ಚಾವಡಿಯಲ್ಲಿ ರಸದೌತಣ ಉಣ ಬಡಿಸುವ ಚಿಕ್ಕಮೇಳ 


Team Udayavani, Jun 29, 2018, 6:00 AM IST

x-4.jpg

ಮಳೆಗಾಲದಲ್ಲಿ ತಿರುಗಾಟ ನಡೆಸುವ ಯಕ್ಷಗಾನ ಚಿಕ್ಕಮೇಳ ಎಂಬ ಕಲಾ ಪ್ರಭೇದ ವೃತ್ತಿ ಮೇಳಗಳ ವಿಶ್ರಾಂತಿಯಿಂದ ಉಂಟಾಗುವ ಶೂನ್ಯವನ್ನು ತುಂಬುವ ಕೆಲಸವನ್ನು ಸಮರ್ಥವಾಗಿ ಮಾಡುತ್ತಿವೆ. ಮುಮ್ಮೇಳ ಮತ್ತು ಹಿಮ್ಮೇಳದ ಕಲಾವಿದರು ಚಿಕ್ಕ ತಂಡವನ್ನು ಕಟ್ಟಿಕೊಂಡು ಪೌರಾಣಿಕ ಪ್ರಸಂಗಗಳ ತುಣುಕುಗಳನ್ನು ಮನೆ ಮನೆಗಳಲ್ಲಿ ಪ್ರದರ್ಶಿಸುತ್ತ ಕಲೆಗೊಂದು ಮರುಚೈತನ್ಯ ನೀಡುತ್ತಿದ್ದಾರೆ. 

ತಿರುಗಾಟದಲ್ಲಿ ಬದುಕು ಸಾಗಿಸುತ್ತಿದ್ದ ಕಲಾವಿದರುಗಳಿಗೆ ಮಳೆಗಾಲದಲ್ಲಿ ವಿಶ್ರಾಂತಿ ದೊರೆಯುತ್ತದೆ. ಪ್ರಸಿದ್ಧ ಕಲಾವಿದರು ತಂಡ ಕಟ್ಟಿಕೊಂಡು ಮಳೆಗಾಲದ ತಿರುಗಾಟವಾಗಿ ಮುಂಬಯಿ, ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದ್‌ ಮೊದಲಾದ ನಗರಗಳಿಗೆ ಹೋಗುತ್ತಾರೆ. ಇತ್ತ ಉದಯೋನ್ಮುಖ ಕಲಾವಿದರು ಚಿಕ್ಕಮೇಳವನ್ನು ಕಟ್ಟಿಕೊಂಡು ಊರಿನಲ್ಲಿ ತಿರುಗಾಟ ಮಾಡುತ್ತ ಕಲಾಸಕ್ತರ ಮನೆಯ ಅಂಗಳ, ಚಾವಡಿಯಲ್ಲಿ ಆಟ ಆಡುತ್ತಾರೆ. ಭಾಗವತರು, ಚಂಡೆ ವಾದಕರು, ಮದ್ದಳೆ ವಾದಕರು, ಸ್ತ್ರೀ ಮತ್ತು ಪುರುಷ ಪಾತ್ರಧಾರಿ ಹಾಗೂ ಪ್ರಚಾರಕರು ಚಿಕ್ಕಮೇಳದಲ್ಲಿ ಇರುತ್ತಾರೆ.

ಒಂದು ಮನೆಯಲ್ಲಿ ಚಿಕ್ಕಮೇಳದ ತಂಡ ಮನೆ ಮಂದಿ ಬೇಡಿಕೆಯಂತೆ 10 ರಿಂದ 15 ನಿಮಿಷಗಳ ಸಮಯ ಪ್ರದರ್ಶನ ನೀಡುತ್ತವೆ. ಸಂಜೆ 6 ಗಂಟೆಗೆ ಕಲಾಯಾಣ ಆರಂಭಗೊಂಡು ರಾತ್ರಿ ಹತ್ತು ಗಂಟೆ ಸುಮಾರಿಗೆ ದಿನದ ತಿರುಗಾಟವನ್ನು ಸಮಾಪನಗೊಳಿಸುತ್ತಾರೆ. ನಂತರ ಚಿಕ್ಕಮೇಳದ ಕಲಾವಿದರು ಊರಿನ ದೇವಸ್ಥಾನದಲ್ಲಿ ತಂಗುತ್ತಾರೆ. ಮರುದಿನ ಮತ್ತೂಂದು ಊರಿಗೆ ಚಿಕ್ಕಮೇಳದ ಪಯಣ ಸಾಗುತ್ತದೆ. ಸಂಜೆಯ ತಿರುಗಾಟಕ್ಕೆ ಹೊರಡುವ ಮೊದಲು ತಂಡದ ಸದಸ್ಯರು ಊರಿನ ಮನೆ ಮನೆಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿ ಚಿಕ್ಕಮೇಳ ಪ್ರದರ್ಶನದ ಸಂಪ್ರದಾಯ ಮತ್ತು ನಿಯಮಾವಳಿಗಳ ಕರಪತ್ರಗಳನ್ನು ಹಂಚುತ್ತಾರೆ. ಮೇಳ ಬರುವ ನಿಗದಿತ ಸಮಯ ಹೇಳಿ ಬರುತ್ತಾರೆ. ಮನೆ ಮಂದಿ ಚಿಕ್ಕಮೇಳದ ಗಣಪತಿ ದೇವರಿಗೆ ಅಕ್ಕಿ, ತೆಂಗಿನ ಕಾಯಿಯನ್ನು ಸಮರ್ಪಿಸಿ ಇಡುತ್ತಾರೆ.ಯಕ್ಷಗಾನವು ಬೆಳಕಿನ ಸೇವೆ ಎಂಬ ಗೌರವ ಇದ್ದ ಕಾರಣದಿಂದ ದೀಪ ಹಚ್ಚಿ ಇಡುತ್ತಾರೆ. ಮನೆಯ ಚಾವಡಿಯೇ ರಂಗಸ್ಥಳವಾಗಿ, ಮನೆ ಮಂದಿಯೇ ಪ್ರೇಕ್ಷಕರಾಗಿ ಯಕ್ಷಗಾನದ ಪ್ರಸಂಗದ ತುಣುಕನ್ನು ಸವಿಯುತ್ತಾರೆ. ಆಟ ಮುಗಿದ ಬಳಿಕ ಮನೆ ಯಜಮಾನ ನೀಡಿದ ಕಾಣಿಕೆಯನ್ನು ಪಡೆದು ಕಲಾವಿದರು ಮುಂದಿನ ಮನೆಗೆ ಸಾಗುತ್ತಾರೆ.

 ವೇಷಭೂಷಣದ ಬಾಡಿಗೆ, ತಿರುಗಾಡಲು ಬಳಸಿಕೊಂಡಿರುವ ವಾಹನದ ಬಾಡಿಗೆ ಎÇÉಾ ಕಳೆದು ಸ್ವಲ್ಪ ಹಣ ಕಲಾವಿದರುಗಳಿಗೆ ಉಳಿಯುತ್ತದೆ. ಚಿಕ್ಕಮೇಳದ ಮಳೆಗಾಲದ ತಿರುಗಾಟದಿಂದ ಕಲೆಯ ಪ್ರಚಾರವು ಆಗುವುದಲ್ಲದೆ, ಜನರಲ್ಲಿ ಕಲಾಸಕ್ತಿ ಮೂಡುಸುತ್ತಿದೆ. ವೃತ್ತಿ ವಿರಾಮದಲ್ಲಿ ಇರುವ ಕಲಾವಿದರ ಬದುಕೂ ಸಾಗುತ್ತದೆ. ಅಲ್ಲದೆ ಹೊಸ ಕಲಾವಿದರಿಗೆ ಕಲಾಭ್ಯಾಸವು ಆಗಲು ಚಿಕ್ಕಮೇಳ ರಂಗ ತಾಲೀಮು ಆಗಿದೆ. 

 ತಾರಾನಾಥ್‌ ಮೇಸ್ತ ಶಿರೂರು

ಟಾಪ್ ನ್ಯೂಸ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

16

Crime: ಸುಳ್ಯ ಭಾಗದ ಅಪರಾಧ ಸುದ್ದಿಗಳು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.