ಯಕ್ಷಧ್ರುವ ಸಂಭ್ರಮದಲ್ಲಿ “ನಾರಾಯಣ’ರಿಗೆ ಅಗ್ರಪೂಜೆ!


Team Udayavani, Jun 22, 2018, 9:22 PM IST

b-11.jpg

ಪ್ರಖ್ಯಾತ ಭಾಗವತರಾದ ಸತೀಶ್‌ ಶೆಟ್ಟಿ ಪಟ್ಲ ಸ್ಥಾಪಕಾಧ್ಯಕ್ಷರಾಗಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್‌ ವತಿಯಿಂದ ಮಂಗಳೂರಿನ ಅಡ್ಯಾರ್‌ ಗಾರ್ಡನ್‌ನಲ್ಲಿ ಮೇ 27ರಂದು ಜರಗಿದ ಮೂರನೆಯ ವರ್ಷದ ಯಕ್ಷಧ್ರುವ ಪಟ್ಲ ಸಂಭ್ರಮ ಯಕ್ಷಗಾನದ ಇತಿಹಾಸಕ್ಕೆ ವಿಶಿಷ್ಟ ಅಧ್ಯಾಯವನ್ನು ಸೇರ್ಪಡೆಗೊಳಿಸಿತು. ಸತತ 16 ತಾಸುಗಳ ಕಾಲ ಯಕ್ಷಗಾನದ ಎಲ್ಲ ಸ್ವರೂಪಗಳ ಅಭಿವ್ಯಕ್ತಿಯಾಯಿತು. ಸಾಮಾಜಿಕವಾಗಿ ಪ್ರಸ್ತುತವಾದ ಸೇವಾ ಕಾರ್ಯಕ್ರಮಗಳೂ ನಡೆದವು.

ಮಹಿಳಾ ಕಲಾವಿದರು ಉತ್ಸುಕತೆಯಿಂದ ಭಾಗವಹಿಸಿದರು. ಬಾಲಕಿಯರು ಪ್ರದರ್ಶಿಸಿದ “ಪುಣ್ಯಕೋಟಿ’ ಕಥಾ ಪ್ರಸಂಗ ಉಲ್ಲೇಖನೀಯ. ಬಳಿಕ ಕಲಾವಿದೆಯರು ಶಶಿಪ್ರಭಾ ಪರಿಣಯ ಪ್ರಸಂಗ ಪ್ರಸ್ತುತಪಡಿಸಿದರು. ಮಂಗಳೂರು, ಸುರತ್ಕಲ್‌, ಕಳಸ, ಕಾರಿಂಜದ ಈ ಕಲಾವಿದೆಯರಿಗೆ ಪೂರ್ಣಿಮಾ ಯತೀಶ್‌ ರೈ ನಿರ್ದೇಶನ ನೀಡಿದ್ದರು.ಮುಂಬಯಿಯ ಸಾನ್ವಿ ಅವರು ಪಟ್ಲ ಅವರ ಹಾಡುಗಳಿಗೆ ಯಕ್ಷಗಾನ ನೃತ್ಯ ಪ್ರದರ್ಶಿಸಿದರು. ಅವರ ಜತೆಗೆ ಯಕ್ಷನರ್ತನಗೈದ ಎಳೆಯರು ಹೃದನ್‌ ಶೆಟ್ಟಿ ಪಟ್ಲ ಮತ್ತು ರಾಶಿ ಆರ್‌. ಪೂಂಜ. ಮುಂದಿನ ಕಾರ್ಯಕ್ರಮ “ಯಕ್ಷಮಿತ್ರರು ದುಬಾೖ’ ಮಕ್ಕಳ ತಂಡದವರ ಏಕಾದಶಿ ವ್ರತ ಮಹಾತ್ಮೆ. ಜತೆಯಲ್ಲಿ ಸ್ವತಃ ಪಟ್ಲ ಅವರೇ ಭಾಗವಹಿಸಿ ಮೆರುಗು ಹೆಚ್ಚಿಸಿದರು.

ಯಕ್ಷಧ್ರುವ ಪಟ್ಲ ಸಂಭ್ರಮಕ್ಕಿದು 3ನೇ ವರ್ಷ. ಸಹಜವಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಯ ತಾಳಮದ್ದಲೆ ಪ್ರಧಾನ ಆಕರ್ಷಣೆಗಳಲ್ಲೊಂದು. ಪ್ರಸಂಗ- ಅಗ್ರಪೂಜೆ. ಭಾಗವತರು- ದಿನೇಶ್‌ ಅಮ್ಮಣ್ಣಾಯ, ಸುಬ್ರಹ್ಮಣ್ಯ ಧಾರೇಶ್ವರ. ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ಭಟ್‌ ದೇಲಂತ ಮಜಲು, ಪರಮೇಶ್ವರ ಭಂಡಾರಿ ಗುಣವಂತೆ, ರಾಮಕೃಷ್ಣ ಮಂದಾರ್ತಿ, ಗುರುಪ್ರಸಾದ್‌ ಬೊಳಿಂಜಡ್ಕ. ಕಲಾವಿದರು: ಕುಂಬ್ಳೆ ಸುಂದರ ರಾವ್‌, ರಾಧಾಕೃಷ್ಣ ಕಲ್ಚಾರ್‌, ಕದ್ರಿ ನವನೀತ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಹರೀಶ್‌ ಬೊಳಂತಿಮೊಗರು, ಸದಾಶಿವ ಆಳ್ವ ತಲಪಾಡಿ.

ಅಂದಹಾಗೆ, ಪಾಂಡವರ ರಾಜಸೂಯ ಯಾಗದಲ್ಲಿ ಅಗ್ರಪೂಜೆ ಶ್ರೀಕೃಷ್ಣನಿಗೇ ಸಲ್ಲುತ್ತದೆ. ಅಂತೆಯೇ ಯಕ್ಷಧ್ರುವ ಪಟ್ಲ ಪ್ರತಿಷ್ಠಾನದ ಯಕ್ಷಸಂಭ್ರಮದ ಮೂರೂ ಆವೃತ್ತಿಗಳಲ್ಲಿ ಪ್ರತಿಷ್ಠೆಯ ಪಟ್ಲ ಪ್ರಶಸ್ತಿಯನ್ನು ಸ್ವೀಕರಿಸಿದವರು “ನಾರಾಯಣ’ರು! ಅಂದರೆ, ಮೂರು ಮಂದಿ ನಾರಾಯಣರು. ಮೊದಲ ವರ್ಷ- ಪೆರುವಾಯಿ ನಾರಾಯಣ ಶೆಟ್ಟಿ. ಎರಡನೆಯ ವರ್ಷ- ಬಲಿಪ ನಾರಾಯಣ ಭಾಗವತರು. ಈ ಬಾರಿ- ಡಾ| ಶಿಮಂತೂರು ನಾರಾಯಣ ಶೆಟ್ಟಿ!

ಪ್ರತಿಷ್ಠಾನವು ಯಕ್ಷಗಾನದ ಮತ್ತು ಯಕ್ಷ ಕಲಾವಿದರ ಸಂಬಂಧಿತ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪಟ್ಲ ಸತೀಶ್‌ ಶೆಟ್ಟಿ ಅವರು ಹೇಳುತ್ತಾರೆ: “ಮುಂದಿನ ಡಿಸೆಂಬರ್‌ನೊಳಗೆ ಎಲ್ಲ ಕಡೆಗಳಲ್ಲೂ ಪ್ರತಿಷ್ಠಾನದ ಘಟಕಗಳ ಸ್ಥಾಪನೆ ಪೂರ್ಣಗೊಳ್ಳಲಿದೆ. ಒಂದು ಲಕ್ಷ ಸದಸ್ಯರನ್ನು ನೋಂದಾಯಿಸಲಾಗುತ್ತದೆ. ಅಶಕ್ತ ಕಲಾವಿದರಿಗೆ ನೂರು ಮನೆಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ.

ಪಟ್ಲ ಭಾಗವತರ ಮೂರು ತಲೆಮಾರು ಕಲಾವಿದರಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸತೀಶರ ತಂದೆ ಪಟ್ಲ ಮಹಾಬಲ ಶೆಟ್ಟಿ ಅವರು ಚಕ್ರತಾಳದಲ್ಲಿ, ಯಕ್ಷಗಾನ ಪ್ರದರ್ಶನ ವೊಂದರಲ್ಲಿ ಸತೀಶರು ಭಾಗವತರಾಗಿ, ಎಳೆಯರ ಒಂದು ಪ್ರದರ್ಶನದಲ್ಲಿ ಸತೀಶರ ಪುತ್ರ ಹೃದನ್‌ ಶೆಟ್ಟಿ ಪಟ್ಲ ಅವರು ವೇಷಕಟ್ಟಿ ಕುಣಿದರು! ಪ್ರೇಕ್ಷಕರಾಗಿ 3 ತಲೆಮಾರಿನ ಅನೇಕ ಕುಟುಂಬಗಳವರು ಭಾಗವಹಿಸಿದ್ದು  ಉಲ್ಲೇಖನೀಯ.

 ಮನೋಹರ ಪ್ರಸಾದ್‌

ಟಾಪ್ ನ್ಯೂಸ್

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.