ಮನಗೆದ್ದ ಅಪರೂಪದ ಪ್ರಸಂಗ ಕವಿರತ್ನ ಕಾಳಿದಾಸ


Team Udayavani, Jul 27, 2018, 6:00 AM IST

9.jpg

ತೆಂಕಿನಲ್ಲಿ ಇಲ್ಲವೇ ಇಲ್ಲ ಎನ್ನಬಹುದಾದ, ಬಡಗಿನಲ್ಲೂ ಈಗ ಮರೆಯಾಗುತ್ತಿರುವ ಪ್ರಸಂಗ ಕಾಳಿದಾಸ. ಒಂದು ಕಾಲದಲ್ಲಿ ಚಿಟ್ಟಾಣಿ, ಧಾರೇಶ್ವರ, ಗುಡಿಗಾರರ ತಂಡದ ಅಡಿಯೋ ಕ್ಯಾಸೆಟ್‌ ಮೂಲಕ ಈ ಪ್ರಸಂಗ ಸೂಪರ್‌ ಹಿಟ್‌ ಆಗಿತ್ತು. ಅಂತಹ ಹಳೆಯ ವೈಭವದ ದಿನಗಳ ಮೆಲುಕು ಹಾಕಲು ರಾಜಾಂಗಣದ ಯಕ್ಷಗಾನ ಅವಕಾಶ ಮಾಡಿಕೊಟ್ಟಿತು.

ವಿದ್ಯೆ ಇದ್ದವರು ಎಲ್ಲ ಬುದ್ಧಿವಂತರಾಗಿರಬೇಕಿಲ್ಲ. ಬುದ್ಧಿವಂತರೆಲ್ಲ ವಿದ್ಯಾವಂತರಾಗಿರಬೇಕಿಲ್ಲ. ಎರಡೂ ಇದ್ದವರು ರೂಪವಂತರಾಗಿರಬೇಕಿಲ್ಲ. ಹೀಗಂತ ವಿವರಿಸಿದ್ದು ಕಲಾಧರ. 61ರ ಹರೆಯದ ತೀರ್ಥಹಳ್ಳಿ ಗೋಪಾಲಾಚಾರ್‌ ಅವರು ಕಲಾಧರನಾಗಿದ್ದರು. ರಾಜಕುವರಿ ವಿದ್ಯಾಧರೆಯನ್ನು (ವಂಡಾರು ಗೋವಿಂದ) ಮದುವೆಗೆ ಮುನ್ನ ಕೂಡುವ ಇಚ್ಛೆಯಿಂದ ಹೋದ ಮಂತ್ರಿ ಕುವರನ ಜತೆಗಿನ ಸರಸಮಯ ಸಂಭಾಷಣೆ ರಸಮಯವಾಗಿತ್ತು. ಅದಕ್ಕೊಪ್ಪದ ವಿದ್ಯಾಧರೆಯಿಂದ ಅವಮಾನಿತನಾದ ಕಲಾಧರ ಅಪ್ಪನಲ್ಲಿ (ನಾಕೋಡು ಉದಯ)ದೂರು ಹೇಳಿ ಮಂತ್ರಿ ಹುಡುಕುವ ಅವಿದ್ಯಾವಂತ ಕುರುಬ (ಶ್ರೀಧರ ಕಾಸರಕೋಡು) ತಾತ್ಕಾಲಿಕ ಪಂಡಿತನಾಗಿ ವಿದ್ಯಾಧರೆಯನ್ನು ವರಿಸುತ್ತಾನೆ. ಮದುವೆ ದಿನ ರಾತ್ರಿ ವಂಚನೆ ಅರಿತ ವಿದ್ಯಾಧರೆಯ ಕಾಳಿಯ ಉಪಾಸನೆ ಮಾಡುವಂತೆ ಪತಿಗೆ ನೀಡಿದ ಸಲಹೆಯಂತೆ ಪ್ರಾರ್ಥಿಸಿ ಕಾಳಿ ಪ್ರತ್ಯಕ್ಷವಾಗಿ ನಾಲಿಗೆಯಲ್ಲಿ ಬೀಜಾಕ್ಷರ ಬರೆದು ಕಾಳಿದಾಸ ಎಂದು ಪ್ರಖ್ಯಾತನಾಗುವುದು ಕಥಾ ಹಂದರ. 

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಜು.22ರ ರಾತ್ರಿ ನಡೆದ ಕಡತೋಕ ಮಂಜುನಾಥ ಭಾಗವತ ವಿರಚಿತ ಕವಿರತ್ನ ಕಾಳಿದಾಸ ಯಕ್ಷಗಾನ ಪ್ರಸಂಗ ಪ್ರೇಕ್ಷಕ ಸಂದೋಹಕ್ಕೆ ಮನರಂಜನೆ ಜತೆಗೆ ಭಾವಪೂರ್ಣ ಅಭಿನಯ, ಹಾಡುಗಾರಿಕೆ ಆಸ್ವಾದನೆಗೆ ಅವಕಾಶ ನೀಡಿತು. ಪರ್ಯಾಯ ಪಲಿಮಾರು ಮಠ, ಶೀ ಕೃಷ್ಣ ಮಠ, ತಲ್ಲೂರ್ಸ್‌ ಫ್ಯಾಮಿಲಿ ಟ್ರಸ್ಟ್‌, ಲಯನ್ಸ್‌ ಸಂಸ್ಥೆ ಸಹಯೋಗದಲ್ಲಿ ಧಾರೇಶ್ವರ ಯಕ್ಷಬಳಗ ಟ್ರಸ್ಟ್‌ ಕಿರಿಮಂಜೇಶ್ವರ ಸಂಯೋಜನೆಯಲ್ಲಿ ಮೂರನೇ ವರ್ಷದ ಯಕ್ಷ ಅಷ್ಟಾಹ ಅಂಗವಾಗಿ ಎಂಟು ಪ್ರಸಂಗಗಳ ಆಯೋಜನೆ. 

ತೆಂಕಿನಲ್ಲಿ ಇಲ್ಲವೇ ಇಲ್ಲ ಎನ್ನಬಹುದಾದ, ಬಡಗಿನಲ್ಲೂ ಈಚಿನ ದಿನಗಳಲ್ಲಿ ಮರೆಯಾಗುತ್ತಿರುವ ಪ್ರಸಂಗ ಕಾಳಿದಾಸ. ಒಂದು ಕಾಲದಲ್ಲಿ ಚಿಟ್ಟಾಣಿ, ಧಾರೇಶ್ವರ, ಗುಡಿಗಾರರ ತಂಡದ ಅಡಿಯೋ ಕ್ಯಾಸೆಟ್‌ ಮೂಲಕ ಈ ಪ್ರಸಂಗ ಸೂಪರ್‌ ಹಿಟ್‌ ಆಗಿತ್ತು. ಅಂತಹ ಹಳೆಯ ವೈಭವದ ದಿನಗಳ ಮೆಲುಕು ಹಾಕಲು ರಾಜಾಂಗಣದ ಯಕ್ಷಗಾನ ಅವಕಾಶ ಮಾಡಿಕೊಟ್ಟಿತು. ಸುಬ್ರಹ್ಮಣ್ಯ ಧಾರೇಶ್ವರರ ಹಳೆಯ ಪದ್ಯಗಳ ನೆನಪು ಆರಂಭವಾದದ್ದು “ಕುರುಬರೆಲ್ಲರು ಸೇರುವ ಕುರಿಮಂದೆ ಕಾಯುವ ಹೇ ಕಾಳಪ್ಪ, ಮುಕ್ಕಣ್ಣನೆಲ್ಲರೂ ಕೊಂಡಾಡಿರೋ’ ಎಂದು ಕುರುಬನ ಪ್ರವೇಶದಿಂದಲೇ. ಅಲ್ಲಿವರೆಗೆ ಅವರ ಬದಲಾದ ಶೈಲಿಯ ಭಾಗವತಿಕೆಯೇ ಇತ್ತು. ವಿದ್ಯಾಧರೆಯ “ವೇದ ಶಾಸ್ತ್ರಂಗಳಲಿ ಧೀರತೆಯಿಂದ ವಾದಿಸಿ ಗೆಲುವವಗೆ’ ಎಂಬ ಪದ್ಯ, “ವರ ಮನೋಹರೆ ಬಳಿಗೆ ನೀ ಬಾರೆ’ , “ಅಳಬೇಡ ಕಣೇ ಸುಮ್ಕಿರೆ ಎಲಾ ಹೆಂಡ್ರೆ . . ‘ ಮೊದಲಾದ ಪದ್ಯಗಳು ಪ್ರೇಕ್ಷಕರಿಂದ ಅಪೂರ್ವ ಕರತಾಡನಕ್ಕೆ ಸಾಕ್ಷಿಯಾಯಿತು. 

ತೀರ್ಥಹಳ್ಳಿಯವರ ಕಲಾಧರ ಇಡೀ ಪ್ರಸಂಗದ ಹೈಲೈಟ್‌ ಆಗಿದ್ದರೆ ಅದಕ್ಕೆ ಪೂರಕವಾದ ಉತ್ತಮ ಸಾಹಚರ್ಯ ನೀಡಿದ್ದು ವಂಡಾರು ಗೋವಿಂದರ ವಿದ್ಯಾಧರೆ. ಅವರಿಬ್ಬರ ಸಂಭಾಷಣೆ, ನೃತ್ಯ ಸಮಯೋಚಿತ. ಎಲ್ಲೆ ಮೀರದ ಚೌಕಟ್ಟಿನಲ್ಲಿಯೇ ಶೃಂಗಾರವನ್ನು ಅಭಿನಯಿಸಿದ್ದು ಅನನ್ಯವಾಗಿತ್ತು. ನಾಕೋಡು ಉದಯರ ಮಂತ್ರಿ, ಶ್ರೀಧರ ಕಾಸರಕೋಡು ಅವರ ಕಾಳಿದಾಸ ಒಟ್ಟು ಪ್ರಸಂಗವನ್ನು ಅಮೋಘವಾಗಿಸಿತು. ಕುರುಬನ ಪ್ರವೇಶದ ಬಳಿಕ ಮಂತ್ರಿಯ ಪ್ರವೇಶದವರೆಗಿನ ಹಾಸ್ಯ ಸ್ವಲ್ಪ ಮಟ್ಟಿಗೆ ಸಮಯ ಕೊಲ್ಲುವಂತೆ ಕಂಡರೂ ಮಂತ್ರಿಯ ಜತೆಗೆ ಅರಮನೆ ಪ್ರವೇಶವಾದ ಬಳಿಕ ಪ್ರಸಂಗಕ್ಕೆ ಉತ್ತಮ ಓಘ ಕಾಣಸಿಕ್ಕಿತು. ಬೊಳ್ಗೆರೆ ಹಾಗೂ ಶಿವಾನಂದ ಕೋಟ ಅವರ ಹಿಮ್ಮೇಳವಿತ್ತು. 

ಲಕ್ಷ್ಮೀ ಮಚ್ಚಿನ 

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.