲನೆಯರ ರಾಗ ರಸಧಾರೆ

Team Udayavani, Jul 7, 2017, 4:07 PM IST

KALA-4.jpg

ನಮ್ಮ ಕರಾವಳಿ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಯಕ್ಷಗಾನ ಮೇಳಗಳು ಮಳೆಗಾಲ ಆರಂಭವಾಗುತ್ತಿರುವಂತೆ, ಒಳಸರಿದವು. ಪ್ರಸ್ತುತ ಅಲ್ಲಲ್ಲಿ ತಾಳಮದ್ದಳೆ, ಯಕ್ಷನಾಟ್ಯ, ಗಾನ ವೈವಿಧ್ಯ ಬಿರುಸುಗೊಂಡಿವೆ. ಒಂದೆಡೆ ಹಳೆಯ ಶ್ರೇಷ್ಠ ಕಲೋಪಾಸಕರ ಆಳ ಅನುಭವದ ಅನಾವರಣವಾದರೆ, ಮತ್ತೆ ಕೆಲವೆಡೆ ಪ್ರಯತ್ನಶೀಲ ಎಳೆಯರೊಳಗಿನ ಕಲಾಪ್ರಭೆಯ ಪ್ರತಿಫ‌ಲನಕ್ಕೆ ಅವಕಾಶ ಸಂಪ್ರಾಪ್ತಿಯಾಗುತ್ತಿದೆ.

ಕಳೆದ ಜೂನ್‌ ತಿಂಗಳ 27ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಯಕ್ಷಗಾನದ ಹಾಡುಗಾರಿಕೆಯನ್ನು ಪ್ರಸ್ತುತಪಡಿಸಲಾಯಿತು. ಭಾಗವತರಾದ ಭವ್ಯಶ್ರೀ, ಅಮೃತಾ ಅಡಿಗ ಮತ್ತು ಕಾವ್ಯಶ್ರೀ ಕಾರ್ಯಕ್ರಮ ನಡೆಸಿಕೊಟ್ಟರು. ಈ ಯುವ ಭಾಗವತರ ಗಾನ ವೈಖರಿಯ ನಾಡಿಮಿಡಿತಕ್ಕೆ ಅನುಗುಣವಾಗಿ, ಉಜಿರೆ ಜನಾರ್ದನ ತೋಳ್ಪಾಡಿತ್ತಾಯರು ಪ್ರಬುದ್ಧವಾಗಿ ಮದ್ದಳೆ ನುಡಿಸಿದರು. ಚೆಂಡೆಯ ಅಬ್ಬರ ತಾಳದಲ್ಲಿ ಮಿಜಾರು ದೇವಾನಂದ ಭಟ್ಟರು ಸಾಥಿಯಾದರು. ಇವರಿಬ್ಬರ ಕೈಚಳಕದ ವಾದನ ಪ್ರಭಾವದಿಂದ ಗಾಯನದ ಭಾವ ಪ್ರತಿಬಿಂಬಿತವಾಯಿತು. 

“ಪಟ್ಟಾಭಿಷೇಕ’ ಪ್ರಸಂಗದ ಪನ್ನೀರ ರಾಮನಿಗೆ ಪಂಕಜಾಕ್ಷಿ ಯರೆರೆದು, “ಶ್ರೀಕೃಷ್ಣ ಸಂಧಾನ’ದ ಸಂಧಿಯೆ ಕಲಿಭೀಮ ನಿನಗಾ|ನಂದವೇ, “ಪಾದುಕಾ ಪ್ರದಾನ’ ಸನ್ನಿವೇಶದ ತ್ರಿವುಡೆ ತಾಳದಲ್ಲಿ ಬಂದೆಯಾ ಇನವಂಶ ವಾರಿಧಿ, “ಅತಿಕಾಯ ಕಾಳಗ’ದಲ್ಲಿ ಕಾಫಿ ರಾಗದ ಏತಕೆ ಮರುಳಾಹೆ ತಾತ, “ಕರ್ಣಪರ್ವ’ದ ಎಲವೋ ಸೂತನ ಮಗನೇ ಮತ್ತು ಅಗರಿ ಭಾಗವತರ “ಭರತೇಶ ವೈಭವ’ ಕೃತಿಯ ಕೆಲ ಹಾಡುಗಳನ್ನು ಆರಿಸಿಕೊಳ್ಳಲಾಗಿತ್ತು. ಭಾವ-ಸ್ವಭಾವವನ್ನರಿತ ಸು#ಟವಾದ ಸಾಹಿತ್ಯ, ಶ್ರುತಿ-ಲಯಶುದ್ಧಿ, ಪರಿಣಾಮ ಬೀರಿದ ಕಂಠಸಿರಿ, ಹೃದ್ಯವೆನಿಸಿದ ಪದ್ಯಗಳು ಕಾರ್ಯಕ್ರಮವನ್ನು ಚೆಂದಗೊಳಿಸಿದವು. ಸುಮಾರು ಮೂರು ತಾಸು ಅವಧಿಯ ಉತ್ತಮ ರಾಗ ರಸಧಾರೆ ಸೇರಿದ ಕಲಾಸಕ್ತರ ಮನಸೂರೆಗೊಳಿಸಿತು. ಈ ತರಳೆಯರು ತಮ್ಮ ಗಾಯನ ವಿದ್ಯೆಯನ್ನು ಮತ್ತಷ್ಟು ಹರಿತಗೊಳಿಸಲು ಉತ್ತೇಜಕವಾಯಿತು. ಕಥಾಭಾಗದ ಕುರಿತು ಅರ್ಥದಾರಿ ಹರೀಶ ಬೊಳಂತಿಮೊಗರು ವಿವರಣೆ ನೀಡಿದರು.

ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ (ರಿ.) ಬೆಳುವಾಯಿ ಇದರ ವಿಂಶತಿ ವರ್ಷ ನಿಮಿತ್ತ ಸರಣಿ -19ರಲ್ಲಿ ಸಂಯೋಜಿತ ಕಾರ್ಯಕ್ರಮವಾಗಿತ್ತು ಇದು. ಬಿ. ಯಶೋವರ್ಮ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಭಾಗವತರಾದ ಧರ್ಮಸ್ಥಳ ದಿವಾಕರ ಆಚಾರ್ಯರನ್ನು ಸಮ್ಮಾನಿಸಲಾಯಿತು. ಬಣ್ಣದ ವೇಷಧಾರಿ ಕೀರ್ತಿಶೇಷ ಕನ್ಯಾಡಿ ಜನಾರ್ದನ ರಾಯರನ್ನು ಸಂಸ್ಮರಿಸಲಾಯಿತು. ಕುದ್ರೆಂತ್ತಾಯ ಬಂಧುಗಳು, ಬಿ. ಭುಜಬಲಿ ಹಾಗೂ ಸ್ಥಳೀಯ ಸಂಘಟಕರು ಒಂದುಗೂಡಿ ಈ ಕಲಾಪ್ರಕ್ರಿಯೆಗೆ  ಹೆಗಲೆಣೆಯಾದರು. 

ಸುಬ್ರಹ್ಮಣ್ಯ ಬೈಪಾಡಿತ್ತಾಯ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.