ಸ್ನೇಹ ಎಂಬ ಸಮ್ಯಕ್‌ ಬಂಧ 


Team Udayavani, Aug 3, 2018, 6:00 AM IST

18.jpg

ಮಾನವನನ್ನು ಸೃಷ್ಟಿ ಮಾಡಿದ ದೇವರು ಪ್ರೀತಿ, ಸ್ನೇಹ, ಕರುಣೆ, ಮಮಕಾರ, ದಯೆಗಳನ್ನು  ಕೂಡ ಜಗತ್ತಿನಲ್ಲಿ ಮೂಡಿಸಿದ್ದಾನೆ. ಮನುಷ್ಯನಲ್ಲಿ ಅವು ಪ್ರತಿಫ‌ಲನಗೊಂಡಿವೆ. ದೇವರ ಸೃಷ್ಟಿಯೆಂದು ಸಮಗ್ರವಾಗಿ ಕರೆಯುವುದು ಇದನ್ನೇ. ಅದರಲ್ಲಿಯೂ ಸ್ನೇಹದ ಸೊಗಸೇ ಬೇರೆ.

ಸ್ನೇಹಕ್ಕೆ ರಕ್ತ ಸಂಬಂಧದ ಆವಶ್ಯಕತೆ ಇಲ್ಲ. ಜಾತಿ, ಕುಲ, ಮತ, ಧರ್ಮಗಳ ಅರಿವಿಲ್ಲ. ಭಾರತವನ್ನು ಹೇಗೆ ನಾವು ಜಾತ್ಯಾತೀತ ರಾಷ್ಟ್ರವೆಂದು ಕರೆಯುತ್ತೇವೆಯೋ ಅದಕ್ಕೆ ಪೂರಕವಾಗಿ ಸ್ನೇಹ ಎಂಬುದು ಜಾತ್ಯತೀತವಾದ ಒಂದು ಸಂಬಂಧ. ಸ್ನೇಹದಿಂದಾಗಿ ಜಾತಿಬೇಧ ಮುರಿದು ಬೀಳುತ್ತದೆ. ಧರ್ಮಗಳ ಅಂತರ ತಪ್ಪಿಹೋಗುತ್ತದೆ. ಸ್ನೇಹಕ್ಕೆ ಸಿರಿವಂತಿಕೆ ಅಡ್ಡಿಯಲ್ಲ , ಬಡತನ ತೊಡಕಲ್ಲ. ವಯಸ್ಸಿನ ಮಿತಿಯೂ ಇಲ್ಲ.  ಹುಡುಗ-ಹುಡುಗಿ ಎಂಬ ಲಿಂಗಭೇದದ ಸಮಸ್ಯೆ ಇಲ್ಲ. ಎಲ್ಲರೂ ಒಂದೇ ಎಂಬ ಭಾವನೆ ಸ್ನೇಹ ಭಾವದ ಆಂತರ್ಯದಲ್ಲಿರುತ್ತದೆ.

ವಿದ್ಯಾರ್ಥಿ ಜೀವನವಂತೂ ಸ್ನೇಹಾಚಾರದ ಸುವರ್ಣಕಾಲ. ಇಡೀ ಪ್ರಪಂಚವನ್ನೇ ತನ್ನತ್ತ ಸೆಳೆಯುವ ಶಕ್ತಿಯನ್ನು ಸ್ನೇಹಭಾವ ಹೊಂದಿದೆ. ಸ್ನೇಹಜೀವಿಗೆ ಎಂದಿಗೂ ಪರಕೀಯವಾದ ಭಾವವಿಲ್ಲ. ಪ್ರತಿಯೊಂದು ಮಗುವು ತಾನು ವಿದ್ಯಾಭ್ಯಾಸವನ್ನು  ಕಲಿಯಲೆಂದು ಶಾಲೆಗೆ ಹೋದಾಗ ಅಲ್ಲಿ ತನ್ನ ವಿದ್ಯಾಭ್ಯಾಸದ ಜೊತೆಗೆ ಸ್ನೇಹ, ಪ್ರೀತಿ, ಕರುಣೆ, ದಯೆಯಂತಹ ಎಲ್ಲ ಗುಣಗಳನ್ನು ಕಲಿತುಕೊಳ್ಳುತ್ತದೆ. ಒಳ್ಳೆಯ ಸ್ನೇಹಿತರನ್ನು ಹೊಂದಬೇಕು ಎಂಬ ಭಾವವನ್ನು ಹೊಂದುತ್ತದೆ.

ಇನ್ನು ಕಾಲೇಜು ಜೀವನದಲ್ಲಂತೂ ಸ್ನೇಹವೆಂಬುದು ಹಾಯಿದೋಣಿಯಂತೆ. ಸ್ನೇಹಿತರೆಲ್ಲ ಗುಂಪು ಗುಂಪುಗಳಾಗಿ ಓಡಾಡುತ್ತಾರೆ, ಹೊಟೇಲ…ಗಳಿಗೆ  ಹೋಗುತ್ತಾರೆ, ಸಿನೆಮಾ ನೋಡುತ್ತಾರೆ, ಬೈಕ್‌ ರೈಡ್‌ ಮಾಡುತ್ತಾರೆ, ಫ‌ುಟ್‌ಪಾತ್‌ ಅಂಗಡಿಗಳ ಮುಂದೆ ಕುಳಿತು ತಿನ್ನುವುದು- ಇವೆಲ್ಲವೂ ಕ್ಯಾಂಪಸ್‌ ಕಥೆಗಳಂತೆ ಮುಂದುವರೆಯುತ್ತದೆ. ಈ ಸ್ನೇಹ ಕೆಲವೊಮ್ಮೆ ಪ್ರೀತಿಯೆಂಬ ನದಿಯಾಗಿ ಬದಲಾಗುತ್ತದೆ. ಸ್ನೇಹ ವಿಶಾಲವಾದ ಸಮುದ್ರವಾಗಿದ್ದರೆ, ಪ್ರೀತಿ ಆ ಸಮುದ್ರವನ್ನು ಸೇರುವ ನದಿಯಾಗಿರುತ್ತದೆ. ಸ್ನೇಹ-ಪ್ರೀತಿ ಎರಡೂ ನಮ್ಮ ಕಣ್ಣುಗಳು.

ಪ್ರೀತಿಯಲ್ಲಿ ವಿರಸ, ಅನುಮಾನ, ಅವಮಾನಗಳು ಸಾಮಾನ್ಯ. ಕೆಲವೊಮ್ಮೆ ಇದು ಜಗಳಕ್ಕೂ ಕಾರಣವಾಗುತ್ತದೆ. ಆದರೆ, ಯುವಜೀವನದ ವಿರಸ ತಾತ್ಕಾಲಿಕ. ಮತ್ತೆ ಅದು ಸಂಧಾನದಲ್ಲಿ  ಮುಗಿಯುತ್ತದೆ. ಕಾಲೇಜು ಮುಗಿಸಿ ಡಿಗ್ರಿ ವಿದ್ಯಾಭ್ಯಾಸಕ್ಕೆ ಹೋಗುವಾಗ ಸ್ನೇಹಿತರೊಳಗೆ ಫೋನ್‌ ನಂಬರ್‌ಗಳು ವಿನಿಮಯಗೊಳ್ಳುತ್ತವೆ. ಬಳಿಕ ದಿನನಿತ್ಯ ಚಾಟಿಂಗ್‌ ಸಹ ಆರಂಭವಾಗುತ್ತದೆ.

 ಜಗತ್ತಿನಲ್ಲಿ ನಿಜ ಸ್ನೇಹವೆಂಬ ಸಿಹಿತಿಂಡಿ ಸಿಕ್ಕರೆ ಈ ಜಗತ್ತು ಸಕ್ಕರೆಯ ಪಾಕದಲ್ಲಿಟ್ಟ ಜಾಮೂನಿನ ಹಾಗೇಯೇ ಸಿಹಿಯಾಗಿ ಇರುತ್ತದೆ. ಈ ಸ್ನೇಹ ಎಂಬ ತಂಗಾಳಿಗೆ ಯಾವ ರೂಪವೂ ಇಲ್ಲ ! 

ಎ. ಸಿ. ಶೋಭಾ
ಪತ್ರಿಕೋದ್ಯಮ ವಿದ್ಯಾರ್ಥಿನಿ, ಎಂ.ಪಿ.ಎಂ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಕಳ

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.